LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ : ಸರಕಾರದ ನೀತಿಗೆ ರೈತರ ಆಕ್ರೋಶ

ಘಟಪ್ರಭಾ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡಲು ರಾಜ್ಯ ಸರಕರ ಪ್ರಯತ್ನಿಸುತ್ತಿತುವುದನ್ನು ವಿರೋಧಿಸಿ ಘಟಪ್ರಭಾ ಮೃತ್ಯುಂಜಯ ಸರ್ಕಲ್‌ನಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ, ಕನ್ನಡಪರ ಸಂಘಟನೆ ಮತ್ತು ದಲಿತ ಪರ ಸಂಘಟನೆಗಳು ಮಂಗಳವಾರ ದಂದು ಸೇರಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
     ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗೇರ ಮಾತನಾಡಿ ರಾಜ್ಯ ಸರಕಾರ ಪ್ರತಿಯೊಂದು ಇಲಾಖೆಯನ್ನು ಖಾಸಗೀಕರಣ ಮಾಡಿ ಜನಸಾಮಾನ್ಯರ ಮೇಲೆ ಬಾರ ಹಾಕುತ್ತಿದೆ ಈಗಾಗಲೇ ಸಾರಿಗೆ ಇಲಾಖೆಯ ಖಾಸಗೀಕರಣ ಮಾಡಿದೆ ಈಗ ರೈತರ ಜತೆ ನೇರ ಸಂಪರ್ಕ ಹೊಂದಿರುವ ವಿದ್ಯುತ್ ಇಲಾಖೆಯನ್ನು ಟಾಟಾ ಪವರ್ ಕಂಪನಿಗೆ ಕೊಡುವ ಪ್ರಯತ್ನ ನಡೆದಿದೆ. ಈಗಾಗಲೇ ನಗರ ಪ್ರದೇಶದಲ್ಲಿ ಖಾಸಗಿಯವರೆ ನಿಯಂತ್ರಣ ಮಾಡುತ್ತಿದ್ದಾರೆ. ವಿದ್ಯುತ್ ಖಾಸಗೀಕರಣವಾದರೆ ರೈತರು ತಮ್ಮ ಸಮಸ್ಯೆಯನ್ನು ಯಾರ ಜೊತೆ ಹೇಳಿಕೊಳ್ಳಬೇಕು ಸರಕಾರದ ಹಿಡಿತದಲ್ಲಿರುವ ವಿದ್ಯುತ್ ಪ್ರಸರಣಾ ನಿಗಮ ರಾಜ್ಯದಲ್ಲಿ ಜನಪರ, ರೈತಪರ, ಕೈಗಾರಿಕಾ ಅಭಿವೃದ್ಧಿ, ಗ್ರಾಮೀಣ ವಿದ್ಯುತ್ ಕರಣ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ ಇದೇ ಅಲ್ಲದೆ ಹಲವಾರು ಕಲ್ಯಾಣ ಯೋಜನೆಗಳು ಯಶ್ವಸಿಯಾಗಿ ನಡೆಯುತ್ತಿದೆ ಖಾಸಗಿಯಾದರೆ ರೈತರಿಗೆ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ನಾವು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 
ಕನ್ನಡಪರ ಸಂಘಟನೆಯ ಒಕ್ಕೂಟ ಅಧ್ಯಕ್ಷ ಕೆಂಪಣ್ಣ ಚೌಕಾಶಿ, ದಲಿತಪರ ಸಂಘಟನೆಯ ಮುಖಂಡರು, ಹಲವಾರು ರೈತ ಮುಖಂಡರು ಸರಕಾರದ ನೀತಿಯನ್ನು ವಿರೋಧಿಸಿ ಮಾತನಾಡಿದರು. 
ಎರಡು ಗಂಟೆ ರಸ್ತೆ ತಡೆ ಪರದಾಡಿದ ಸಾರ್ವಜನಿಕರು: ಘಟಪ್ರಭಾ ಮೃತ್ಯಂಜಯ ಸರ್ಕಲ್‌ನಲ್ಲಿ ರೈತರು ಬೆಳಿಗ್ಗೆ ೧೧.೩೦ ರಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರಿಂದ ಸಾರ್ವಜನಿಕರು, ವಾಹನಸವಾರರು ಪರದಾಡಬೇಕಾಯಿತು. ಪ್ರಾರಂಭದಲ್ಲಿ ಪ್ರತಿಭಟನೆ ಮಾಡಿ ಮನವಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು ಆದರೆ ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳೆ ಬರಬೇಕು ಅಲ್ಲಿ ತನಕ ಮನವಿ ನೀಡುವುದಿಲ್ಲವೆಂದು ಹಠ ಹಿಡಿದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿದ್ದ ತಾಲೂಕಾ ದಂಡಾಧಿಕಾರಿಗಳು, ಘಟಪ್ರಭಾ ಠಾಣೆಯ ಪಿಐ ಎಚ್.ಡಿ.ಮುಲ್ಲಾ ಎಲ್ಲಾರು ಮನವಿ ಮಾಡಿದರು ರೈತರು ಕೇಳಲಿಲ್ಲ ನಮ್ಮನ್ನು ಬಂಧಿಸುವ ತನಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ಕುಳಿತುಕೊಂಡರು ೧.೩೦ರ ಸುಮಾರಿಗೆ ಮೇಲಾಧಿಕಾರಿಗಳು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಮಾಡಿದ ನಂತರ ರೈತರು ಸ್ಥಳದಲ್ಲಿದ್ದ ಗೋಕಾಕ ತಾಲೂಕಾ ದಂಡಾಧಿಕಾರಿ ಡಾ|| ಮೋಹನ ಭಸ್ಮೆ, ಘಟಪ್ರಭಾ ಠಾಣೆ ಪಿಐ ಎಚ್.ಡಿ.ಮುಲ್ಲಾ, ಮೂಡಲಗಿ ಸರ್ಕಲ್ ಇನ್ಸ್‌ಪೆಕ್ಟರ ಶ್ರೀಶೈಲ ಬ್ಯಾಕೂಡ ಅವರಿಗೆ ಮನವಿ ಸಲ್ಲಿಸಿ ನಿರ್ಗಮಿಸಿದರು. ಎರಡು ಗಂಟೆ ರಸ್ತೆ ತಡೆಯಾಗಿದ್ದರಿಂದ ಘಟಪ್ರಭಾದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್