ಬಳ್ಳಾರಿ. ಜು. 24.: ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಇಂದಿನ ಯುವ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯ ಆಗಿದ್ದಾರೆ ಅವರ ಕೆಚ್ಚೆದೆಯ ಹೋರಾಟದಿಂದಾಗಿ ಬ್ರಿಟಿಷರಲ್ಲಿ ನಡುಕ ಉಂಟಾಗಿತ್ತು ಇದರಿಂದಾಗಿ ಮತ್ತು ಮಹಾತ್ಮ ಗಾಂಧಿಯವರ ಹಿಂಸೆಯ ಹೋರಾಟದಿಂದ ಅವರು ಭಾರತ ಬಿಟ್ಟು ತೊಲಗಿದರು ಎಂದು ಮುಖ್ಯ ಶಿಕ್ಷಕಿ ಆಶಾ ತಿಳಿಸಿದರು
ಅವರು ಗುರುವಾರದಂದು ದೊಡ್ಡ ಮಾರ್ಕೆಟ್ ಸಮೀಪದ ಕುಪ್ಪಗಲ್ ಅಯ್ಯಪ್ಪ ನ್ಯಾಷನಲ್ ಶಾಲೆಯಲ್ಲಿ ತಿಲಕ್ ಮತ್ತು ಅಜಾದ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಚಂದ್ರಶೇಖರ್ ಆಜಾದ್ ಬಾಲಗಂಗಾಧರನಾಥ್ ತಿಲಕ್ ಅವರ ಶಬ್ದವೇಶ ಧರಿಸಿ ದೇಶಪ್ರೇಮ ಮೆರೆದರು. ಈ ಸಂದರ್ಭದಲ್ಲಿ
ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಬೋಧಕ -ಬೋಧಕೇತರ, ಸಿಬ್ಬಂದಿವರ್ಗ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.