LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಏ.೭ ರಂದು ಮೂಡಲಗಿಗೆ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥ ಆಗಮನ

ಮೂಡಲಗಿ- ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥವು ಏ. ೭ರಂದು ಮುಂಜಾನೆ ೯ ಗಂಟೆಗೆ ನಾಗನೂರ ಪಟ್ಟಣಕ್ಕೆ ಆಗಮಿಸುವದು ಎಂದು ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ಸಂಚಾಲಕ ಹನುಮಂತ ಸೊರಗಾವಿ ಹೇಳಿದರು.
ಅವರು ಲಕ್ಷ್ಮೀನಗರದ ಶ್ರೀಸಾಯಿ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗನೂರದಿಂದ ಸ್ವಾಗತಿಸಿಕೊಂಡು ಮೂಡಲಗಿ ಪಟ್ಟಣದ ಎಸ್.ಎಸ್.ಆರ್. ಶಾಲೆಯ ಮುಂದಿನ ಮಾರ್ಗದಿಂದ ಆರತಿ, ಕುಂಭ ಮೇಳ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಪಟ್ಟಣದ ಕಲ್ಮೇಶ್ವರ ಸರ್ಕಲ್, ಕಿತ್ತೂರ ಚೆನ್ನಮ್ಮಾ ಸರ್ಕಲ್, ಕರೆಮ್ಮಾದೇವಿ ಸರ್ಕಲ್, ಸಂಗಪ್ಪಣ್ಣ ಅಂಗಡಿ ಸರ್ಕಲ್ ಮೂಲಕ ಶ್ರೀ ಸಾಯಿ ಮಂದಿರಕ್ಕೆ ಸಾಗಿಬರುವದು. ಮದ್ಯಾಹ್ನ ೧ಗಂಟೆಗೆ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ ನಂತರ ಅನ್ನಪ್ರಸಾದ ನಡೆಯಲಿದೆ ಎಂದು ಹೇಳಿದರು.
ಸೇವಾ ಕ್ಷೇತ್ರದ ಸದಸ್ಯ ಕೆ.ಬಿ.ನಾವಳ್ಳಿ ಮಾತನಾಡಿ, ಏ. ೭ರಂದು ಮುಂಜಾನೆ ೧೦ಗಂಟೆಗೆ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ಶೋಭಾ ರಥಯಾತ್ರೆಯನ್ನು ಪಟ್ಟಣದ ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿ ಶ್ರೀ ಶಿವಾನಂದ ಸ್ವಾಮಿಗಳು, ಅರಬಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸೇವಾ ಸಂಯೋಜಕಿ ಪ್ರೀಯಾ ಪಿ. ಪೈ, ಸತ್ಯಸಾಯಿ ಸೇವಾ ಸಂಸ್ಥೆಗಳ ಬೆಳಗಾವಿ ಜಿಲ್ಲಾಧ್ಯಕ್ಷ ವಸಂತ ಬಾಳಿಗಾ ಉದ್ಘಾಟಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಮ್.ನಂದಿ, ಐ.ಏ. ಪಾಟೀಲ, ರವಿ ನಂದಗಾವಿ, ಲಕ್ಷ್ಮಣ ಕಂಕಣವಾಡಿ, ಮಲ್ಲಪ್ಪ ಮುರಗೋಡ, ಮಹೇಶ ಹಿರೇಮಠ, ಪಡದಪ್ಪ ಕೋತಿನ, ಪ್ರಕಾಶ ಕಂಕಣವಾಡಿ

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್