LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ ದೇಸಾಯಿ ಗ್ರಂಥದ ಲೋಕಾರ್ಪಣೆ ನಾಳೆ

ಜಮಖಂಡಿ;ನಗರದ ಹಿರಿಯ ನ್ಯಾಯವಾದಿ, ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಅವರ ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ.ವಾಮನರಾವ ದೇಸಾಯಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಗರದ ಬಸವ ಭವನದಲ್ಲಿ ಭಾನುವಾರ ದಿ,29 ರಂದು ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದಮುತ್ಯಾ ಅವರ ಸಾನಿಧ್ಯ ವಹಿಸುವರು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಸ್ವತಂತ್ಯ್ರಸೇನಾನಿ ಮೊಮ್ಮಗ ಮನೋಜ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಗೊಳಿಸುವರು. ಸಾಹಿತಿ ಡಾ.ವೈ.ಎಂ,ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಾಹಿತ್ಯ ಅಕಾಡಮಿ ಸದಸ್ಯ ಮಹಾದೇವ ಬಸರಕೋಡ, ಜಿಲ್ಲಾನೊಂದಣಿ ಅಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ, ನಿರ್ದೇಶಕ ಡಾ.ಎ.ಬಿ.ವಗ್ಗರ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಾಡು ಮಾಳಿ, ಶ್ರೀಶೈಲ ಮೊಟಗಿ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ದಾಮೋದರ ಹುಲ್ಯಾಳಕರ, ಡಾ ಪ್ರಕಾಶ ಹೊಸವಾಡ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಗ್ರಂಥದ ಲೇಖಕ ಡಾ.ತಾತಾಸಾಹೆಬ ಬಾಂಗಿ ಮಾತನಾಡಿ, ಇತಹಾಸದ ಪುಟದಲ್ಲಿ ಮುಂಚೋಣಿಯಲ್ಲಿರಬೇಲಾಗಿದ್ದ ಸ್ವತಂತ್ಯ್ರ ಸೇನಾನಿ ಪದ್ಮಾವತಿಬಾಯಿ ದೇಸಾಯಿ ಅವರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಮಾಡಿದ ಹೋರಾಟ ಸ್ವತಂತ್ಯ್ರ ಹೋರಾಟದಲ್ಲಿ ಧುಮುಕಿ ಜೈಲು ಶಿಕ್ಷೆ ಅನುಭವಿಸಿದ್ದರು, ಜಮಖಂಡಿ ಸಂಸ್ಥಾನದ ಏಕೈಕ ಮಹಿಳಾ ಸದಸ್ಯ (ಶಾಸಕಿ) ಯಾಗಿದ್ದರು. 1924ರಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1974ರಲ್ಲಿ ಇಂದಿರಾಗಾಂಧಿ ತಾಮ್ರಪತ್ರನೀಡಿ ಗೌರವಿಸಿ ದ್ದಾರೆ. ಜಮಖಂಡಿಯವರೇ ಆದ ಪದ್ಮಾವತಿ ದೇಸಾಯಿ ಅವರ ಕುರಿತಾದ ಸಂಶೋಧನಾ ಕೃತಿ ರಚಿಸಿದ್ದು ನಮ್ಮ ನಾಡಿಗೆ ಅವರ ಬಗ್ಗೆ ಪರಿಚಯಿಸುವದೇ ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಬಸವರಾಜ ನಾಗಮೋತಿ, ಪ್ರಾಚಾರ್ಯ ಮಹಂತೇಶ ನರಸನ ಗೌಡರ, ಶಿವಾನಂದ ಸಾತಿಹಾಳ, ಶ್ರೀಪಾದ ಹೊನವಾಡ, ಮುಂತಾದವರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್