ತಾಳಿಕೋಟೆ,ಜು,೨೩ : ಐತಿಹಾಸಿಕ ನಗರ ತಾಳಿಕೋಟೆ ಪಟ್ಟಣದಲ್ಲಿರುವ ಖಾಸ್ಗತೇಶ್ವರ ಮಠಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಜೋಡಕೊಳ್ಳಿಯ ಶ್ರೀ ಸಿದ್ದರೋಢ ಮಠದ ಶ್ರೀ ಸಿದ್ದನಾನಂದ ಭಾರತಿ ಮಹಾಸ್ವಾಮಿಗಳು ಬುಧವಾರರಂದು ಭೇಟಿ ನೀಡಿ ಶ್ರೀ ಮಠದ ಪೀಠಾಧಿಕಾರಿ ಬಾಲಶಿವಯೋಗಿ ಸಿದ್ಧಲಿಂಗ ದೇವರು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರಲ್ಲದೇ ಶ್ರೀ ಖಾಸ್ಗತಜ್ಜನ ಜಾತ್ರೆಯ ತಯಾರಿಯ ಕುರಿತು ಉಭಯ ಶ್ರೀಗಳು ಚರ್ಚಿಸಿದರು.
ಈ ಸಮಯದಲ್ಲಿ ಮಠದ ಉಸ್ತುವಾರಿ ವೇ.ಮುರಘೇಶ ವಿರಕ್ತಮಠ, ಅಜಿತ್ ಶಿವಾನಂದ ಕಲಘಟಗಿ, ಮಹಾಂತೇಶ, ಶಂಕ್ರೇಮ್ಮ ಕಲಘಟಗಿ, ಸಂತೋಷ ಘಾಯಕವಾಡ, ಸುನೀಲ್ ವಿಜಾಪೂರ, ಮೊದಲಾದವರು ಇದ್ದರು.