LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕೆಇಬಿ ಖಾಸಗಿ ಕರಣ ಸಂಚು ವಿರೋಧಿಸಿ ಪ್ರತಿಭಟನೆ

ಜಮಖಂಡಿ;ಸರ್ಕಾರಿ ಸೌಮ್ಯದ ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮವನ್ನು ಖಾಸಗಿ ಕರಣ ಗೊಳಿಸುವ ಹುನ್ನಾರವನ್ನು ಖಂಡಿಸಿ ರೈತಸಂಘ, ಕೆಇಬಿ ಗುತ್ತಿಗೆದಾರರ ಸಂಘ, ನಿವೃತ್ತ ನೌಕರರ ಸಂಘ,ಹಾಗೂ ಸಿಬ್ಬಂದಿಗಳು ಗುರುವಾರ ಕಇಬಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಉಚಿತ ವಿದ್ಯುತ್‌ ಯೋಜನೆಗಳ ತಡೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸಂಪರ್ಕವನ್ನು ಕಡಿತ ಗೊಳಿಸಿ ರೈತರು ಹಾಗೂ ಸಾರ್ವಜನಿಕರಿಗೆ ಹೊರೆ ಉಂಟು ಮಾಡುವ ಉದ್ದೇಶ ದಿಂದ ,ಟಾಟಾ ಪವರಗೆ ಕಂಪನಿಗೆ ವಹಿಸಲು ಹುನ್ನಾರ ನಡೆದಿರುವದನ್ನು ವಿಫಲ ಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಸಲ್ಲಿಸಲಾಯಿತು. ಕೆಇಆರ್‌ಸಿಗೆ ಆಕ್ಷೆಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸರ್ಕಾರಿ ಕಂಪನಿಗಳಿದ್ದರೂ ಟಾಟಾ ಪವರ ಪರವಾಗಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಯೋಜನೆ ರದ್ದು ಗೊಳಿಸಲು ಸಂಚು ನಡೆದಿದ್ದು ಎಲ್ಲ ರೈತರು 23.6.26 ರ ಒಳಗಾಗಿ ಆಕ್ಷೆಪಣೆಗಳನ್ನು ಸಲ್ಲಿಸುವಂತೆ ಮನವಿ ಸಲ್ಲಿಸಲಾಯಿತು. ಕೆಇಬಿಯ ಕಾರ್ಯಪಾಲಕ ಅಭಿಯಂತರ ಎಂ.ಎನ್‌ ಚನಗೊಂಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಕೆ.ಹಿಪ್ಪರಗಿ, ಕಾರ್ಯಪಾಲಕ ಅಭಿಯಂತರ ವಿಶಾಲ ದರೆಪ್ಪಗೋಳ, ಎಸ್‌.ಜಿ.ಆಳಬಾಳ ಪ್ರಭು ದೇಸಾಯಿ, ಕಾರ್ಮಿಕ ಸಂಘದ ನಾಯಕ ಎಸ್‌.ಎಸ್‌.ಗಡ್ಡಿ, ಮಳಿಯಪ್ಪ ಸೊನ್ನದ, ಚಂದ್ರಗುಒ್ತ ಬೆಳಗಲಿ, ರೈತ ಸಂಘದ ಶ್ರೀಶೈಲ ಭೂಮಾರ, ಸಿದ್ಧನಗೌಡ ಪಾಟೀಲ, ರಾಜು ಆಲಗೂರ, ಬಾಹುಬಲಿ ನ್ಯಾಮಗೌಡ, ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ, ಶ್ರೀಶೈಲ ಮೈಗೂರ ಸಿದ್ದರಾಯ ಚವರಿ ಮುಂತಾದವರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್