LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹುಟ್ಟುಹಬ್ಬ: ಬಿಮ್ಸ್‌ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಳ್ಳಾರಿ. ಸೆ. 16:  ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ನಾಗಲ್ಕೆರೆ ಗೋವಿಂದ ಅವರ ನೇತೃತ್ವದಲ್ಲಿ ನಗರದ ಬಿಮ್ಸ್‌ ಆಸ್ಪತ್ರೆಯ  ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ  ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗಲ್ಕೆರೆ ಗೋವಿಂದ, “ನಾಯಕರು ಹಾಗೂ ಜನಪ್ರತಿನಿಧಿಗಳ ಹುಟ್ಟುಹಬ್ಬವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವುದು ಉತ್ತಮ. ಬಡವರು, ರೋಗಿಗಳು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಹುಟ್ಟುಹಬ್ಬ ಆಚರಿಸುವುದು ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತದೆ. ಬಿ.ನಾಗೇಂದ್ರ  ಅವರಿಗೆ ದೇವರು ಇನ್ನಷ್ಟು ಆಯುಷ್ಯ, ಅರೋಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಬಿಮ್ಸ್‌ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿದ ಮುಖಂಡರು ರೋಗಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಹಣ್ಣು ಹಂಪಲು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ವೆಂಕಟೇಶ್‌ ಪ್ರಸಾದ್, ಮಹಾನಗರ ಪಾಲಿಕೆ ಮಹಾಪೌರ ಪಿ.ಗಾದೆಪ್ಪ, ಅಯಾಜ್‌ ಅಹಮದ್, ನಿಯಾಜ್‌ ಅಹ್ಮದ್, ಆಸಿಫ್‌ ಬಾಷಾ, ಸೋಮು, ಗುಜುರಿ ಬಸವರಾಜ್,
,ಜಗನ್, ರಿಯಾಜ್‌ ಅಹಮದ್, ಶಮಿಮ್ ಜಕ್ಲಿ,  ಗೀತಾ ಬಾಳ ಸೇರಿದಂತೆ ನೂರಾರು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಂಕರಗೌಡ ಪಾಟೀಲಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡಕಂಟೆಪ್ಪಗೌಡ ಪಾಟೀಲ ನಿಧನವಿದ್ಯಾರ್ಥಿಗಳು ಕಲಿಕಾ ಮಟ್ಟ ಸುಧಾರಿಸಿಕೊಳ್ಳಬೇಕು: ಜಮಗೊಂಡಿಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*27 ದಿನಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ; ಎಐಸಿಸಿ ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ಸಕ್ರಿಯ ಭಾಗಿ*ಕಾಗವಾಡ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ನಿರಂತರ ವಿದ್ಯುತ್ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆಗುಡದಳ್ಳಿ ಗ್ರಾಮದಲ್ಲಿ ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆರಾಮದುರ್ಗವನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಮನವಿ