ಬಳ್ಳಾರಿ,ಜು.23: Ä ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಹರಿಯಾಣದಲ್ಲಿ ನಡೆದ ರೈತ ಹೋರಾಟಗಾರರ ಬಂಧನವನ್ನು ಖಂಡಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ ಮಾತನಾಡುತ್ತಾ, ಜುಲೈ ೨೨ ರಂದು Sಏಒ ಮತ್ತು ಂIಏಏಒS ಆಯೋಜಿಸಿದ್ದ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧದ ಪ್ರತಿಭಟನೆಯನ್ನು ವಿಫಲಗೊಳಿಸಲು, ಹರಿಯಾಣ ರಾಜ್ಯದ ಪೊಲೀಸರು ಂIಏಏಒS ನ ಹರಿಯಾಣ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಈಶ್ವರ್ ಸಿಂಗ್ ದಹಿಯಾ ಅವರನ್ನು ಬಂಧಿಸಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರದ ಈ ಹೇಯ ಕೃತ್ಯವನ್ನು ಎ ಐ ಕೆ ಕೆ ಎಂ ಎಸ್ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ.
ಕೇAದ್ರ ಸರ್ಕಾರ ಅಮೆರಿಕಾದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಅಲ್ಲಿನ ಕೃಷಿ ಉತ್ಪನ್ನಗಳು ಅತೀ ಕಡಿಮೆ ಬೆಲೆಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿ, ಇಲ್ಲಿನ ರೈತರ ಬೆಳೆಗೆ ಸಿಗಬೇಕಾದ ಬೆಲೆ ಸಿಗದೆ, ರೈತರು ಸಂಪೂರ್ಣವಾಗಿ ನಷ್ಟಕ್ಕಿಡಾಗುತ್ತಾರೆ, ಈ ರೀತಿ ರೈತರಿಗೆ ನಷ್ಟ ತರುವ ಈ ಭಾರತ ಅಮೇರಿಕಾ ಒಪ್ಪಂದದ ವಿರುದ್ಧ ಇಂದು ನಡೆಯಬೇಕಾಗಿದ್ದ ಬೃಹತ್ ಹೋರಾಟವನ್ನು ಸರ್ಕಾರ ಹತ್ತಿಕ್ಕಲು ಹೋರಾಟಗಾರರನ್ನು ಬಂಧಿಸಲು ಮುಂದಾದಲ್ಲಿ, ಇದರ ವಿರುದ್ಧ ಇನ್ನು ಬಲಿಷ್ಠ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಆದ್ದರಿಂದ
ಈ ಕೂಡಲೇ ಹರಿಯಾಣದಲ್ಲಿ ಬಂಧಿಸಿರುವ ರೈತ ಹೋರಾಟಗಾರ ಈಶ್ವರ್ ಸಿಂಗ್ ದಹಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಂಘದ ರಾಜ್ಯ ಮುಖಂಡರಾದ ಈ.ಹನುಮಂತಪ್ಪ, ಸದಸ್ಯರಾದ ಸಂತೋಷ್, ಮೊಹಮದ್ ರಫಿ ರೈತರಾದ ವೀರೇಶ್, ಗಂಗಣ್ಣ, ಹೇಮಣ್ಣ, ಬಸಪ್ಪ, ಗೊಲ್ಲರ ಹನುಮಂತಪ್ಪ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.