ತಾಳಿಕೋಟೆ, ತಾಳಿಕೋಟೆಯ ಆರಾಧ್ಯದೈವ ಶ್ರೀ ಗ್ರಾಮದೇವತೆ(ದ್ಯಾಮವ್ವ)ಯ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರರಂದು ಪಟ್ಟಣದ ರಾಜವಾಡೆಯಲ್ಲಿ ಸಾಯಂಕಾಲ ೭ ಘಂಟೆಯಿಂದ ಜಾನಪದ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.
ಈ ಹಾಸ್ಯ ಕಾರ್ಯಕ್ರಮದಲ್ಲಿ ವಿರೇಶ ವಾಲಿ ಅವರ ರಸಮಂಜರಿ ಹಾಗೂ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ವರುಣಾ ಚ್ವಹಾಣ ಇವರಿಂದ ಸಂಗೀತ ಹಾಗೂ ಜ್ಯೂ. ಪುನೀತರಾಜಕುಮಾರ ಖ್ಯಾತಿಯ ರಾಘವೇಂದ್ರ ಭಸ್ತಿ ಮತ್ತು ಜ್ಯೂ. ದಿನೇಶ್, ಹಾಗೂ ಮಹಾಂತೇಶ ತಾಳಿಕೋಟೆ ಅವರು ತಮ್ಮ ಹಾಸ್ಯ, ಹಾಗೂ ಸಿನಿಮಾ ಹಾಡುಗಳ ಮೂಲಕ ಜನಮನ ರಂಜಿಸಿದರು.
ನಂತರ ರಾತ್ರಿ ೧೧ ಘಂಟೆಯಿಂದ ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರೀ ನಾಟ್ಯಸಂಘ ಇವರಿಂದ "ಮುತ್ತಿನಂತ ಅತ್ತಿಗೆ" ಎಂಬ ಸಾಮಾಜಿಕ ನಾಟಕ ಜರುಗಿತು.