LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಎಸ್ ಬಿ ಶೇಗುಣಸಿ ಅವರ ಕಾರ್ಯ ಶ್ಲಾಘನೀಯ :ವಿಜಯಕುಮಾರ 

 

ಶಿರಹಟ್ಟಿ. ಕಳೆದ 34 ವರ್ಷಗಳ ಕಾಲ ಅಗ್ನಿಶಾಮಕ ಇಲಾಖೆಯಲ್ಲಿ  ಪ್ರಾಮಾಣಿಕ ಸೇವೆ ಸಲ್ಲಿಸಿ ,ಇಂದು ಸಹಾಯಕ ಠಾಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂಡುತ್ತಿರುವ ಶಂಕರ ಬಿ ಶೇಗುಣಸಿ ಅವರು  ಇಲಾಖೆಗೆ ಸಲ್ಲಿಸಿದ  ಕಾರ್ಯ ಶ್ಲಾಘನೀಯ ಎಂದು ಗದಗ ಜಿಲ್ಲಾ ಅಗ್ನಿಶಾಮಕ  ಅಧಿಕಾರಿಗಳಾದ  ವಿಜಯಕುಮಾರ ಎಚ್ ಜಿ ಹೇಳಿದರು.
     ಅವರು ಗುರುವಾರದಂದು ಸೇವಾ ನಿವೃತ್ತಿ ಹೊಂಡುತ್ತಿರುವ ಅಗ್ನಿಶಾಮಕ ಸಹಾಯಕ ಠಾಣಾ ಅಧಿಕಾರಿಗಳಾದ ಶಂಕರ ಬಿ ಶೇಗುಣಸಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ  ಮಾತನಾಡಿ ಕಳೆದ 15 ವರ್ಷಗಳ ಹಿಂದೆ  ಇಲಾಖೆ ಸೇವೆ ಕಠಿಣ ಇತ್ತು, ಆಗ ಜಿಲ್ಲೆಯಲ್ಲಿ ಕೆಲವು ಠಾಣೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ ಈಗ ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಅಗಿದ್ದು ಸಹಕಾರಿ ಆಗಿದೆ ಎಂದರು.
    ಶಿರಹಟ್ಟಿ ಅಗ್ನಿಶಾಮಕ ಠಾಣಾ ಅಧಿಕಾರಿಗಳಾದ  ಬಿ ವಾಯ್ ಬಂಗಾರಪ್ಪ ತುರನೂರ ಮಾತನಾಡಿ ಶೇಗುಣಸಿ ಅವರು ಶಿಸ್ತು , ಅಚ್ಚುಕಟ್ಟಾಗಿ ಸರ್ಕಾರಿ ಸೇವೆಯನ್ನು ಸಲ್ಲಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿ ಇಂದು ನಿವೃತ್ತಿ ಹೊಂಡುತ್ತಿದ್ದಾರೆ  ಅವರ ನಿವೃತ್ತಿ ಜೀವನ ಸುಖಕರವಾಗಲಿ  ಎಂದರು.
    ಸಹಾಯಕ ಠಾಣಾ ಅಧಿಕಾರಿ ಶಂಕರ ಶೇಗುಣಸಿ ಮಾತನಾಡಿ ಎಲ್ಲ ಅಧಿಕಾರಿಗಳ, ಸಹೋದ್ಯೋಗಿಗಳ ಸಹಕಾರದಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಆಗುತ್ತಿದ್ದೇನೆ. ನಾವು ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿರಬೇಕು ಎಂದರು.
      ಕಾರ್ಯಕ್ರಮದಲ್ಲಿ  ಶ್ರೀಮತಿ ಮಹಾದೇವಿ ಶೇಗುಣಸಿ, ಶ್ರೀಮತಿ ರೇಖಾ ಪಾಟೀಲ, ಠಾಣೆಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.
      ಕಾರ್ಯಕ್ರಮದ ನಿರೂಪಣೆಯನ್ನು  ರಶೀದ್ ಮಸೂತಿ, ವಂದನಾರ್ಪಣೆ ಜಗದೀಶ ಎಮ್ ಸಿ, ಸ್ವಾಗತವನ್ನು  ಈರಪ್ಪ ಗೂಳಿ ನೆರವೇರಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್