LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ 


ಮಹಾಲಿಂಗಪುರ : ಅಖಂಡ ಭಾರತ ದೇಶದ ದೇವಸ್ಥಾನಗಳನ್ನೂ ಹಾಳು ಮಾಡಿದ್ದರು ಅವುಗಳನ್ನು ೧೧೧ ವರ್ಷಗಳ ನಂತರ ೩೫೦೦ ಕ್ಕೂ ಹೆಚ್ಚು ದೇವಸ್ಥಾನಗಳನ್ನು ಪುನಃ ನಿರ್ಮಾಣ ಮಾಡಿದ್ದು ರಾಜಮಾತೇ ಅಹಲ್ಯಬಾಯಿ ಹೊಳಕರ ಎಂದು ಮಾರಾಪುರದ ಶ್ರೀಮಂತ ಮಹಾರಾಜರು ಹೇಳಿದರು.
 ನಗರದ ಕೆಂಗೇರಿ ಮಡ್ಡಿಯಲ್ಲಿರುವ ಬೀರಸಿದ್ದೇಶ್ವರ ದೇವಸ್ಥಾನದ ನಡೆದ ಅಹಲ್ಯಬಾಯಿ ಹೊಳಕರ ಅವರ ೩೦೧ ನೇ ಜಯಂತಿ ಕಾರ್ಯಕ್ರಮವನ್ನು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಸಿ ಮಾತನಾಡಿ ಇಂದು ನಾವು ಸುಂದರ್ ಕಾಶಿ ವಿಶ್ವನಾಥ ದೇವಾಲಯವನ್ನು ಭಾರತದ ದೇವಾಲಯಗಳ ಹೃದಯ ಮಂದಿರ ಎಂದು ಕರೆಯುತ್ತೇವೆ ಅದು ಹಿಂದೆ ಪರಕಿಯರ ಆಡಳಿತಕ್ಕೆ ಸಿಕ್ಕು ಹಾಳಾಗಿತ್ತು. ಅದನ್ನು ಪುನಃ ಜಿರ್ನೋದ್ಧಾರ ಮಾಡಿ ಭಾರತೀಯರ ಹೃದಯ ಗೆದ್ದ ಧೀಮಂತ ನಾಯಕಿ ರಾಜಮಾತೇ ಅಹಲ್ಯಬಾಯಿ ಹೊಳಕರ. ಅವರನ್ನು ಪುಣ್ಯಶ್ಲೋಕ ಎಂದು ಕರೆಯುತ್ತಾರೆ.ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ದೇವಸ್ಥಾನಗಳ ಜಿರ್ನೋದ್ದಾರಕ್ಕೆ ಧನ ಸಹಾಯ ಮಾಡಿ ದೇವರ ಪ್ರಿತಿಯ್ ಲೋಕಮಾತೆಯಾಗಿ ಭಾರತೀಯರ ಹೃದಯ ಸಾಮ್ರಾಜ್ಞಯಾಗಿ, ದಂತ ಕತೆಯಾಗಿ ಜನರ ಮನಸ್ಸಿನಲ್ಲಿ ಸ್ಥಿರಸ್ತಾಯಿಯಾಗಿದ್ದಾರೆ ಎಂದರು.
ನಂತರ ಮಾತನಾಡಿದ ಯುವ ಆಧ್ಯಾತ್ಮ ಚಿಂತಕರಾದ ಮಹೇಶ ಇಟಕ್ಕನವರ ಇವರ ಹೆಸರಿನಲ್ಲಿ ಇಂದಿಗೂ ಇಂದೋರನಲ್ಲಿರುವ ವಿಶ್ವವಿದ್ಯಾಲಯಕ್ಕೆ ಮತ್ತು ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಸೋಲಾಪುರದ ಪುಣ್ಯಶ್ಲೋಕ ಅಹಲ್ಯದೇವಿ ಹೊಳಕರ ವಿಶ್ವವಿದ್ಯಾಲಯ ಎಂದು ಹೆಸರಿಡಲಾಗಿದೆ. ಅವರು ಜಿರ್ನೋದ್ದಾರ ಮಾಡಿದ ದೇವಸ್ಥಾಗಳಲ್ಲಿ ಅವರ ಪ್ರತಿಮೆಗಳು ಇವೆ ಎಂದರು. 
ನಂತರ ಮಾತನಾಡಿದ ಮಾಧವಾನಂದ ಟ್ರಸ್ಟ್ ಅಧ್ಯಕ್ಷರಾದ ಡಾ. ಸಂಗಮೇಶ ಹಿಡಕಲ್ ಮರಾಠಾ ಸಾಮ್ರಾಜ್ಯದ ಮಾಳವ ಪ್ರಾಂತ್ಯದ ದಕ್ಷ ಆಡಳಿತಗಾರ್ತಿಯಾಗಿ ರಾಜ್ಯಭಾರ ಮಾಡಿ ಅನೇಕ ನದಿ ಘಾಟಗಳು ಧರ್ಮಶಾಲೆಗಳನ್ನು ನಿರ್ಮಿಸಿದರು ಬಾಲ್ಯ ವಿವಾಹ ಮತ್ತು ಸತಿ ಸಹಗಮನ ಪದ್ಧತಿಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದರು.
ಬ್ರಿಟಿಷ ಇತಿಹಾಸಕಾರ ಜಾನ ಮಾಲ್ಕಮ್ ಅವರು ಇವರ ಆಡಳಿತವನ್ನು ಅತ್ಯಂತ ದಕ್ಷ ಆದರ್ಶಪ್ರಾಯ ಪರಿಶುದ್ಧ ಆಡಳಿತಗಾರ್ತಿ ಎಂದು ಬರೆದಿದ್ದು ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಶೇಖರ ಅಂಗಡಿ,, ಮುಖ್ಯಧಿಕಾರಿ ನಾಮದೇವ ಲಮಾಣಿ, ಮಹಾಲಿಂಗಪ್ಪ ಲಾತುರ, ಶ್ರೀಶೈಲ್ ಕಾರಜೋಳ ಮಾತನಾಡಿದರು ಮಹಾಲಿಂಗಪ್ಪ ಜಕ್ಕಣ್ಣವರ, ಸಿದ್ದರಾಮ ಯರಗಟ್ಟಿ, ಮಲ್ಲಪ್ಪ ಸಿಂಗಾಡಿ, ಸದಾಶಿವ ಕಂಬಳಿ, ಯಲ್ಲಣ್ಣಗೌಡ ಪಾಟೀಲ, ಮುಖಂಡರಾದ ಗಂಗಾಧರ ಮೇಟಿ, ಪರಶುರಾಮ್ ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಆನಂದ ಸನದಿ ಲಕ್ಷ್ಮಣ ಪಟ್ಟಣಕೋಡಿ, ಕರೆಪ್ಪ ಹುಣಶೀಕಟ್ಟಿ, ಅರ್ಜುನ್ ಮೇಟಿ, ಕರೆಪ್ಪ ಮೇಟಿ, ಪರಶು ಕೊಣ್ಣೂರ, ಲಕ್ಕಪ್ಪ ಲಾತುರ, ಮಲ್ಲಪ್ಪ ಲಾತುರ, ಅನಿಲ್ ದೇಸಾಯಿ, ಮಹದೇವ್ ಕೋಳಿಗುಡ್ಡ, ಬಸು ಓಲೇಕಾರ, ಪ್ರಭು ಪೂಜೇರಿ, ಬಸು ಬಂಡಿ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಲಕ್ಷ್ಮಣ ಕಿಶೋರ್ ನಿರೂಪಿಸಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್