LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ: ಶಿವಕುಮಾರ್



ಗಂಗಾವತಿ : ಪ್ರತಿ ಕ್ಷೇತ್ರದಲ್ಲೂ ದುಡಿಯುವ ವರ್ಗದ ಮೇಲೆ ಆ ಕ್ಷೇತ್ರದ ಅಭಿವೃದ್ಧಿ ಪೂರಕವಾಗಿದ್ದು, ದೇಶದ ಔನ್ನತಿಗೆ ಕಾರ್ಮಿಕರ ಪ್ರಮಾಣಿಕ ಶ್ರಮ ಪ್ರಮುಖ ಎಂದು ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ  ಸೇವಾ ಸಂಘದ ರಾಜ್ಯಧ್ಯಕ್ಷ ಶಿವುಕುಮಾರ್ ಹೇಳಿದರು.
ಅವರು, ಶ್ರಮ ಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ  ಸೇವಾ ಸಂಘವು ಸಮೀಪ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಆಯೋಜಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರವು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು, ಶ್ರಮಿಕರ ಜೀವನಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಮಾತನಾಡಿ, ಕಾರ್ಮಿಕರು ತಮ್ಮ ಸೌಲಭ್ಯಗಳನ್ನು ಪಡೆಯಲು ಸಂಘಕ್ಕೆ ಭೇಟಿ ನೀಡಬೇಕು, ಹಲವು ಸೌಲಭ್ಯ ಪಡೆಯದೆ ಅನೇಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ತಿಳುವಳಿಕೆಯ ಕೊರತೆಯಿದೆ ಪ್ರತಿಯೊಬ್ಬರು ಎಲ್ಲರ ಜಾಗೃತಿಗೆ ದುಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ  ಕೆ. ಸಂಜನಾ, ಸಂಜಿತ ಕುಮಾರ್ ಇಂಗಳಗಿ, ಹರ್ಷವರ್ಧನ್, ಅನುಷಾ, ಶಹಬುದ್ದೀನ್, ಇರ್ಫಾನ್, ಗಾಯತ್ರಿ, ಅಯೋಸ್ತೀರ್, ರಾಣಿ, ಲತಾ, ಪ್ರೇಮ್ ಕುಮಾರ್, ಸಲೀಮ್, ಐಶ್ವರ್ಯ, ಭರತ್ ಸೇರಿದಂತೆ ಅನೇಕ ಪಿಯು ಮಕ್ಕಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತಲ್ಲದೆ , ಹಿರಿಯ ಕಾರ್ಮಿಕರನ್ನೂ ಸನ್ಮಾನಿಸಲಾಯಿತು. ಕಾರ್ಮಿಕ ದಿನಾಚರಣೆ ಪಯುಕ್ತ ಹಿರಿಯ ಕಾರ್ಮಿಕರಾದ ಪರಶುರಾಮ್ ಮೇಸ್ತ್ರಿ, ಬಾಬು ಮೇಸ್ತ್ರಿ, ಬಸವರಾಜ್ ಮೇಸ್ತ್ರಿ, ನಾಗೇಶ್ ರಾವ್ ಮೇಸ್ತ್ರಿ, ಹನುಮಂತ ಮೇಸ್ತ್ರಿ, ವೀರೇಶ್ ಮೇಸ್ತ್ರಿ, ರಹೀಮ್ ಸಾಬ್ ಮೇಸ್ತ್ರಿ, ಸಂಗಪ್ಪ ಮೇಸ್ತ್ರಿ, ಷರೀಪ್ ಮೇಸ್ತ್ರಿ, ಸುಕುಮುನಿ ಮೇಸ್ತ್ರಿ, ಮಾರೇಶ್ ಮೇಸ್ತ್ರಿ, ರಾಮ್ ಮೇಸ್ತ್ರಿ, ಸೀಮಾನ್ ಮೇಸ್ತ್ರಿ, ಅಬ್ರಾ ಮೇಸ್ತ್ರಿ, ರವಿ ಮೇಸ್ತ್ರಿ, ಸಂಗಪ್ಪ ಮೇಸ್ತ್ರಿ, ಶಾಮಣ್ಣ ಮೇಸ್ತ್ರಿ, ಹನುಮಂತ ಮೇಸ್ತ್ರಿ, ಎಲ್ಲಪ್ಪ ಮೇಸ್ತ್ರಿ, ದುರುಗಪ್ಪ ಮೇಸ್ತ್ರಿ, ವೀರೇಶ್ ಹಣವಾಳ್, ರಾಘವೇಂದ್ರ ಮೇಸ್ತ್ರಿ, ಹುಲುಗಯ್ಯ ಮೇಸ್ತ್ರಿ, ಚಂದ್ರು ಮೇಸ್ತ್ರಿ ಹಾಗು ಇಮಾಮ್ ಮೇಸ್ತ್ರಿ ಇವರನ್ನು ಗೌರವಿಸಲಾಯಿತು.
 ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ್ ಕುಷ್ಠಗಿ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜೇಶ್ ಹೇರೂರ್, ಕಾರಟಗಿ ತಾಲೂಕು ಅಧ್ಯಕ್ಷ ಬಾಬು ಮೇಸ್ತ್ರಿ ಇತರರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್