LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ; ಯಶವಂತರಾಯಗೌಡ ಪಾಟೀಲ

ಇಂಡಿ :

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಲೊಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ೬ ತಿಂಗಳಲ್ಲಿ ಮತಕ್ಷೇತ್ರ ಶೇ.೯೦ ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ೪೦ ವರ್ಷಗಳ ಕಾಲ ನಮ್ಮ ಮನೆತನಕ್ಕೆ ಮತ ನೀಡಿ ಆಶೀರ್ವಾದ ಮಾಡಿದ ಮತದಾರರನ್ನು ಜೀವನದುದ್ದಕ್ಕೂ ಸ್ಮರಿಸುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

೩ ಸಾವಿರ ಕೋಟಿ ಅನುಧಾನದಲ್ಲಿ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಆರಂಭಗೊಂಡಿದ್ದು, ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ ೨೮ ಸಾವಿರ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದರಿಂದ ರೈತರಿಗೆ ಆರ್ಥಿಕ ಅನುಕೂಲವಾಗಲಿದೆ. ಹ್ಯಾಟ್ರಿಕ್ ಗೆಲುವು ನೀಡಿದ ಮತದಾರರ ಋಣ ತೀರಿಸಲು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಈ ಭಾಗಕ್ಕೆ ತಂದಿರುವೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯುತ್ ವಿತರಣಾ ಕೇಂದ್ರಗಳಿದ್ದು, ಈ ಭಾಗ ನೀರಾವರಿಯಾದರೆ ಸಾಲದು, ನೀರಾವರಿಗೆ ವಿದ್ಯುತ್ ಅವಶ್ಯಕ ಬೇಕು ಎಂಬ ದೂರದೃಷ್ಠಿಯಿಂದ ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಜಲಧಾರೆ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ. ಭೀಮಾನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಮಹಾರಾಷ್ಟ್ರ ಸರ್ಕಾರದಿಂದ ಭೀಮಾನದಿಗೆ ನೀರು ಮಳೆಗಾಲದಲ್ಲಿ ಭೀಮಾನದಿ ಹರಿಯುವಂತೆ ಬೇಸಿಗೆಯಲ್ಲಿಯೂ ಭೀಮಾನದಿಗೆ ನೀರು ಹರಿಸಲಾಗಿದೆ ಎಂದರು. 

ಇಂಡಿ ಮತಕ್ಷೇತ್ರ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬ ಚಿಂತನೆಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತಂದಿರುವೆ, ಜಿಟಿಟಿಸಿ ಕಾಲೇಜು ಶೈಕ್ಷಣಿಕ ಪ್ರಗತಿ ಪ್ರಗತಿಗೆ ಮುಕುಟವಾಗಿದೆ. ಈ ಭಾಗದಲ್ಲಿ ನಿರುದ್ಯೋಗ ಹೋಗಲಾಡಿಸಬೇಕು ಎಂಬ ಚಿಂತನೆ ಇಟ್ಟುಕೊಂಡು ಜಿಟಿಟಿಸಿ ಕಾಲೇಜು ತಂದಿದ್ದು, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಹೊರಬಂದರೆ ಉದ್ಯೋಗ ಗ್ಯಾರಂಟಿ ಎಂದರು. ಜಿಟಿಟಿಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಷ್ಟೋ ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.

ಸಂಗಮೇಶ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಜೆ.ಮಾಡ್ಯಾಳ ಮಾತನಾಡಿದರು. ಭೀಮಣ್ಣ ಕವಲಗಿ, ಎಸಿ ಚಿದಾನಂದ ಗುರುಸ್ವಾಮಿ, ಪ್ರಶಾಂತ ಕಾಳೆ, ತಾಪಂ ಇಒ ಮಹಾದೇವಪ್ಪ ಏವೂರ, ಎಇಇ ದಯಾನಂದ ಮಠ, ಅಜೀತ ಧನಶೆಟ್ಟಿ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೋಗೆಪ್ಪ ಜೊತಗೊಂಡ, ಜಾವೀದ ಮೋಮಿನ, ಅಯುಬ ಬಾಗವಾನ, ಜಟ್ಟೆಪ್ಪ ರವಳಿ, ಶ್ರೀಕಾಂತ ಕುಡಿಗನೂರ, ಬಿಇಒ ಎಸ್.ಎಸ್.ಮುಜಾವರ, ಸಿಡಿಪಿಒ ಗೀತಾ ಗುತ್ತರಗಿಮಠ, ಎಚ್.ಎಸ್.ಪಾಟೀಲ, ಧರ್ಮು ವಾಲಿಕಾರ, ಕೆ.ಎಸ್.ಮರಡಿ, ನೀಲಕಂಠ ರೂಗಿ, ಎಸ್. ಆರ್.ಗದ್ಯಾಳ, ಎಂ.ಆರ್.ಪಾಟೀಲ, ಮಲ್ಲನಗೌಡ ಪಾಟೀಲ, ಸಿಪಿಐ ಸುನೀಲ ಪಾಟೀಲ, ಚನಮಲ್ಲ ಚನಗೊಂಡ, ಸೊಮಣ್ಣ ಅಕ್ಕಲಕೋಟ, ಶೇಖರ ನಾಯಕ, ಸುದೀರ ಕರಕಟ್ಟಿ, ಸತೀಶ ಕುಂಬಾರ ವೇದಿಕೆ ಮೇಲಿದ್ದರು.

ಎಇ ಮಹಿಬೂಬ ಸಂಜವಾಡ, ಸಂತೋಷ ಪರಸೆನವರ, ಅಪ್ಪು ಅಡಗಲ್ಲ, ಅವಿನಾಶ ಬಗಲಿ, ನಿಂಗಯ್ಯ ಗಿರಡಿಮಠ, ಚಂದು ಸೊನ್ನ, ಅಶೋಕ ಬಗಲಿ, ವಿಜಯಕುಮಾರ ಚನಗೊಂಡ, ಬಸು ಬಂಗಲಿ, ರಮೇಶ ಕಲ್ಯಾಣಿ, ಶಂಕ್ರಪ್ಪ ಸರ್ಜಾಪೂರ, ರಾಜು ಖೇಡಗಿ, ಗಂಗು ಗುಳೆದ, ಬಾಬುರಾವ ಗುಡಮಿ ಇತರರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್