LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿದ್ಯಾರ್ಥಿಗಳು ಪರಿಶ್ರಮಪಟ್ಟು ಓದುವ ಜೊತೆಗೆ ಶಿಸ್ತು ರೂಡಿಸಿಕೊಳ್ಳಬೇಕು: ವೆಂಕಟೇಶ ಕುಲಕರ್ಣಿ 

ಅಥಣಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪರಿಶ್ರಮಪಟ್ಟು ಓದುವ ಜೊತೆಗೆ ಶಿಸ್ತು ರೂಡಿಸಿಕೊಳ್ಳಬೇಕು ಎಂದು ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವೆಂಕಟೇಶ್ ಕುಲಕರ್ಣಿ ಹೇಳಿದರು 
 ಅವರು ಅಥಣಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಭಾಗ-1 ಇಲ್ಲಿ ಏರ್ಪಡಿಸಿದ ಪಾಲಕರ ದಿನಾಚರಣೆಯ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದರು. ತಂದೆ ತಾಯಂದಿರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷವಾಗಿ ಆದ್ಯತೆ ನೀಡಿ ಆದ್ಯತೆ ನೀಡಿದರೆ ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತಗೊಳಿಸದೆ ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಪಾಲಕರು ಮುಂದಾಗಬೇಕು ಎಂದು ಕರೆ ನೀಡಿದರು.
 ಮುಖ್ಯ ಅತಿಥಿ ಸ್ಥಾನ ವಹಿಸಿದ ಎಸ್ಎಂಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಇನಾಮದಾರ ಅವರು ಮಾತನಾಡಿ ವಿದ್ಯಾರ್ಥಿಗಳು   ಮೊಬೈಲ್ ನಲ್ಲಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡದೆ ಮಿತವಾಗಿ ಮೊಬೈಲನ್ನು ಬಳಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆಯಬೇಕು.    ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಎಂದರೆ ಒಂದು ಇಡೀ ಕುಟುಂಬಕ್ಕೆ ಸಂಸ್ಕಾರ ಮತ್ತು ಪ್ರಗತಿಯ ದಾರಿ ತೋರಿಸಿದಂತೆ. ಅಂತಹ ಹೆಣ್ಣು ಮಕ್ಕಳನ್ನು ಇಷ್ಟು ದೂರದ ಊರಿಗೆ ಕಳುಹಿಸಿ, ಓದಿಸುತ್ತಿರುವ ನಿಮ್ಮೆಲ್ಲ ಪಾಲಕರ ಧೈರ್ಯ ಮತ್ತು ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 ನಿಲಯ ಪಾಲಕರಾದ ಪಾರ್ವತಿ ಮಲಗೌಡರ ಅವರು ಮಾತನಾಡಿ ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುವಾಗ ಪ್ರತಿಯೊಬ್ಬ ತಂದೆ-ತಾಯಿಯ ಮನಸ್ಸಿನಲ್ಲಿ ನೂರು ಆತಂಕಗಳಿರುತ್ತವೆ. ಮಗಳು ಸರಿಯಾಗಿ ಊಟ ಮಾಡುತ್ತಿದ್ದಾಳೋ ಇಲ್ಲವೋ, ಸುರಕ್ಷಿತವಾಗಿದ್ದಾಳೋ ಇಲ್ಲವೋ, ಓದುತ್ತಿದ್ದಾಳೋ ಇಲ್ಲವೋ ಎನ್ನುವ ಚಿಂತೆ ಸಹಜ. ಆದರೆ, ಮನೆಗಿಂತಲೂ ಶಿಸ್ತು, ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಮಕ್ಕಳು ಈ ಹಾಸ್ಟೆಲ್ ನಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳುತ್ತಾ  ಪಾಲಕರ ಸಹಯೋಗ ಕೋರಿದರು.
 ಪಟ್ಟಣದ ಜೆ.ಎ. ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಚಂದ್ರಶೇಖರ ಹಾಗೂ ದಾಸರೆಡ್ಡಿ ಇವರು ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.
 ವಿದ್ಯಾರ್ಥಿನಿಯರಾದ ಲಕ್ಷ್ಮಿ ಯರಗಲ್ ಹಾಗೂ ರಕ್ಷಿತಾ ನಾವಿ ವಸತಿ ನಿಲಯದ ಬಗ್ಗೆ  ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು 
ವಿದ್ಯಾರ್ಥಿನಿಯಾದ ಸವಿತಾ ತಾವಂಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು 
ಈ ಸಂದರ್ಭದಲ್ಲಿ ಪ್ರಭಾರಿ ವಿಸ್ತರಣಾಧಿಕಾರಿಯಾದ ಅಶೋಕ ಸತ್ತಿಗೌಡರ,ಲಕ್ಷ್ಮಿ ಕೋಳಿ, ದೀಪಾ ಕನಮಡಿ, ಬಾಬುಸಾಬ್ ಗಸ್ತಿ, ಸಿಎಸ್‌ ಯಡ್ರಾವಿ, ಶ್ರೀಕಾಂತ್ ಕಾಂಬ್ಳೆ, ಉದಯ್ ಕಾಂಬಳೆ, ಎ. ವಿ. ಜೇಡರ, ಭೀಮಶಿ ಚಾಣಗಿ, ಗೌರವ ಸಿಂಧೂರ್, ಪ್ರಕಾಶ್ ಆಲಗೂರು, ಸುಜಾತ ಕೊಚರಿ, ಯಲ್ಲವ್ವ ತಾವಂಶಿ, ಜ್ಯೋತಿ ದೇಸಾಯಿ, ಮೀನಾಕ್ಷಿ ಬುಲೆಕರ ಹಾಗೂ ಸಿಬ್ಬಂದಿಗಳಾದ ಲಕ್ಷ್ಮಿ ಕತ್ತಿ, ರಾಜೇಶ್ವರಿ ತೊಡಕರ, ಲಕ್ಷ್ಮಿ ಎಣ್ಣಿ,ಸೇರಿದಂತೆ ಅನೇಕ ಪಾಲಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್