LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಭವಿಷ್ಯದ ಸಂರಕ್ಷಣೆ : ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿ


ಘಟಪ್ರಭಾ,ಜೂ,೦೬ : ನಮ್ಮ ಹಿಂದಿನ ಹಿರಿಯರು ಎಷ್ಟೆಲ್ಲಾ ಚಳುವಳಿಗಳನ್ನು ಮಾಡಿ ಪರಿಸರ ಸಂರಕ್ಷಣೆಯನ್ನು ಮಾಡಿದ್ದರು, ಇಂದು ನಾವೆಲ್ಲಾರು ಅವರು ಮಾಡಿದಂತ ಚಳುವಳಿಗಳನ್ನು ಮಾಡುವ ಅಗತ್ಯತೆ ಇಲ್ಲ ಆದರೆ ಅವರು ಉಳಿಸಿ ಬೆಳೆಸಿದ ಪರಿಸರವನ್ನು  ಸಂರಕ್ಷಣೆ ಮಾಡಿದರೆ ಸಾಕಾಗುತ್ತದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಭವಿಷ್ಯದ ಸಂರಕ್ಷಣೆ ಮಾಡಿದಂತೆ ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಅವರು ಮಲ್ಲಾಪೂರ ಪಿ.ಜಿ ಸರಕಾರಿ ಪ್ರೌಢಶಾಲೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಕಾರ್ಯಲಯ ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಮನಮೋಹತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ಹಿಂದೆ ಬಿಷ್ಣೋಯ್ ಚಳುವಳಿ, ಚಿಪ್ಕೋ ಚಳುವಳಿ, ಸೈಟೆಂಟ್ ವ್ಯಾಲಿ ಚಳುವಳಿ, ನರ್ಮದಾ ಬಚಾಮೋ ಆಂದೋಲನ, ಜಂಗಲ್ ಬಚಾಮೋ ಆಂದೋಲನಾ, ಅಪ್ಪಿಕೋ ಚಳುವಳಿ ಅಂತಹ ಹಲವಾರು ಚಳುವಳಿಗಳನ್ನು ನಡೆಸಿ ಪರಿಸರವನ್ನು ಸಂರಕ್ಷಣೆ ಮಾಡಿದ್ದಾರೆ. ಪರಿಸರ ಸಂರಕ್ಷಣೆ ನಮ್ಮೆಲ್ಲಾರ ಕರ್ತವ್ಯ, ದೇಶದಲ್ಲಿ ಕರೋನಾ ಬಂದಾಗ ಆಕ್ಸಿಜನ್ ಸಿಗದೆ ಎಷ್ಟೋ ಜನರು ಪ್ರಾಣ ಕಳೆದುಕೊಂಡರು ದೇವರು ನಮಗೆ ಎಲ್ಲಾವನ್ನು ನೀಡಿದರು ಯಾವುದೇ ಶುಲ್ಕವನ್ನು ವಿದಿಸುವುದಿಲ್ಲ. ಒಂದು ಮರ ಕಡಿಯುವ ಸಂದರ್ಭ ಬಂದರೆ ಹತ್ತು ಸಸಿಗಳನ್ನು ನೆಡಬೇಕು ವಿಶ್ವ ಪರಿಸರ ದಿನಾಚರಣೆ ಅಂದರೆ ಕೇವಲ ಗಿಡ ಹಚ್ಚಲಕ್ಕೆ ಮಾತ್ರ ಸೀಮಿತವಲ್ಲ ನೀರಿನ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ ಬಳಕೆ ನಿಯಂತ್ರಣ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. 
       ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಮ್.ಎಸ್.ಪಾಟೀಲ, ಹಿರಿಯ ಮುಖಂಡರಾದ ಡಿ.ಎಮ್.ದಳವಾಯಿ, ಕಾಡಪ್ಪ ಕರೋಶಿ, ಈರಣ್ಣ ಕಲಕುಟಗಿ, ಮುಖ್ಯೋಪಾಧ್ಯಯರಾದ ಅಶೋಕ ಮಲಬನ್ನವರ, ಸುರೇಶ ಪೂಜಾರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಮಲ್ಲು ಕೋಳಿ, ಶ್ರೀಕಾಂತ ಮಹಾಜನ, ಅಪ್ಪಸಾಬ ಮುಲ್ಲಾ, ಲಕ್ಷ್ಮಣ ಮೇತ್ರಿ ಹಾಗೂ ಪುರಸಭೆ ಸಿಬ್ಬಂದಿ ಮತ್ತು ಶಿಕ್ಷಕರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್