LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗುಗ್ಗರ ಹಟ್ಟಿಯಲ್ಲಿ ಬಸವ ಬೆಳೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ 

ಬಳ್ಳಾರಿ. 01. ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡವು ಜನಪದ ಕಲೆಗಳಲ್ಲೊಂದಾದ ತೊಗಲಗೊಂಬೆ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದೆ. ಜಾನಪದ ಕಲೆ ಉಳಿಯಬೇಕಾದರೆ ಈ ತರಹದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕೆಂದು ಅಭಿಪ್ರಾಯಪಟ್ಟರು. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ಕಾರ್ಯಕ್ರಮಗಳು ನಮ್ಮ ಗುಗ್ಗರಟ್ಟಿಯಲ್ಲಿ ನಡೆಯಲು ನಾವು ಯಾವತ್ತಿಗೂ ಕೂಡ ಸಹಕಾರ ನೀಡುತ್ತೇವೆ ಎಂದು ಗುಗ್ಗರಟ್ಟಿಯ ಹಿರಿಯ ಮುಖಂಡರಾದ ಕೆ. ಹೊನ್ನೂರ ಸ್ವಾಮಿ ರವರು 
ಈ ಸಂದರ್ಭದಲ್ಲಿ ತಿಳಿಸಿದರು. 
ಅವರು ಶ್ರೀ ಹುಲಿಕುಂಟರಾಯ ತೊಗಲುಗೊಂಬೆ ಕಲಾತಂಡ(ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಗುಗ್ಗರಟ್ಟಿಯ ಈಶ್ವರ ದೇವಸ್ಥಾನ ಆವರಣದಲ್ಲಿ "ಬಸವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಬಿ ನಾಗರಾಜ್ ಮಾತನಾಡಿ, ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾತಂಡಗಳಿಗೆ ಸಹಾಯವನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೆ.ರಾಜಶೇಖರ ಗೌಡ್ರು ಇವತ್ತಿನ ಟಿವಿ ಮತ್ತು ಮೊಬೈಲ್ ಗಳ ಹಾವಳಿಗಳಿಂದ ನಮ್ಮ ಹಳ್ಳಿಯ ಸೊಗಡಿನ ಸಂಸ್ಕೃತಿಯು ಮರೆಯಾಗುತ್ತಿದೆ ಹಾಗಾಗಿ ಈ ತರಹದ ಕಾರ್ಯಕ್ರಮಗಳು  ನಡೆಯುವುದರಿಂದ ನಮ್ಮ ನಾಡಿನ ಕಲಾ ಶ್ರೀಮಂತಿಕೆಯನ್ನು ಪೋಷಿಸಿ ಬೆಳೆಸಬಹುದು ಎಂದರು, ವೇದಿಕೆ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಿಲಾನಿ ಭಾಷಾ ರವರು ಆಲಾಪ ಸಂಗೀತ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ರವರು ಇನ್ನು  ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀ ಹುಲಿಕುಂಟರಾಯ ತೊಗಲುಗೊಂಬೆ ಕಲಾತಂಡದ ಅಧ್ಯಕ್ಷರಾದ ಕೆ.ಹೊನ್ನೂರ ಸ್ವಾಮಿಯವರು  ಪ್ರಾಸ್ತಾವಿಕವಾಗಿ  ಮಾತನಾಡಿದರು, ಗುಗ್ಗರಟ್ಟಿಯ ಸಮಾಜ ಸೇವಕರಾದ ಪುರುಷೋತ್ತಮ್ ರವರು ಸ್ವಾಗತಿಸಿದರು ಸಂಸ್ಥೆಯ ಕಾರ್ಯದರ್ಶಿ  ಲಕ್ಷ್ಮಿದೇವಿ ವಂದಿಸಿದರು. ನಂತರ ಕು. ರಾಜೇಶ್ ಮತ್ತು ತಂಡ ಕಂಪ್ಲಿ ರವರಿಂದ ಜಾನಪದ ನೃತ್ಯ,
 ತಾಯಪ್ಪ ಎಮ್ಮಿಗನೂರು ಮತ್ತು ತಂಡದವರಿಂದ ಸುಗಮ ಸಂಗೀತ,   ಗಂಗಮ್ಮ ಮತ್ತು ತಂಡ ಲಕ್ಷ್ಮಿ ನಗರ ಕ್ಯಾಂಪ್ ಇವರಿಂದ ಬಸವ ಬೆಳೆ ತೊಗಲುಗೊಂಬೆ ಪ್ರದರ್ಶನ,  ಡಿ. ವಿರೂಪಾಕ್ಷಪ್ಪ ಮತ್ತು ತಂಡ ದವರಿಂದ ಬಯಲಾಟ ಪ್ರದರ್ಶನ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾದಿಕಾರಿಗಳು ಹಾಗೂ ಹೆಚ್ಚಿನ ಜನಸಂಖ್ಯೆ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಶ್ರೀ ಹುಲಿಕುಂಟೆ ರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ಕೆ ಹೊನ್ನೂರ ಸ್ವಾಮಿ  ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ