ತಾಳಿಕೋಟೆ,ಜು,೩೧ : ಪಟ್ಟಣದ ಮೂಲಕ ಕಾರ್ಯನಿಮಿತ್ಯ ತೆರಳುತ್ತಿದ್ದ ವಿಧಾನ ಪರಿಷತ್ ವಿರೋದ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಅವರಿಗೆ ಗುರುವಾರರಂದು ಶ್ರೀ ಅಂಬಿಗೇರ ಚೌಡಯ್ಯ ವೃತ್ತದಲ್ಲಿ ತಾಳಿಕೋಟೆಯ ನಿಜಶರಣ ಶ್ರೀ ಅಂಬಿಗೇರ ಚೌಡಯ್ಯ ಸಮಾಜ ಬಾಂದವರು ಸನ್ಮಾನಿಸಿ ಗೌರವಿಸಿದರು.
ಎನ್.ರವಿಕುಮಾರ ಅವರು ಚೌಡಯ್ಯನವರ ವೃತ್ತದಲ್ಲಿಯ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯನವರ ಮಹಾ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಾ ಪೂಜೆ ಸಲ್ಲಿಸಿ ಗೌರವಿಸಿದರು.
ಈ ಸಮಯದಲ್ಲಿ ಮಾತನಾಡಿದ ಎನ್.ರವಿಕುಮಾರ ಅವರು ನಿಜಶರಣ ಶ್ರೀ ಅಂಬಿಗೇರ ಚೌಡಯ್ಯನವರ ಮೂರ್ತಿ ಲೊಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿತ್ತು ಅನಿವಾರ್ಯ ಕಾರಣಗಳಿಂದ ಆಗಮಿಸಲು ಆಗಲಿಲ್ಲಾ ಕಾರಣ ಸಮಾಜ ಬಾಂದವರು ತಪ್ಪು ಭಾವಿಸಬಾರದು ಮುಂದೆ ನಿಜಶರಣ ಶ್ರೀ ಅಂಬಿಗೇರ ಚೌಡಯ್ಯನವರ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಂಡಿತವಾಗಿಯೂ ಬರುತ್ತೇನೆ ನನ್ನನ್ನು ಸನ್ಮಾನಿಸಿ ಗೌರವಿಸಿದ ಸಮಾಜ ಬಾಂದವರಿಗೆ ಕೃತಜ್ಞನಾಗಿದ್ದೇನೆಂದು ತಿಳಿಸಿದರು.
ಈ ಸಮಯದಲ್ಲಿ ಸಮಾಜದ ತಾಲೂಕಾ ಅಧ್ಯಕ್ಷ ಪರಶುರಾಮ ತಂಗಡಗಿ, ನಗರ ಘಟಕ ಅಧ್ಯಕ್ಷ ರಮೇಶ ಮೂಕೀಹಾಳ, ಮಲ್ಲು ನಾಯ್ಕೋಡಿ, ಭಿಮಣ್ಣ ತಳವಾರ, ಬಸವರಾಜ ಯಡಹಳ್ಳಿ, ಮಲ್ಲಿಕಾರ್ಜುನ ಯಡಹಳ್ಳಿ, ಮಾನಪ್ಪ ನಾಯ್ಕೋಡಿ, ಮಲ್ಲಿಕಾರ್ಜುನ ನಾಟೀಕಾರ, ಮಲ್ಲು ಅಸ್ಕಿ, ಕಾಶಿನಾಥ ಅಂಬಿಗೇರ, ಶರಣು ಶಳ್ಳಗಿ, ದೇವು ಅಲ್ಲಾಪೂರ, ಅಯ್ಯಣ್ಣ ಬಸವಂತಪೂರ, ಈರಣ್ಣ ನಾಯ್ಕೋಡಿ, ಅಶೋಕ ಮೂಕೀಹಾಳ, ರಾಜು ಮೂಕೀಹಾಳ, ಮಲ್ಲು ತಳವಾರ, ಹಣಮಂತ ಬಾರಕೇರ, ಮಲಕಾಜಿ ನೆಲ್ಲಗಿ, ಸಿದ್ದು ಮೇಸ್ತನಕಿ, ಮೊದಲಾದವರು ಉಪಸ್ಥಿತರಿದ್ದರು.