LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜನರ ಹಿತದೃಷ್ಟಿ ಬಯಸೋದೆ ಬಹುದೊಡ್ಡ ಸಾಧನೆ : ಯಶವಂತರಾಯಗೌಡ ಪಾಟೀಲ

ಇಂಡಿ : ಅಧಿಕಾರ ಬರುತ್ತೆ, ಇರುತ್ತೆ, ಹೋಗುತ್ತೆ, ಆದರೆ ಬಂದು ಹೋಗೋದರಲ್ಲಿ ನಾವು ಮಾಡಿರುವಂತಹ ಕಾರ್ಯಗಳು, ಯೋಜನೆಗಳು, ಜನರ ಹಿತದೃಷ್ಟಿ ಬಯಸೋದೆ ಬಹುದೊಡ್ಡ ಸಾಧನೆ, ಇದು ನನ್ನ ಧರ್ಮ ಎಂದು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಮಾತನಾಡಿದರು.
           ಭತಗುಣಕಿ ಜಿಲ್ಲಾ ಪಂಚಾಯತ ಅಡಿಯಲ್ಲಿ ಬರುವ ಭತಗುಣಕಿ ಹಾಗೂ ಬೂದಿಹಾಳ ಗ್ರಾಮದ ಭತಗುಣಕಿ ಇಂದ ಹಲಸಂಗಿ ಮುಖ್ಯ ರಸ್ತೆ ಸುಧಾರಣೆ ೯೦ ಲಕ್ಷ, ಬೂದಿಹಾಳ ಕ್ಯನಾಲ ದಿಂದ ಧನ್ಯಕುಮಾರ ವಾಲಿಕಾರ ಇವರ ಜಮೀನಿನ ರಸ್ತೆ ಸುಧಾರಣೆ ೫೦ ಲಕ್ಷ, ಭತಗುಣಕಿ ಮಸೀದಿ ಹತ್ತಿರ ಸಭಾಭವನ ೫ ಲಕ್ಷ, ಅಂಜುಮನ್ ಕಮಿಟಿಯ ಸಭಾ ಭವನ, ೫ ಲಕ್ಷ, ಗ್ರಾಮದ ಕರ್ಪೂರ ಪಡೆವ್ವ ದೇವಸ್ಥಾನ ಹತ್ತಿರ ಸಭಾ ಭವನ ೪ ಲಕ್ಷ, ಬೂದಿಹಾಳ್ ಗ್ರಾಮದ ಇದಗಾ ಮೈದಾನ ಕಂಪೌಂಡ್ ನಿರ್ಮಾಣ ೪ ಲಕ್ಷ ಈ ರೀತಿಯಾಗಿ ಇಂಡಿ ತಾಲೂಕಿನ ಭತಗುಣಕಿ ಜಿಲ್ಲಾ ಪಂಚಾಯತನ, ಭತಗುಣಕಿ ಮತ್ತು ಬೂದಿಹಾಳ ಗ್ರಾಮದ ವಿವಿಧ ಕಾಮಗರಿಗಳನ್ನು ಉದ್ಘಾಟಸಿ ಅವರು ಮಾತನಾಡಿದರು.
         ಇದು ನಮ್ಮ ಕ್ಷೇತ್ರವಲ್ಲ ನನ್ನ ಕ್ಷೇತ್ರ, ಇಲ್ಲಿನ ಜನರು ನನಗೆ ಸತತವಾಗಿ ಮೂರುಬಾರಿ ಕೊಟ್ಟ ಆಶೀರ್ವಾದ ಬಹಳ ದೊಡ್ಡದು, ಅವರ ಋಣ ತೀರಿಸಲು ಈ ಜನ್ಮ ಸಾಲದು ಎಂದರು, ನನ್ನ ಕ್ಷೇತ್ರದ ಜನರು ವಿದ್ಯಾವಂತರು, ಸಮಾನತೆಯ ಪ್ರಜೆಗಳನ್ನಾಗಿ ಬದಲಾಯಿಸೋದೆ ನನ್ನ ಗುರಿ, ನನ್ನ ಕ್ಷೇತ್ರದ ರೈತರು ಯಾವೊಬ್ಬ ರಾಜಕಾರಣಿಗೆ ಕೈವಡ್ಡಬಾರದು, ಅದಕ್ಕಾಗಿ, ರೈತರಿಗೆ ನೀರಿನ ಸೌಲಭ್ಯ, ಯುವಕರಿಗೆ ಪ್ರತಿ ಹಳ್ಳಿಯಲ್ಲಿ ಶಿಕ್ಷಣ, ಮಹಿಳೆಯರಿಗೆ ಕಾನೂನಿನ ಅರಿವು, ಸ್ವಾವಲಂಬಿಯಾಗಿಸೊದು, ಜಾತಿ ವಿಜಾತಿಗಳ ನಡುವಿನ ಭೇದ ಭಾವ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ನನ್ನ ಕ್ಷೇತ್ರದ ಬೆಳವಣಿಗೆ ಮಾಡೋದೇ ನನ್ನ ಮುಖ್ಯ ಉದ್ದೇಶ ಎಂದರು.
      ಈಗಾಗಲೇ ಕ್ಷೇತ್ರಕ್ಕೆ ಭೀಮಾ ಶುಗರ, ಇಂಡಿ ಮಹಾನಗರ ಪಾಲಿಕೆ, ಮಿನಿ ವಿಧಾನ ಸೌಧ, ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ, ಜಿಲ್ಲೆಯಲ್ಲಿ ಇಂಡಿ ತಾಲುಕಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ, ರಸ್ತೆಗಳ ಸುಧಾರಣೆ ಮಾಡಿದ್ದು ನಮ್ಮ ಸರ್ಕಾರ, ಹಿಂದಿನ ರಸ್ತೆಗಳಿಗೆ ಇಗಿನ ರಸ್ತೆಗಳಿಗೆ ಬಹು ಅಂತರವಿದೆ, ಇಗಿನ ರಸ್ತೆಗಳು ಅಗಲೀಕರಣ ಮಾಡಿದ್ದು, ಅಲ್ಲಿ ಹೆಚ್ಚಿನ ತೂಕದ ವಾಹನಗಳು ಓಡಾಡುವದರಿಂದ ರಸ್ತೆಗಳು ಬೇಗನೆ ಹಾಳಾಗುವದು ಸಹಜ, ಆದರೂಕೂಡ, ರಸ್ತೆಗಳ ಸುಧಾರಣೆ  ನಡೀತಾ ಇದೆ, ಸರ್ಕಾರದಲ್ಲಿ ಸ್ವಲ್ಪ ತೊಂದರೆ ಇದ್ದರು ನಮ್ಮ ಕ್ಷೇತ್ರಕ್ಕೆ ಯಾವುದೆ ಕುಂದು ಕೊರತೆ ಬಾರದ ಹಾಗೆ ನೋಡಿಕೊಂಡಿದ್ದೇನೆ, ಮುಂದಿನ ದಿನಗಳಲ್ಲಿ ನಮ್ಮ ರೈತರು, ವಿದ್ಯಾರ್ಥಿಗಳು, ಜನ ಸಾಮಾನ್ಯರು ಆರ್ಥಿಕವಾಗಿ ಬೆಳವಣಿಗೆ ಮಾಡದೇ ಹೋದಲ್ಲಿ ನಾನು ೨೦೨೮ರ ಚುನಾವಣೆಯಲ್ಲಿ ಭಾಗಿ ಆಗೋಲ್ಲ ಎಂದರು.
       ಎಮ್. ಆರ್. ಪಾಟೀಲ್ ಮಾತನಾಡಿ ಹಲವಾರು ಕಾಮಗಾರಿಗಳು ಇಂಡಿ ಕ್ಷೇತ್ರಕ್ಕೆ ನಮ್ಮ ಶಾಸಕರು ಬಹಳ? ಮಂಜೂರಾತಿ ತಂದಿದ್ದಾರೆ, ಆದರೆ ರಾಜ್ಯ ರಾಜಕೀಯದಲ್ಲಿ ಹಲವಾರು ಏರು ಪೆರುಗಳ ಮಧ್ಯ ಎಲ್ಲ ಕಾಮಗಾರಿಗಳಿಗೆ ಚಾಲನೆ ಮಾಡಿದಂತಹ ಶಾಸಕರು ನಮ್ಮ ಯಶವಂತರಾಯಗೌಡ ಪಾಟೀಲರು ಅನ್ನೋದು ನುಡಿದಂತೆ ನಡೆದ ಶಾಸಕರು ಎಂದರು.
     ಧನರಾಜ ಮುಜಗೊಂಡ ಮಾತನಾಡಿ ತಾಲೂಕಿಗೆ ಹಲವಾರು ಕಾಲೆಜುಗಳು, ಡಿಗ್ರಿ ಕಾಲೆಜುಗಳು, ಸರ್ಕಾರಿ ಪ್ರೌಢ ಶಾಲೆಗಳು ನಿರ್ಮಾಣ ಮಾಡಿ ಬಡಜನರ ಕಣ್ಣಿರುವರಿಸಿದ ನಮ್ಮ ಇಂಡಿ ಶಾಸಕರು ಎಂದರು.
 ಈ ಸಂದರ್ಭದಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಭೀಮುಕಾಕಾ ಕವಲಗಿ, ಎಮ್. ಆರ್. ಪಾಟೀಲ್, ಈರಣ್ಣ ವಾಲಿ, ಕೋರೆ ಸಾವಕಾರ, ಶಹಾಜಿ ಮಿಸಾಳೆ, ರುಕಮುದ್ದಿನ  ತದ್ದೇವಾಡಿ, ಬಿ. ಸಿ. ಸಾವಕಾರ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಣ್ಣಪ್ಪ ತಳವಾರ, ಧರ್ಮಣ್ಣ ವಾಲಿಕಾರ , ಬದ್ರಿ ಮಹಿಷಿ ಸಾವಕಾರ, ಲ್ಯಾಂಡ ಆರ್ಮಿ ಇಲಾಖೆಯ ಅಧಿಕಾರಿ ರಾಜೇಶ್ ಹೂಗಾರ, ಶ್ರೀಶೈಲ್ ಬನಸೋಡೆ, ಸದಾಶಿವ ಪ್ಯಾಟಿ, ನೀಲಕಂಠ ರೂಗಿ, ಭತಗುಣಕಿ, ಝಳಕಿ  ಬಳ್ಳೊಳ್ಳಿ, ಭೈರುಣಗಿ, ಅಂಜುಟಗಿ, ಮೈಲಾರ, ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್