LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಬೋಧಿಸಲು ಮನವಿ

ಮೂಡಲಗಿ - ಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಮೂಡಲಗಿ ವಲಯದಲ್ಲಿ ಬರುವ ೧ ರಿಂದ ೧೦ನೇ ತರಗತಿಯ ಮಕ್ಕಳಿಗೆ ಬೋಧಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಅವರಿಗೆ ಶ್ರೀ ಸತ್ಯಸಾಯಿ ಸಮಿತಿ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು.
ಮೂಡಲಗಿಯಲಿ  ಸತ್ಯಸಾಯಿ ಶಿರಡಿ ಸಾಯಿ ಭವ್ಯವಾದ ಮಂದಿರ ದೇವಸ್ಥಾನ ಕಟ್ಟಲಾಗಿದೆ, ಅದರ ಅಡಿಯಲ್ಲಿ ಸಾಯಿ ಭಕ್ತರು ಆಧ್ಯಾತ್ಮಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಅರಳಿಸುವ ಸದುದ್ದೇಶದಿಂದ ಶ್ರೀ ಸತ್ಯ ಸಾಯಿ ಬಾಲ ವಿಕಾಸ ಕಾರ್ಯಕ್ರಮವು ೧೯೬೯ ರಿಂದ ಭಗವಾನರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ  ಮೂಡಲಗಿಯಲ್ಲಿ ಕಳೆದ ೨೦ ವ?ದಿಂದ ಪ್ರಾರಂಭವಾಗಿದೆ. ಪ್ರಪಂಚದಲ್ಲಿ ೧೨೦ ದೇಶಗಳಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಇವೆ. ಸದರಿ ೨೦೨೬-೨೭ ಶೈಕ್ಷಣಿಕ ವ?ದಿಂದ ಕರ್ನಾಟಕ ಸರ್ಕಾರ ತರಗತಿ ೧ ರಿಂದ ೧೦ ನೇ ತರಗತಿಯವರೆಗೆ ಮಕ್ಕಳಿಗೆ ಮೌಲ್ಯ ಶಿಕ್ಷಣ ಪ್ರಾರಂಭಿಸಿದೆ. ಅದಕ್ಕೆ ಪೂರಕ ಅಭ್ಯಾಸವಾಗಿ ತಾವು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಶ್ರೀ ಸತ್ಯ ಸಾಯಿ ಬಾಲ ವಿಕಾಸ ತರಗತಿಗಳನ್ನು ಕಲಿಸಲು ಅನುಮತಿಸಬೇಕಾಗಿ ಶ್ರೀ ಸತ್ಯ ಸಾಯಿ ಸಮಿತಿ ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ. 
ಈ ಸಂದರ್ಬದಲ್ಲಿ ಸಮಿತಿ ಸದಸ್ಯರಾದ ಹನುಮಂತ ಸೊರಗಾಂವಿ, ಕೆ.ಬಿ.ನಾವಳ್ಳಿ, ಬಿ.ಎಮ್.ನಂದಿ, ಐ.ಎ.ಪಾಟೀಲ, ಕೆ.ಆರ್.ಕೊತ್ತಲ, ಎ.ಜಿ.ಶರಣಾರ್ಥಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್