LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

*ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳ್ಳಿ‌ ಜನರ ಜೀವಾಳ*

ಬಳ್ಳಾರಿ27 : ಭಾರತ ಹಳ್ಳಿಗಳ ದೇಶ ಕಲೆ ಸಂಸ್ಕೃತಿ ಇಲ್ಲಿಯ ನೆಲದಲ್ಲಿಯೇ ಇದೆ
ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಸೊಗಡನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು
ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಹೇಳಿದರು. 
ಶ್ರೀಮಹಾ ದೇವತಾತ ಕಲಾ ಸಂಘ, ಹಂದ್ಯಾಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ 
ಸಂಯುಕ್ರಾಶ್ರಯದಲ್ಲಿ  ಬಳ್ಳಾರಿ ತಾಲೂಕಿನ  ಶ್ರೀಧರಗಡ್ಡೆ ಗ್ರಾಮದಲ್ಲಿ  ನಡೆದ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ- 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ  ಸಾಂಸ್ಕೃತಿಕ ಕಾರ್ಯಕ್ರಮಗಳು  ಹಳ್ಳಿಯಲ್ಲಿ ಜನರ ಭಾವನೆ ಜನಜೀವನದ ಭಾಗವಾಗಿವೆ
 ಮಠ ಮಾನ್ಯಗಳಲ್ಲಿ ಪರಂಪರೆ ಸಾರ್ವಜನಿಕರಲ್ಲಿ ಸಾಂಸ್ಕ್ರತಿಕ ಮನೋಭಾವ ಮೂಡಲು ಈ ರೀತಿಯ ಕಾರ್ಯಕ್ರಮ ಸಹಕಾರ ಆಗುತ್ತದೆ.  ಈ ನಿಟ್ಟಿನಲ್ಲಿ ಶ್ರೀಮಹಾದೇವ ತಾತ ಕಲಾ ಸಂಘವು  ಎರಡು ಮೂರು ದಶಕಗಳಿಂದ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಲಾ ಪ್ರಕಾರ ಹಮ್ಮಿಕೊಂಡು ಬಂದಿರೋದು ವಿಶೇಷವಾಗಿದೆ ಎಂದರು.
ವೇದಿಕೆ ಮೇಲೆ ಪರಮ ಪೂಜ್ಯ ಶ್ರೀ ಮರಿ ಕೊಟ್ಟೂರು ದೇಶಿಕೇಂದ್ರ
ಸ್ವಾಮೀಜಿ ಮಾತನಾಡಿ ಗ್ರಾಮೀಣ ಪ್ರತಿಭೆಗಳನ್ನು ಹೊರ ತರುವಲ್ಲಿ ಮಹಾದೇವ ತಾತಾ ಕಲಾ ಸಂಘ ನಿರಂತರ ಶ್ರಮವಹಿಸಿದೆ. ಈ ರೀತಿಯ ಕಾರ್ಯಕ್ರಮದಿಂದ ಜನರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಶ್ರೀ ಎ.ನಾಗೇಂದ್ರಪ್ಪ, ಅಖಿಲ ಭಾರತ ವೀರಶೈವ ಸಂಘ ತಾಲ್ಲೂಕು ಅಧ್ಯಕ್ಷರಾದ ಶ್ರೀ ಎಸ್ .ಬಿ .ವೀರನಗೌಡ, ಗ್ರಾಮದ ಹಿರಿಯ ಮುಖಂಡರಾದ ಬರು ಘಂಟರ ಸಣ್ಣ ಪಂಪಣ್ಣ, ಭಜನೆ ಸಂಘದ ಹಿರಿಯ ಸದಸ್ಯರಾದ ಕಚೇಡು ಮಾರೆಪ್ಪ, ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್ ಕೆ ಆರ್ ಜಿಲಾನಿ ಭಾಷ, ಶ್ರೀ ಭೀಮನೇನಿ ಪ್ರಸಾದ, ಶ್ರೀ ಜಿ. ಲಿಂಗಪ್ಪ, ಶ್ರೀ ನಿರಂಜನ, ಹಳ್ಳಿಮನೆದೊಡ್ಡ ಬಸಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಸಂಘದ ಅಧ್ಯಕ್ಷರಾದ ಪುರುಷೋತ್ತಮ ಹಂದ್ಯಾಳ ಮಾತನಾಡಿದರು. ಕುಮಾರಿ ಸಾಯಿ ಶೃತಿ ವಂದನಾರ್ಪಣೆ ಮಾಡಿದರು. 
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಶ್ರೀ ಡಿ ಪಂಪನಗೌಡ ಬಳ್ಳಾರಿ ತಂಡದಿಂದ ಭಜನೆ, ಶ್ರೀಮತಿ ಕವಿತ ಕೆ ಬಳ್ಳಾರಿ ತಂಡದಿಂದ ಸುಗಮ ಸಂಗೀತ, ಶ್ರೀಮತಿ ಎರ್ರೆಮ್ಮೆ ತಂಡದಿಂದ ರಂಗಗೀತೆ ಗಾಯನ, ಶ್ರೀ ಎಸ್ ಕೆ ಆರ್ ಜಿಲಾನಿ ತಂಡ ಸಮೂಹಿಕ ನೃತ್ಯ ಮತ್ತು ಶ್ರೀಗಣೇಶ ಕುಮಾರ್ ಬಿ ತಂಡದಿಂದ ಶರಣ ಸಂಗಮ ಐತಿಹಾಸಿಕ ನಾಟಕ ಪ್ರದರ್ಶನಗೊಂಡತು
ಕಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್ ಕೆ ಆರ್ ಜಿಲಾನಿ ಭಾಷ ಮತ್ತು ದೊಡ್ಡಬಸಪ್ಪ ಗವಾಯಿ ಅವರನ್ನು ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್