LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೂಡಲಗಿಗೆ ಹೆಚ್ಚುವರಿ ಬಸ್ಸುಗಳ ಅನಿವಾರ್ಯತೆಯಿದೆ : ಸುಭಾಸ ಕಡಾಡಿ

ಮೂಡಲಗಿ : ಸುತ್ತ ಮುತ್ತಲಿನ ಹಲವಾರು ಹಳ್ಳಿಗಳ ಜನರು ತಾಲೂಕಾ ಕೇಂದ್ರವಾಗಿರುವ ಮೂಡಲಗಿಯನ್ನು ಅವಲಂಬಿಸಿರುವ ಕಾರಣ ಪಟ್ಟಣಕ್ಕೆ ಹೆಚ್ಚುವರಿ ಬಸ್ಸಿನ ಸೌಕರ್ಯ ಒದಗಿಸಬೇಕಾದ ಅನಿವಾರ್ಯತೆಯಿದೆ ಎಂದು ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುಭಾಸ ಕಡಾಡಿ ಹೇಳಿದರು. 
ಗುರುವಾರದಂದು ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ವತಿಯಿಂದ ಮೂಡಲಗಿಯ ಬಸ ನಿಲ್ದಾಣದ ಕಾರ್ಯ ನಿರ್ವಾಹಕ ಅಧಿಕಾರಿಯಾದ ಬಿ.ಬಿ.ದಂಡಾಪ್ಪನ್ನವರ ಮುಖಾಂತರ ಗೋಕಾಕ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೊಲ್ಲಾಪುರ, ಇಂಚಲಕರಂಜಿ, ಬಾಗಲಕೋಟೆ ಸೇರಿದಂತೆ ಬೆಟಗೇರಿ ಪಟ್ಟಣಗಳಿಗೆ ಗುರ್ಲಾಪೂರ ಮಾರ್ಗವಾಗಿ ಬೈಪಾಸಾಗಿ ಹೋಗುವ ಬಸ್ಸುಗಳು, ಮೂಡಲಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹೋಗಬೇಕು. ಜೊತೆಗೆ ವಿಜಯಪೂರ,  ಸೊಲ್ಲಾಪೂರ, ಅಥಣಿ, ಮಿರಜ, ಜಮಖಂಡಿಗೆ ತೆರಳುವ ಬಸ್ಸುಗಳು ಗುರ್ಲಾಪೂರ ಮಾರ್ಗದಲ್ಲಿ ಬರುವ ಮೂಡಲಗಿ ಪಟ್ಟಣದ ನಾಗಲಿಂಗ ನಗರ, ವಿವೇಕಾನಂದ ನಗರ, ಟಿಪ್ಪು ವೃತ್ತ ಬಳಿ ಬಸ್ಸನ್ನು ನಿಲುಗಡೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಬಸು ಗಾಡವಿ, ಸುರೇಶ ಎಮ್ಮಿ, ಮಹಾಲಿಂಗಯ್ಯ ನಂದಗಾವಮಠ, ಶಿವಬಸು ಕುಲಗೋಡ, ಇಮ್ತಿಯಾಜ್ ಕಲಾರಕೊಪ್ಪ, ಚಿದಾನಂದ ಆಲತಗಿ, ವಿಠ್ಠಲ ಶಿಂಫಿ, ಚಂದ್ರಶೇಖರ ಪತ್ತಾರ ಸೇರಿದಂತೆ ಅನೇಕ ಸಾರ್ವಜನಿಕರು ಭಾಗಿಯಾಗಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ