ರಾಯಬಾಗ: ಮತಕ್ಷೇತ್ರದ ಎಲ್ಲ ಗ್ರಾಮಗಳ ಎಸ್.ಸಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 30 ಲಕ್ಷ ರೂ.ಅನುದಾನದಲ್ಲಿ ತಾಲೂಕಿನ ಕಂಕಣವಾಡಿ ಪಟ್ಟಣದ ಬಸ್ ನಿಲ್ದಾಣದಿಂದ ಎಸ್.ಸಿ ಕಾಲೋನಿ ವರೆಗೆ ರಸ್ತೆ ಸುಧಾರಣೆ ಹಾಗೂ ನಿಪನಾಳ ಗ್ರಾಮದಲ್ಲಿ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಿಂದ ಎಸ್.ಸಿ ಕಾಲೋನಿ ಮತ್ತು ನಿಪನಾಳಕರ ತೋಟದ ವರೆಗೆ 20 ಲಕ್ಷ ರೂ.ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡು ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕೆಂದು ಸೂಚಿಸಿದರು.
ಮುಖಂಡರಾದ ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಅಣ್ಣಾಸಾಹೇಬ ಖೆಮಲಾಪೂರೆ, ಅಪ್ಪಾಸಾಹೇಬ ಬ್ಯಾಕುಡೆ, ಶಂಕರ ಕುರಬೆಟ್ಟ, ರಾಜು ಹಳಬರ, ಮಲ್ಲಪ್ಪ ಸನದಿ, ಶಿವಪ್ಪ ಹಳ್ಳುರೆ, ಮಲ್ಲಪ್ಪ ಪವಾರ, ಸತ್ಯಪ್ಪಾ ನಂದಿ, ಸದಾಶಿವ ಖೆಮಲಾಪುರೆ, ಮಹಾಲಿಂಗ ಮುದ್ದಾಪುರೆ, ವೀರೇಂದ್ರ ಬ್ಯಾಕುಡೆ, ರಮೇಶ್ ಪೂಜಾರಿ, ಬಸವರಾಜ ಐನಾಪುರೆ, ಹಾಲಪ್ಪ ಪಿರಗಿಪಾಟೀಲ, ಅಪ್ಪಣ್ಣ ಗಡಕರಿ, ಶ್ರೀಶೈಲ ಮೂಡಲಗಿ, ನಟರಾಜ ಮಾವರ್ಕರ, ನಾಗಪ್ಪ ಪಡತರಿ, ಅರುಣ ಪವಾರ, ಹಾಲಪ್ಪ ಗಡಕರಿ, ಮಹಾಂತೇಶ ಹತ್ತರಗಿ, ನವೀನ ವಾಘ, ಶ್ರೀಕಾಂತ ಮೂಡಲಗಿ, ಪುಂಡಲಿಕ ಗಿಡ್ಡಗೊಳ, ಅಭಿಯಂತರ ಶ್ರೀಧರ್ ಮೆಗಲಮನಿ ಇದ್ದರು.
