LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಜ್ಯಮಟ್ಟದ "ಹುಲಿಕುಂಟೆ ಶ್ರೀ" ಪ್ರಶಸ್ತಿ ಪ್ರದಾನ ಸಮಾರಂಭ 







ಬಳ್ಳಾರಿ. ಮಾ. 31: ಪ್ರಪಂಚದಲ್ಲಿ  ಪ್ರಖ್ಯಾತಿಯನ್ನು  ಪಡೆದಿರುವ ಕಲೆ ತೊಗಲುಗೊಂಬೆ

ಮನುಷ್ಯ ಜೀವನದ ಒತ್ತಡಗಳನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು

ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ ಮಧುಸೂಧನ ಕಾರಿಗನೂರು ಅಭಿಪ್ರಾಯ ಪಟ್ಟರು.


ಅವರು  ತೊಗಲುಗೊಂಬೆ ಕಲಾವಿದ ದಿ.ಶ್ರೀ ಹುಲೆಪ್ಪನವರ ಸ್ಮರಣಾರ್ಥವಾಗಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ನಗರದ  ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ

ಸಂಡೂರಿನ ಪ್ರಭುದೇವರ ಮಠದ  ಶ್ರೀ ಶ್ರೀ ಶ್ರೀ ಮಾ. ನೀ. ಪ್ರ. ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ

ಜೀವನದ ಮೌಲ್ಯಗಳನ್ನು ನಾವು ರಂಗದಲ್ಲಿ ಕಲಿಯುತ್ತೇವೆ ಪ್ರಶಸ್ತಿಯನ್ನು ಸ್ವೀಕರಿಸಿದ ಎಲ್ಲಾ ಗಣ್ಯರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ತೊಗಲುಗೊಂಬೆ ಆಟ ರಾಜರ ಆಶ್ರಯಕ್ಕಿಂತ ಜನರ ಆಶ್ರಯದಲ್ಲಿ ಬೆಳೆಯಿತು. ಬಳ್ಳಾರಿಯಲ್ಲಿ ನುರಿತ ಕಲಾವಿದರನ್ನು ಗುರುತಿಸುವ ಕೆಲಸ ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜೆ ಟಿ ಫೌಂಡೇಶನ್ ಅಧ್ಯಕ್ಷ  ತಿಮ್ಮಪ್ಪ ಜೋಳದ ರಾಶಿ ಮಾತನಾಡಿ

ದೇಶ ವಿದೇಶದಲ್ಲಿ ತೊಗಲುಗೊಂಬೆ ನಾಟಕ ಪ್ರದರ್ಶನಕ್ಕೆ ತುಂಬಾ ಬೇಡಿಕೆ ಇದೆ ಎಲೆ ಮರ ಕಾಯಿಯಂತಿರುವ  ಕಲಾವಿದರನ್ನು ಹುಡುಕಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಷಯ ಎಂದರು.


 ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿಯನ್ನು ಪಿ  ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡ ಕೇಶವ ರೆಡ್ಡಿ ಅವರ ಪುತ್ರರಾದ ರಾಘವ ರೆಡ್ಡಿ ವಹಿಸಿಕೊಂಡಿದ್ದರು.

ವೇದಿಕೆಯ ಮೇಲೆ ಡಾ. ರಾಮ್ ಕಿರಣ್, ಜಿಲಾನಿ ಭಾಷಾ, ದೊಡ್ಡಬಸಪ್ಪ ಯಾಟಿ  ಉಪಸ್ಥಿತರಿದ್ದರು.

ನಂತರ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ ಇವರು ಈ ವರ್ಷದ ಹುಲಿಕುಂಟೆ ಶ್ರೀ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 27 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ತುರನೂರ್ ಅವರಿಂದ ಸುಗಮ ಸಂಗೀತ, ಎಸ್ ಕೆ ಆರ್ ಜಿಲಾನಿ ಭಾಷಾ ಅವರಿಂದ ಸಮೂಹ ನೃತ್ಯ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ರೇಣುಕಾ ಮಹಾತ್ಮೆ ಬೈಲಾಟ ಪ್ರದರ್ಶನ ನಡೆಸಲಾಯಿತು.



 ಸಂಸ್ಥೆಯ ಅಧ್ಯಕ್ಷ  ಕೆ. ಹೊನ್ನೂರಸ್ವಾಮಿ  ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು ಪ್ರಾರ್ಥನೆ  ಜಡೆೆಶ ಎಮ್ಮಿಗನೂರು ವಂದನಾರ್ಪಣೆ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಲಕ್ಷ್ಮಿದೇವಿ ಕಾರ್ಯಕ್ರಮದ ನಿರೂಪಣೆ  ಬಸವರಾಜ ಅಮಾತಿ ಮತ್ತು ವಿಷ್ಣು ಹಡಪದ ನೆರವೇರಿಸಿಕೊಟ್ಟರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ