Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫ್ರೆಂಡ್ಸ್ ಫೌಂಡೇಶನ್ ದವರು ಸಾಮಾಜಿಕ ಕಾರ್ಯ ಶ್ಲಾಘನೀಯ

ಸಂಕೇಶ್ವರ: ಸಂಕೇಶ್ವರ ಫ್ರೆಂಡ್ಸ್ ಫೌಂಡೇಶನ್ ದವರು ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿಯು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ ಅವರು ಹೇಳಿದರು.
ಪಟ್ಟಣದ ಎಲ್.ಕೆ.ಫೀಟ್ನೇಸ್ ಹಾಲ್ ನಲ್ಲಿ ಫ್ರೆಂಡ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ವಿಷೇಶ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸಮಯಪಾಲನೆ ಹಾಗೂ ಕಠಿಣ ಪರಿಶ್ರಮ ಮುಖ್ಯವಾಗಿದ್ದು,
ನಿರಂತರ ಕಲಿಕೆ ಮತ್ತು ಸಿಗುವ ಅವಕಾಶಗಳನ್ನು ಬಳಸಿಕೊಂಡಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗತ್ತದೆ ಎಂದರು.
ಡಾ. ಸುನೀಲ ಕಾಂಬಳೆ ಮಾತನಾಡಿ,ಸಂಕೇಶ್ವರ ಫ್ರೆಂಡ್ಸ್ ಫೌಂಡೇಶನ್ ಕೇವಲ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೆ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ಅಮೃತಾ ಪಾಟೀಲ (ಶೇ.95.52), ವರ್ಷಾ ಪಾಟೀಲ (ಶೇ.95.84), ಕೋಮಲ ಕುರಾಡೆ (ಶೇ.90.24), ರಾಜೇಶ ಕಾಂಬಳೆ (ಶೇ.87.84), ಉಮುಲ್ಕಯರ್ ನದಾಫ್ (ಶೇ.94), ಪ್ರಥಮೇಶ ನಾಯ್ಕ (ಶೇ.88.96), ಆದರ್ಶ ಚೌಗಲೆ (ಶೇ.94.56), ಲಕ್ಷ್ಮೀ ಸುಲ್ತಾನಪುರೆ (ಶೇ.98.40), ಭಾಗ್ಯಶ್ರೀ ಸೋಮಶೆಟ್ಟಿ (ಶೇ.94), ಗುರುಕಿರಣ ದಡ್ಡಿಮನಿ (ಶೇ.94), ಸ್ನೇಹಾ ದನಗರ (ಶೇ.87.52), ಆದಿತ್ಯಾ ಚೌಗಲಾ (ಶೇ.97.76) ಅವರನ್ನು ಸತ್ಕರಿಸಲಾಯಿತು.
ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿದ ನಿಡಸೋಸಿ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ಅಂಕಿತ ಕಾರತಗಿ (ಶೇ.99.66) ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ಉಮೇಶ ಗೋಟೂರೆ, ಉಪಾಧ್ಯಕ್ಷ ಪ್ರಕಾಶ ಶಿಂಧೆ, ಖಜಾಂಚಿ ರಾಜಕುಮಾರ ಸಂಸುದ್ಧಿ, ಸದಸ್ಯರಾದ ಮಯೂರ ಮಾಳಗಿ, ಪ್ರಭಾಕರ ಪಾಟೀಲ, ವಿನಯ ಭಕಾಯಿ, ಅಸ್ಲಮ್ ಮುಲ್ತಾನಿ, ದಯಾನಂದ ಆಲೂರೆ, ಮುತ್ತುರಾಜ ಕೋಳಿ, ಯಾಸೀನ ಜಕಾತೆ, ದೀಪಕ ಬಾರಾಮತಿ, ರೋಹಿತ ದೊಡ್ಡಲಿಂಗ, ರಮೇಶ ಬಡಿಗೇರ, ಸಿಆರ್ ಪಿ ಮಹೇಶ ಪೂಜಾರ,‌ಶಿಕ್ಷಕರಾದ ಶಂಕರ ಚುನಮುರಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*