LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗಾನಯೋಗಿ ಕೇಂದ್ರದಲ್ಲಿ  ರಾಗ ರಂಗ್ ಮಾಸಿಕ ಕಾರ್ಯಕ್ರಮ


ಬಳ್ಳಾರಿ, ಏ.15'' ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಹಾವಂಬಾವಿ ವಿರಾಟ ನಗರದ ಗಾನಯೋಗಿ ಕೇಂದ್ರದಲ್ಲಿ 63ನೇ ರಾಗ ರಂಗ್ ಮಾಸಿಕ ಕಾರ್ಯಕ್ರಮ ನಡೆಯಿತು ಮಾರುತಿ ಕ್ಯಾಂಪಿನ ಅಂಬಾಮಠದ ಧರ್ಮ ಕರ್ತರಾದ ಶಿವಪ್ಪನವರು ತಬಲ ನುಡಿಸುವುದರ ಮೂಲಕ ಉದ್ಘಾಟಿಸಿ ನಮ್ಮ ನಾಡಿನ ನಡೆದಾಡುವ ದೇವರು ಪರಮಪೂಜ್ಯ ಪುಟ್ಟರಾಜ ಗುರುಗಳು ಸತ್ತವರಿಗೆ ಜೀವವನ್ನು ಕೊಟ್ಟಂತಹ ಮಹಾತ್ಮರು ಕಣ್ಣು ಇಲ್ಲದಿದ್ದರೂ ಕಣ್ಣು ಇದ್ದವರಿಗೆ ಕಣ್ಣನ್ನು ಕೊಟ್ಟ ಮಹಾ ಪುಣ್ಯಾತ್ಮರು ಅವರು ತೋರಿದ ಸಂಸ್ಕಾರ ಮಾರ್ಗದರ್ಶನದಲ್ಲಿ ಅವರನ್ನು ಸ್ಮರಿಸುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕಾಗುತ್ತದೆ ಇಂತಹ ಕಾರ್ಯಕ್ರಮದ ಮೂಲಕ ಅವರನ್ನು ಧ್ಯಾನಿಸುತ್ತಾ ನಾವು ನೀವು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಎಲ್ಲರಿಗೆ ಪುಟ್ಟರಾಜ ಗುರುಗಳ ಮಹಾತ್ಮೆಯನ್ನು ತಿಳಿಸಿದರು ಅತಿಥಿಗಳಾಗಿ ಬಯಲಾಟ ನಿರ್ದೇಶಕರಾದ ಸಿದ್ದಲಿಂಗಸ್ವಾಮಿ ಕಲಾವಿದರಾದ ಶಿವಕುಮಾರ್ ಯೋಗೀಶ್ ದೊಡ್ಡ ಬಸವ ಗವಾಯಿ ರಮೇಶ ಅವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸರಸ್ವತಿ  ಗೌರಿ ಮೇಘನಾ ಮತ್ತು ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್