LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೇವರ ದಾಸಿಮಯ್ಯ್ ನಾಡು ಕಂಡ ಶ್ರೇ? ಶಿವಶರಣ

ಮಹಾಲಿಂಗಪುರ : ಕರುನಾಡು ಅನೇಕ ಸರ್ವಶ್ರೇ? ದಾರ್ಶನಿಕರನ್ನು, ಶರಣರನ್ನು ಪಡೆದು ಧನ್ಯವಾಗಿದೆ. ಅವರಲ್ಲಿ ದೇವರ ದಾಸಿಮಯ್ಯನವರು ಒಬ್ಬರು ಎಂದು ಗುಲಬರ್ಗಾದ ಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಬನಶಂಕರಿ ದೇವಸ್ಥಾನದಲ್ಲಿ ಹಟಗಾರ ಸಮಾಜದ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ್ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬ ರಾಮನಾಥ. ಈ ರೀತಿ ನಿಸರ್ಗದೊಂದಿಗೆ ಜೀವಿಗಳಿಗೆ ಸಂಬಂಧ ಬೆಸೆಯುವ ಅವರ ವಚನಗಳು ಮನು?ನನ್ನು ಎಚ್ಚರಿಸುತ್ತಿವೆ.ಅವರು ರಾಮನಾಥ ಅಂಕಿತದೊಂದಿಗೆ ೧೭೦ ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎಂದರು.
ನಂತರ ಮಾತನಾಡಿದ ಸ್ಥಳೀಯ ಭ್ರಹ್ಮಾ ವಿದ್ಯಾಶ್ರಮದ ಸಹಜಾನಂದ ಶ್ರೀಗಳು ಕಲಬುರ್ಗಿ ಜಿಲ್ಲೆ ಮುದನುರಿನಲ್ಲಿ ಜನಿಸಿ ನೆಯ್ಗೆ ಕಾಯಕ ಮಾಡುತ್ತಾ ವಚನ ಕಾಯಕಕ್ಕೆ ಒಂದು ತಳಹದಿ ಒಂದು ಪರಂಪರೆ ಹಾಕಿಕೊಟ್ಟಆದ್ಯ ವಚನಕಾರ. ಅವರು ತಮ್ಮ ವಚನಗಳ ಸಾಹಿತಿಕ ಗುಣ ಹಾಗೂ ಮೌಲ್ಯಗಳಿಂದಾಗಿ ಬಸವಪೂರ್ವದ ಶ್ರೇ? ವಚನಕಾರ.ದಾಸಿಮಯ್ಯನವರ ವಚನಗಳು ಸಂಕ್ಷಿಪ್ತತೆ ಸರಳತೆ ಮತ್ತು ಗಹನವಾದ ಅರ್ಥ ಒಳಗೊಂಡಿವೆ, ಸಮಾಜದ ಡೊಂಕುಗಳನ್ನು ಬಾಹ್ಯ ಆಚರಣೆಗಳನ್ನು ನೇರವಾಗಿ ಪ್ರಶ್ನಿಸುವ ವೈಚಾರಿಕ ಧೋರಣೆ ಹೊಂದಿವೆ ಎಂದರು.
ಬನಶಂಕರಿದೇವಸ್ಥಾನದಲ್ಲಿ ಮಹಿಳೆಯರು ದೇವರ ದಾಸಿಮಯ್ಯನವರ ಭಾವಚಿತ್ರವನ್ನು ತೊಟ್ಟಿಲಲ್ಲಿ ಹಾಕಿ ತೂಗಿ ಎಸರಿಡುವ ಮೂಲಕ ಮತ್ತು ದಾಸಿಮಯ್ಯನವರ ತತ್ವಾದರ್ಶಗಳನ್ನು ಸಾರುವ ಮೂಲಕ ಅವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಪುರಸಭೆಯಲ್ಲಿ ಆಚರಣೆ : ಪುರಸಭೆಯಲ್ಲಿ ಹಾಗೂ ಶಾಂತಿನಿಕೇತರ ಕಾಲನಿ ಹತ್ತಿರ ಇರುವ ದೇವರ ದಾಸಿಮಯ್ಯ ವೃತ್ತದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಬಾವಿಕಟ್ಟಿ, ಶಿದಗಿರೇಪ್ಪ ಕಾಗಿ, ರಾಜು ಚಮಕೇರಿ, ರವಿ ಜವಳಗಿ, ಎಸ್.ಐ ನುಚ್ಚಿ, ಆಶೋಕ ಬಾಣಕಾರ, ಮಹಾದೇವ ಹುಣಶ್ಯಾಳ, ಮಲ್ಲಪ್ಪ ನಿಂಗರಗಿ, ಶ್ರೀಲಪ್ಪ ಕಿರಗಟಗಿ, ಸತೀಶ ಸೋರಗಾಂವಿ, ಚಂದ್ರು ಕಾಗಿ, ಶಂಕರ ಅಂಬಿ, ಬಿ.ಸಿ ಪೂಜೇರಿ, ಜಿ.ಎಸ್.ಗೊಂಬಿ, ರಾಜೇಶ ಭಾವಿಕಟ್ಟಿ, ಡಾ,ಎಸ್.ಕಡ್ಡಿಮನಿ, ವಿಜಯ ಬಾಡನವರ ಸೇರಿದಂತೆ ಹಲವರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್