LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾಗಿ : ಎ.ನರಸಿಂಹಮೂರ್ತಿ  ಪುನರ್ ಆಯ್ಕೆ.

 ಗದಗ. ಜೂ. 23: ನಗರದ ಲಯನ್ಸ್ ಕ್ಲಬ್ ನಲ್ಲಿ ಶನಿವಾರ   ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ವಿಶೇಷ ವೀಕ್ಷಕರಾಗಿದ್ದ ಹೈ ಕೋರ್ಟ್ ವಕೀಲರಾದ ಪೂರ್ಣ ರವಿಶಂಕರ್, ಚಿತ್ರದುರ್ಗದ ಹಿರಿಯ ಹೋರಾಟಗಾರರಾದ ರಾಜಣ್ಣ ಕೆ. ಸಹಕಾರಿ ಕ್ಷೇತ್ರದ ತಿರುಮಲಯ್ಯ,ನವರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು, ಚುನಾವಣಾ ಪ್ರಕ್ರಿಯೆಯಲ್ಲಿ 18 ಜಿಲ್ಲೆಗಳಿಂದ ಆಯ್ಕೆ ಆದ 96 ರಾಜ್ಯ ಸಮಿತಿ ಪ್ರತಿನಿಧಿಗಳು ಸೇರಿ *ರಾಜ್ಯ ಸಂಚಾಲಕರನ್ನಾಗಿ ಎ.ನರಸಿಂಹಮೂರ್ತಿ  ರವರ ಹೆಸರನ್ನು ಬಿಜಾಪುರ ಸ್ಲಂ ಸಮಿತಿಯ ಹಿರಿಯರಾದ ಅಕ್ರಮ್ ಮಾಶಳ್ಕರ್ ಸೂಚಿಸಿದರು*, ಎಲ್ಲರು ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕರಾಗಿ ಕಲ್ಯಾಣ ಕರ್ನಾಟಕಕ್ಕೆ ಜನಾರ್ಧನ ಹಳ್ಳಿಬೆಂಚಿ, ಕಿತ್ತೂರು ಕರ್ನಾಟಕಕ್ಕೆ ಇಮ್ತಿಯಾಜ್ ಮಾನ್ವಿ, ಖಜಾಂಚಿಯಾಗಿ ಬೆಂಗಳೂರಿನ ಮಂಜುಬಾಯಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ವಿಭಾಗಿಯ ಸಂಚಾಲಕರಾಗಿ ಬೆಂಗಳೂರು ವಿಭಾಗಕ್ಕೆ ಚಂದ್ರಮ್ಮ, ಬೆಳಗಾವಿ ವಿಭಾಗಕ್ಕೆ ಶೋಭಾ ಕಮತರ್, ಕಲಬುರ್ಗಿ ವಿಭಾಗಕ್ಕೆ ರೇಣುಕಾ ಸೂರ್ಯಕಾಂತ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸಮಿತಿಯ ಹಿರಿಯ ಸದಸ್ಯರಾಗಿ ದೀಪಿಕಾ, ಅಕ್ರಮ್ ಮಾಶಾಳ್ಕರ್ , ಕೆ.ರಾಜಣ್ಣರವರನ್ನು ಆಯ್ಕೆ ಮಾಡಲಾಯಿತು, 
ಮಾಧ್ಯಮ ವಿಭಾಗದ ಸಂಚಾಲಕರನ್ನಾಗಿ ತೇಜಸ್ ಕುಮಾರ್, ಶಿವಕುಮಾರ್, ಕೃಷ್ಣಮೂರ್ತಿ ರವರುಗಳನ್ನು ಆಯ್ಕೆ ಮಾಡಲಾಯಿತು. ಕಲಾ ಮಂಡಳಿಯ ಸಂಚಾಲಕರನ್ನಾಗಿ ತುಮಕೂರಿನ ಅರುಣ್ ಟಿ.ಜಿ ಹೊಸಪೇಟೆ ವೆಂಕಮ್ಮ ರವರುಗಳನ್ನು ಆಯ್ಕೆ ಮಾಡಲಾಯಿತು. ಬೆಂಗಳೂರು ವಿಶೇಷ ಪ್ರತಿನಿಧಿಗಳನ್ನಾಗಿ ಹನುಮಂತ ಕಟ್ಟಿಮನಿ, ಅಸಂಘಟಿತ ವಿಭಾಗದ ಸಂಚಾಲಕರನ್ನಾಗಿ ಧಾರವಾಡದ ರಸೂಲ್ ನದಾಫ್ ರವರನ್ನು ಆಯ್ಕೆ ಮಾಡಲಾಯಿತು. ಲಿಂಗತ್ವ ಅಲ್ಪಸಂಖ್ಯಾತರ ವಿಭಾಗಕ್ಕೆ ಪುಷ್ಪ ಬಿಜಾಪುರ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಚಾಲಕರಾಗಿ ಯಾದಗಿರಿಯ ಈರಮ್ಮ, ಬಳ್ಳಾರಿಯ ಶೇಖರ್ ಬಾಬು , ದಾವಣಗೆರೆಯ ಪರ್ವೀನ್ ಭಾನು, ಗಂಗಾವತಿಯ ರೇಷ್ಮಾಭಾನು, ಕೊಪ್ಪಳದ ನಾಗರತ್ನ ಅಳವಂಡಿ , ವಿಜಯಪುರದ ಮುತ್ತುಭೋವಿ, ಚಿತ್ರದುರ್ಗದ ಸುಧಾ ಡಿ, ಬೆಳಗಾವಿ ಪಕೀರಪ್ಪ ತಳವಾರ್ ರವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು ಎಂದು ರಾಜ್ಯ ಸಂಚಾಲಕರಾದ ಶೇಖರ್ ಬಾಬು ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್