ತಾಳಿಕೋಟೆ,ಜು,೨೦ : ತಾಳಿಕೋಟೆಯ ಶ್ರೀ ಗ್ರಾಮದೇವತೆ(ದ್ಯಾಮವ್ವ)ಯ ಭವ್ಯ ಜಾತ್ರಾಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯು ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸುವ ಮೂಲಕ ಅತ್ಯಂತ ಯಶಸ್ವಿಯಾಗಿ ಸಂಗಮೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್ ಪಾಟೀಲ ಹಾಗೂ ಜಾತ್ರೋತ್ಸವದ ಬಾಪುಗೌಡ ಪಾಟೀಲ ಸರ್ವಜ್ಞ ವಿದ್ಯಾಪೀಠ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಸಚೀನ ಪಾಟೀಲ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.
ರವಿವಾರರಂದು ಬೆಳಿಗ್ಗೆ ೧೨ ಘಂಟೆಗೆ ಪಾರಂಭವಾದ ಈ ಕಬ್ಬಡ್ಡಿ ಪಂದ್ಯಾವಳಿಯು ಜಾತ್ರಾ ಮಹೋತ್ಸವ ಸಮೀತಿ ಹಾಗೂ ಯುವಕ ಮಂಡಳಿಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಈ ಕ್ರೀಡಾಕೂಟವು ಸುತ್ತಮುತ್ತಲಿನ ಸಾವಿರಾರು ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ಪ್ರಥಮ ಬಹುಮಾನವಾಗಿ ೩೦ ಸಾವಿರ ರೂ., ದ್ವಿತೀಯ ಬಹುಮಾನವಾಗಿ ೨೦ ಸಾವಿರ ರೂ. ತೃತೀಯ ಬಹುಮಾನವಾಗಿ ೧೫ ಸಾವಿರ ರೂ. ನಾಲ್ಕನೇ ಬಹುಮಾನವಾಗಿ ೧೦ ಸಾವಿರ ರೂ. ನಗದು ಬಹುಮಾನ ಆಯೋಜಿಸಲಾಗಿದೆ.
ಭರ್ಜರಿ ಆರಂಭ ತೀರ್ವ ಪೈಪೋಟಿ: ರಾಜ್ಯದ ವಿವಿದ ಮೂಲೆಗಳಿಂದ ಆಗಮಿಸಿದ ಸುಮಾರು ೨೦ ಕ್ಕೂ ಹೆಚ್ಚು ಖ್ಯಾತ ಕಬ್ಬಡ್ಡಿ ತಂಡಗಳು ಈ ಪಂದ್ಯಾವ:ಳಿಯಲ್ಲಿ ಭಾಗವಹಿಸಿದ್ದವು. ಪ್ರತಿಯೊಂದು ಪಂದ್ಯದಲ್ಲೂ ಆಟಗಾರರು ಪ್ರದರ್ಸಿಸಿದ ಚುರುಕುತನ, ಬಲಿಷ್ಠ ಹಿಡಿv, ಚಾಣಾಕ್ಷ ದಾಳಿಗಳುಪ್ರೇಕ್ಷಕರ ಮೈ ರೋಮಾಂಚನಗೊಳಿಸಿದವು. ಚೆಪ್ಪಾಳೆಗಳ ಮೂಲಕ ಆಟಗಾರರನ್ನು ಹುರಿದುಂಬಿಸಿದರು.
ಶಿಸ್ತುಭದ್ದ ಆಯೋಜನೆ: ಶ್ರೀ ಗ್ರಾಮದೇವತೆ ಜಾತ್ರಾಮಹೋತ್ಸವದ ಅಂಗವಾಗಿ ಆಗಮಿಸಿದ ಕ್ರೀಡಾಪಟುಗಳಿಗೆ ಆಹಾರದ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ರೋಮಾಂಚಕ ಪಂದ್ಯ: ಅಂತಿಮ ಹಣಾಹಣಿಕಯಲ್ಲಿ ಕಡೆಯ ಕ್ಷಣದ ವರೆಗೂ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಅತ್ತುತ್ತಮ ತಂತ್ರಗಾರಿಕೆ ಪ್ರದರ್ಶಿಸಿದ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.
ಒಟ್ಟಾರೆಯಾಗಿ ಭಾರತದ ಗ್ರಾಮೀಣ ಭಾಗದ ದೇಸೀ ಕ್ರೀಡೆಯಾಗಿರುವ ಕಬ್ಬಡ್ಡಿ ಪಂದ್ಯಾವಳಿ ಕ್ರೀಡಾಸ್ಪೂರ್ತಿಯನ್ನು ಹೆಚ್ಚಿಸುವದರೊಂದಿಗೆ ಜನಮನ ರಂಜಿಸುವದರೊಂದಿಗೆ ಶ್ರೀ ಗ್ರಾಮದೇವತೆ ಜಾತ್ರಾಮಹೋತ್ಸವದ ಸ್ಮರಣೀಯ ಕ್ಷಣವಾಯಿತು.