LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಜ್ಯಮಟ್ಟದ ಉತ್ಸವ ಸಂಕಲ್ಪ-೨೦೨೬ ರ ಪ್ರಶಸ್ತಿ ಪ್ರಧಾನ ಸಮಾರಂಭ



ಧಾರವಾಡ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದು ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಸ್ಪರ್ಧೆಗಳನ್ನು ಸವಾಲಾಗಿ ಸ್ವಿಕರಿಸಬೇಕು ಇದು ಜೀವನದ ಯಶಸ್ಸು ಗೊಳ್ಳಲು ಸಹಕಾರಿಯಾಗುತ್ತದೆ. ಅವಕಾಶಗಳು ಬಂದಾಗ ಅದನ್ನು ಸರಿಯಾಗಿ ಸದುಪಯೋಗ ಪಡೆದಕೊಂಡು ಯಶಸ್ಸನ್ನು ಪಡೆದುಕೊಳ್ಳಿ ಎಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಉತ್ಸವ ಸಂಕಲ್ಪ-೨೦೨೬ ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ಯಾಥಿಗಳನ್ನು ಉದ್ದೇಶಿಸಿ ಕ.ವಿ.ವಿಯ ಉಪಕುಲಪತಿಗಲಾದ ಡಾ. ಎ.ಎಮ್ ಖಾನ ಮಾತನಾಡುತ್ತಿದ್ದರು. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಗೆಲುವಿಗೆ ಸಮ. ಪ್ರಶಸ್ತಿಗಳು ಬರಲಿ ಬಿಡಲಿ ಅದರ ಅನುಭವ ಮಾತ್ರ ಜೀವನಕ್ಕೆ ಪಾಠವಾಗಲಿದೆ ಸ್ಪರ್ಧೆಗಳ ಆಯೋಜನೆ ಕೂಡ ಒಂಡು ಕಲೆ ಇದನ್ನು ವಿದ್ಯಾರ್ಜನೆ ಮಟ್ಟದಲ್ಲಿ ನೀವು ಕಲಿತರೆ ಮುಂದೆ ಬಹದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಬಹುದು ಎಂದು ಹೇಳಿದರು.

ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಾ ಈ ಸಂಕಲ್ಪ ಉತ್ಸವದಲ್ಲಿ ೬೦ ಕ್ಕಿಂತ ಹೆಚ್ಚು ಕಾಲೇಜುಗಳಿಂದ ೮೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಯಾವುದೇ ಅವ್ಯವಸ್ಥೆಯಾಗದಂತೆ ಈ ಕಾರ್ಯಕ್ರಮ ಯಶಸ್ವಿಯಾಗಲು ಆಯೋಜಕರು ಶಿಕ್ಷಕರು-ಶಿಕ್ಷಕೇತರ ಮತ್ತು ವಿದ್ಯಾಥಿಗಳ ಶ್ರಮ ಶ್ಲಾಘನೀಯ. ಆ ಕೇವಲ ಸ್ಫರ್ಧೆಯಲ್ಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಒಂದು ಯೋಜನೆ ಏಕೆಂದರೆ ಈ ಉತ್ಸವದಿಂದಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ಕಲಿಯುತ್ತಾರೆ. ತಮ್ಮಲ್ಲಿರುವ ಕುಂದುಕೋರತೆಗಳನ್ನು ಸರಿಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಜೆ.ಎಸ್.ಎಸ್ ಅನ್ನ, ಜ್ಞಾನ, ಸಮಯ ಪ್ರಜ್ಞೆ, ಉದ್ಯೋಗ ಹಾಗೂ ಶಿಸ್ತಿಗೆ ಹೆಸರಾಗಿದೆ. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಶ್ರಮಿಸಲಿದೆ ಎಂದು ಹೇಳಿದರು.. ಈ ಸಮಾರಂಭದಲ್ಲಿ ಶ್ರೀಮತಿ ವಾಣಿಶ್ರೀ ಪ್ರಸಾದ, ಡಾ. ಸೂರಜ್ ಜೈನ್, ವಿವೇಕ ಲಕ್ಷ ಮಹೇಶ್ವರ, ಡಾ. ಆರ್. ವಿ ಚಿಟಗುಪ್ಪಿ, ಡಾ. ಜಿನಪ್ಪ ಕುಂದಗೋಳ, ಶೃತಿ ಶೆಟ್ಟಿ, ಶ್ರವಣಕುಮಾರ ಯೋಗಿ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕು. ರಕ್ಷಿತಾ ವಾಲಿ ಸ್ವಾಗತಿಸಿದರು, ಕು. ರವಿ ಇಂಡಿ ವಂದಿಸಿದರು. ನವ್ಯಾ ಭಟ್ ಮತ್ತು ಅಮೃತಾ ಜಿ ನಿರೂಪಿಸಿದರು

ಪ್ರಶಸ್ತಿಗಳು

ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ ಪಡೆದುಕೊಂಡಿತು. ಈ ತಂಡಕ್ಕೆ ಟ್ರೋಫಿಯೊಂದಿಗೆ ಒಟ್ಟು ರೂ.೩೦,೦೦೦/- ನಗದು ನೀಡಲಾಯಿತು. ಪ್ರಥಮ ರನ್ನರಆಪ್ ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಪಡೆದುಕೊಂಡಿತು. ಈ ತಂಡಕ್ಕೆ ಟ್ರೋಫಿ, ರೂ.೨೦,೦೦೦/- ನಗದು ನೀಡಲಾಯಿತು. ದ್ವಿತೀಯ ರನ್ನರಅಪ್ ಸ್ಥಾನವನ್ನು ಜೈನ ಪದವಿ ಕಾಲೇಜು ಪಡೆದಿದ್ದು, ಈ ತಂಡಕ್ಕೆ ಟ್ರೋಫಿ ನೀಡಲಾಯಿತು.

ವೈಯಕ್ತಿಕವಾಗಿ ನೀಡುವ ಪ್ರಶಸ್ತಿಗಳಲ್ಲಿ ಕ್ವಿಜ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಜೆ.ಜಿ ಕಾಮರ್ಸ ಕಾಲೇಜು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಕಿಟೆಲ್ ವಿಜ್ಞಾನ ಮಹಾವಿದ್ಯಾಲಯ ಪಡೆದಿದೆ. ತೃತೀಯ ಸ್ಥಾನವನ್ನು ನವಲಗುಂದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪಡೆದಿದೆ.

ಟ್ರೇಸರ್‌ಹಂಟ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಡೆದಿದೆ. ದ್ವಿತೀಯ ಸ್ಥಾನವನ್ನು ಎಸ್.ಸಿ ಬಾಳೆಕುಂದ್ರಿ ಪದವಿ ಕಾಲೇಜು ಬೆಳಗಾವಿ ಪಡೆದಿದೆ. ತೃತೀಯ ಸ್ಥಾನವನ್ನು ಪೀಪಲ್ ಟ್ರೀ ಕಾಲೇಜು ಬೆಳಗಾವಿ ಪಡೆದಿದೆ.

ಅಡ್ವರ್ಟೈಸ್‌ಮೆಂಟ್ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಜೆ.ಎಸ್.ಎಸ್ ಬನಶಂಕರಿ ಪದವಿ ಕಾಲೇಜು ಧಾರವಾಡ ಪಡೆದಿದೆ. ತೃತೀಯ ಸ್ಥಾನವನ್ನು ಜೈನ ಪದವಿ ಕಾಲೇಜು ಹುಬ್ಬಳ್ಳಿ ಪಡೆದಿದೆ.

ಫೋಟೋಗ್ರಾಫಿಯಲ್ಲಿ ಪ್ರಥಮ ಸ್ಥಾನವನ್ನು ಎ.ಜಿ.ಎಮ್.ಆರ್ ಪದವಿ ಕಾಲೇಜು ಹುಬ್ಬಳ್ಳಿ ಪಡೆದಿದೆ. ದ್ವಿತೀಯ ಸ್ಥಾನವನ್ನು ಹಳಿಯಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪಡೆದಿದೆ. ತೃತೀಯ ಸ್ಥಾನವನ್ನು ಜೈನ ಪದವಿ ಹುಬ್ಬಳ್ಳಿ ಕಾಲೇಜು ಪಡೆದುಕೊಂಡಿದೆ.

ಸಾಂಸ್ಕೃತಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡ ದ್ವಿತೀಯ ಸ್ಥಾನವನ್ನು ಸಿ.ಎಸ್.ಐ ವಿಜ್ಞಾನ ಮಹಾವಿದ್ಯಾಲಯ ಧಾರವಾಡ ಪಡೆದಿದ್ದು, ತೃತೀಯ ಸ್ಥಾನವನ್ನು ಜೆ.ಎಸ್.ಎಸ್ ಬನಶಂಕರಿ ಪದವಿ ಕಾಲೇಜು ಧಾರವಾಡ ಪಡೆದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ