LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

' ವರ್ಷದ ಆದರ್ಶ ಮಹಿಳೆ' ಡಾ, ಸ್ವಾತಿ ವೈದ್ಯ  ಅವರಿಗೆ  ಸನ್ಮಾನ.


ಘಟಪ್ರಭಾ. ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್ ಬೆಂಗಳೂರು ಮಿರರ್ ಪತ್ರಿಕಾ ಸಮೂಹದ ಈ ವರ್ಷದ  ಆದರ್ಶ ಮಹಿಳಾ ಸಾಧಕಿ  ಪ್ರಶಸ್ತಿಗೆ ಭಾಜನರಾದ ಘಟಪ್ರಭಾ ಕೆ ಎಚ್ ಆಯ್ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಸ್ವಾತಿ ಘನಶ್ಯಾಮ ವೈದ್ಯ

ಅವರಿಗೆ ಶನಿವಾರ ದಿನಾಂಕ 02-04-2026 ರಂದು ಕೆ ಎಚ್ ಆಯ್ ಸಾಂಸ್ಕೃತಿಕ ಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ

 ಘಟಪ್ರಭಾದ ವಿವಿಧ ರಂಗಗಳಲ್ಲಿಯ ಪ್ರಮುಖರು ಆತ್ಮೀಯವಾಗಿ  ಸನ್ಮಾನಿಸಲಾಯಿತು.


      ಈ ಸಂದರ್ಭದಲ್ಲಿ    ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶಕುಂತಲಾ ಮತ್ತು ಶ್ರೀಕಾಂತ ಮಹಾಜನ ದಂಪತಿಗಳು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ವಂದನಾ ಮತ್ತು ರಾಮ ಕತ್ತಿ ದಂಪತಿಗಳು, ಮಲ್ಲಿಕಾರ್ಜುನ ಕಾರ್ತಿಕ ಸೇವಾ ಸಮಿತಿ, ಕೆ ಎಚ್ ಆಯ್ ಸಿಬ್ಬಂದಿಗಳು ಘಟಪ್ರಭಾ ವೈದ್ಯಕೀಯ ಸಂಘದ ಸದಸ್ಯರು, ಸೇರಿದಂತೆ ಹಲವಾರು ಗಣ್ಯರು ಸತ್ಕಾರ ಮಾಡಿದರು. ಮಾಜಿ ಸಚಿವ ಆರ್ ಎಮ್ ಪಾಟೀಲ, ರಾಮಣ್ಣ ಹುಕ್ಕೇರಿ,  ಡಾ ವಿಲಾಸ ನಾಯಿಕವಾಡಿ ಸುರೇಶ್ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು, ಬಸವರಾಜ ಹಟ್ಟಿಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಾನಿಧ್ಯವನ್ನು ಗುಬ್ಬಲಗುಡ್ಡ  ಶ್ರೀ ಶ್ರೀ ಕೆಂಪಯ್ಯ ಸ್ವಾಮಿಗಳ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಘಟಪ್ರಭಾ ಹೊಸಮಠದ   ಶ್ರೀ  ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.

ಗುರುಬಸಯ್ಯಾ ಕರ್ಪೂರಮಠ, ಸುಭಾಷ್ ದಡ್ಡೀಕರ,  ಸುಭಾಷ್ ಗಾಯಕವಾಡ ,ಭೂಪಾಲ್ ಖೆಮಲಾಪುರೆ, ರಾಜು ಬಬಲಾದಿ, ಮಲ್ಲಿಕಾರ್ಜುನ ಗೌರಾಣಿ,ನಾಗರಾಜ್ ಹುಡೇದಾರ, ಬಸವರಾಜ ಹೊಸೂರ, ಪ್ರಕಾಶ  ಗಾಯಕವಾಡ,  ಕೆ ಎಚ್ ಆಯ್ ಸಿಬ್ಬಂದಿ ಮತ್ತು ಹಿರಿಯ ನಾಗರೀಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್