LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಇಂದು ಹಿರೇಮಣೂರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಇಂಡಿ :  ತಾಲೂಕಿನ ಚಿಕ್ಕಮಣೂರ ಮತ್ತು ಅಫಝಲಪೂರ ತಾಲೂಕಿನ ಹಿರೇಮಣೂರ ಗ್ರಾಮದ ಭೀಮಾ ನದಿ ಮಧ್ಯದಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಏ. ೩೦ ರಿಂದ ಜರಗುವವು.
೩೦ ರಂದು ಗುರುವಾರ ಯಲ್ಲಮ್ಮ ದೇವಿಗೆ ಬಾಸಿಂಗ ಮೆರವಣೆಗೆ ವಿವಿಧ ವಾದ್ಯ ವೈಭವಗಳೊಂದಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ೯ ಗಂಟೆಗೆ ದೇವಿಯು ಮಂದಿರಕ್ಕೆ ಆಗಮಿಸುವಳು. ರಾತ್ರಿ  ೧೦.೩೦ ಕ್ಕೆ ಪ್ರೇಮಾ ಅಫಝಲಪೂರ ಹಾಗೂ ಸಂಗಡಿಗರಿಂದ ಚೌಡಕಿ ಆಟ ಹಾಗೂ ಚೌಡಕಿ  ಪದಗಳು ಜರಗುವವು. 
ಮೇ ೧ ರಂದು  ಶುಕ್ರವಾರ ಆಗಿ ಹುಣ್ಣಿಮೆಯಂದು ಬೆಳಗ್ಗೆ ೫ ಗಂಟೆಗೆ ಡಾ. ಶಂಬುಲಿಂಗ ಶ್ರೀಗಳಿಂದ   ಪಡಸಾವಳಗಿ ಮತ್ತು ಉದಗಿರಮಠ ಇವರಿಂದ ದೇವಿಯ ರುದ್ರಾಭಿಷೇಕ ಜರುಗುವದು. ೭ ಗಂಟೆಗೆ ದೇವಿಗೆ ವಸ್ತ್ರಾಭರಣ, ೯ ಗಂಟೆಗೆ ದೇವಿಗೆ ನೈವೆಧ್ಯ, ಸಾಯಂಕಾಲ ೪ ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣೆಗೆ ನವಿಲು ಕುಣಿತ ಕರಡಿ ಕುಣಿತ ಕುದರೆ ಕುಣಿತ ಗೊಂಬೆ ಕುಣಿತ ಡೊಳ್ಳಿನ ವಾಲಗ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಭೀಮಾ ನದಿಯಲ್ಲಿರುವ ದೇವಿಯ ಮಂದಿರಕ್ಕೆ ತಲುಪುವದು. ೫ ಗಂಟೆಗೆ ಬಾಸಿಂಗ ಮೆರವಣೆಗೆ ದೇವಿಯ ಪಲ್ಲಕ್ಕಿ  ಸ್ವಾಗತಿಸುವದು ೭ ಗಂಟೆಯಿಂದ ೯ ರ ವರೆಗೆ ಮದ್ದು ಸುಡುವದು  ನಂತರ ಪಲ್ಲಕ್ಕಿ ಮೆರವಣೆಗೆ ಗ್ರಾಮದಲ್ಲಿರುವ ದೇವಿಯ  ಮಂದಿರಕ್ಕೆ ಆಗಮಿಸುವದು ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಕುರಿಗಳ ಭವ್ಯ ಜಾತ್ರೆ ನಡೆಯಲಿದೆ.  ಮೇ ೨ ರಂದು ಬೆಳಗ್ಗೆ ೯ ಗಂಟೆಗೆ  ವಿದ್ಯಾಶ್ರೀ ಮಸಬಿನಾಳ ಹರದೇಶ ನಾಗೇಶ  ಹಾಗೂ ಮುಕ್ತುಮಸಾಬ ಸೊನ್ನಾಳ ಅವರಿಂದ  ಗೀ ಗೀ ಪದಗಳು ಜರುಗುವವು. ಸಾಯಂಕಾಲ ೫ ಗಂಟೆಯಿಂದ  ೭ ಗಂಟೆಯ ವರೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ  ಕುಸ್ತಿಗಳು ನಡೆಯಲಿವೆ. ಜಾನುವಾರು ಜಾತ್ರೆಯಲ್ಲಿ  ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ  ಕಮಿಟಿ ವತಿಯಿಂದ  ೫ ರಂದು ಬಹುಮಾನ ವಿತರಿಸಲಾಗುವದು. ಜಾತ್ರೆಗೆ ಬರುವ ಭಕ್ತರಿಗೆ ಇಂಡಿಯಿಂದ ನೇರ ಬಸ್ಸಿನ ಸೌಕರ್ಯ ಇರುವದು ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್