ಚ. ಕಿತ್ತೂರು. ತಾಲ್ಲೂಕಿನ ಖೋದಾನಪೂರ ಗ್ರಾಮದ ಶಿವಪ್ರಸಾದ ಮಲ್ಲಿಕಾರ್ಜುನ ಅರವಳ್ಳಿ ಭಾರತೀಯ ಸೇನೆಯ ಸಿ.ಐ.ಎಸ್.ಎಪ್ ಗೆ ಆಯ್ಕೆಯಾಗಿದ್ದು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯರಾದ ಪ್ರಯುಕ್ತ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ. ವಾಯ್. ಗ್ರಾಮದ ಆರೂಢಜ್ಯೋತಿ ಚೈತನ್ಯ ಪ್ರಾಥಮಿಕ ಶಾಲೆಯ ಕೋಚಿಂಗ್ ವಿಭಾಗದ ಮುಖ್ಯಸ್ಥರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ) ಅವರು ಬೆಂಗಳೂರು ಕೇಂದ್ರ ಬಸವ ಸಮಿತಿ ಪ್ರಕಟಿಸಿದ ಮಹಾನ ದಾರ್ಶನಿಕ ಬಸವಣ್ಣ ಗ್ರಂಥ ನೀಡಿ ಅಭಿನಂದಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ತಾಯಿ ಸುವರ್ಣ ಅರವಳ್ಳಿ,ತಂದೆ ಮಲ್ಲಿಕಾರ್ಜುನ ಅರವಳ್ಳಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.