LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

’ಹೂಗಾರ’ ಕನ್ನಡ ಚಲನಚಿತ್ರದ ಚಿತ್ರೀಕರಣ ಮುಕ್ತಾಯ

ಸಿದ್ಧನಕೊಳ್ಳ,ಮೇ,೧೪ : ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಬೆಂಗಳೂರ ಇವರ ’ಹೂಗಾರ’ ಉಪ ಶಿರ್ಷಿಕೆ ’ಕಂಬದಮಲ್ಲ ಕನ್ನಡ ಚಲನಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ.  
    ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳಮಠದಲ್ಲಿ ಡಾ.ಶಿವಕುಮಾರ ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣನ್ನು ಮುಕ್ತಾಯಗೊಳಿಸಲಾಯಿತು.  ಸತತ  ೨೮ ದಿನಗಳ ಕಾಲ ಸಿದ್ದನಕೊಳ್ಳ ಮಠ ಹಾಗೂ ಸಿದ್ದನಕೊಳ್ಳ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಉರಿವ ಬಿಸಿಲನ್ನು ಲೆಕ್ಕಿಸದೆ ಚಿತ್ರತಂಡವು ಚಿತ್ತೀಕರಣ ನಡೆಸಿ, ಉತ್ತರ ಕರ್ನಾಟಕದ ಭಾಷೆಯ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರಿಗೂ  ಅವಕಾಶವನ್ನು ನೀಡಲಾಗಿದೆ. ಶ್ರೀಮಠದ ಪೀಠಾಧಿಪತಿಗಳಾದ  ಡಾ.ಶಿವಕುಮಾರ ಸ್ವಾಮೀಜಿ ಅವರು ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದು  ಚಿತ್ರ ತಂಡಕ್ಕೆ ಆಶೀರ್ವದಿಸಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜೊತೆಗೆ ಗ್ರಾಮಗಳ ಜನತೆ ಕೂಡ ಯಾವುದೊಂದು ಕೊರತೆಯಾಗದಂತೆ ಸಂಪೂರ್ಣ ಸಹಕಾರ ನೀಡಿ ಚಿತ್ರೀಕರಣಕ್ಕೆ ಅನುಕೂಲ ಒದಗಿಸಿ ಕೊಟ್ಟಿದ್ದಾರೆ ಅವರಿಗೆಲ್ಲ ಕೃತಜ್ಞನಾಗಿರುವೆ ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ್ ಹೇಳಿದರು.  
   ಚಿತ್ರದಲ್ಲಿ ನಾಯಕನಾಗಿ ಸಂತೋಷ್ ಪಾಟೀಲ್, ನಾಯಕಿಯಾಗಿ ಅಪೂರ್ವ, ಸುನಂದಾ ಕಲ್ಬುರ್ಗಿ, iಹಾಂತೇಶ ಹಳ್ಳೂರ, ಮಾಸ್ಟರ್ ತೇಜಸ್, ಕಾಮಿಡಿ ಕಿಲಾಡಿ ಖ್ಯಾತಿಯ ದಾನಪ್ಪ, ಮುತ್ತುರಾಜ್ ಬುದ್ನಿ, ಕಿಟ್ಟಿ ತಾಳಿಕೋಟೆ, ಮಂಜುಳಾ ಅರಸ್, ಭಾವನಾ ಶಿಂಧೆ, ಕುಮಾರಿ ಧನ್ಯ, ಕಿರಣ, ದಶರಥ, ವಿದ್ಯಾ ಗಂಜಿಹಾಳ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಜನಾರ್ಧನ್ ರಾಜು ,ಸುವೀಶ, ನೃತ್ಯ ನಾಗರಾಜ್, ಸಂಭಾಷಣೆ ಶಿವಂ ಬೆಂಗೇರಿ, ಸಾಹಿತ್ಯ ಲೋಕೇಶ್ ವಿದ್ಯಾಧರ್, ಶಿವರಾಜ್, ಕಿನ್ನಾಳ ರಾಜ್, ಸಂಗೀತ ರಿದಂ ಕುಟ್ಟಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದ್ದು,  ಈಗಾಗಲೇ ’ಒಬ್ಬಟ್ಟು’ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ವಿದ್ಯಾಧರ್ ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದಾರೆ. ಇನ್ನು ಪೋಸ್ಟಪ್ರೊಡಕ್ಷನ್ ಕಾರ್ಯವನ್ನು ಈ ವಾರದಲ್ಲೇ ಆರಂಭಿಸಿ ಶೀಘ್ರ ಚಿತ್ರವನ್ನು ಬೆಳ್ಳಿತೆರೆಗೆ ತರಲಾಗುವದು, ಚಿತ್ರದ ಹಾಡುಗಳನ್ನು ಹುಬ್ಬಳ್ಳಿ,  ಗದಗ, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆ ಆರ್ ಎಸ್ ಪ್ರೊಡಕ್ಷನ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ ಎಂದು ನಿರ್ದೇಶಕ ಲೋಕೇಶ ತಿಳಿಸಿದ್ದಾರೆ. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್