LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹಿಡಕಲ್ ಡ್ಯಾಂ ಹಿನ್ನಿರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

ಉಳ್ಳಾಗಡ್ಡಿ-ಖಾನಾಪೂರ:-ಹಳೆ ಗುಡಗನಟ್ಟಿ ಗ್ರಾಮದ ಬಳಿ ಹಿಡಕಲ್ ಡ್ಯಾಮಿನ ಹಿನ್ನಿರಿನ ಪ್ರದೇಶದಲ್ಲಿ ಸೋಮವಾರ ದಿ, ೩೦ ರಂದು ಐವರು ಬಾಲಕರು ಈಜಲು ನೀರಿಗಿಳಿದಿದ್ದರು ಈ ಬಾಲಕರಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕಘಟನೆ ನಡೆದಿದೆ,


ಈ ಘಟನೆ ಮುಂಜಾನೆ ೧೦ ರಿಂದ ೧೧ ಗಂಟೆಯ ಸಮಯದಲ್ಲಿ ನಡೆದಿದ್ದು ಈ ಘಟನೆಯಲ್ಲಿ ಸಾವನಪ್ಪಿದ ಬಾಲಕರನ್ನು ,ಕು||ಪ್ರಜ್ವಲ್ ಮುತ್ತೆಪ್ಪಾ ಗೋಕಾರ, (೧೪) ಸಾ||ದಾದಬಾನಟ್ಟಿ ಆರ್,ಸಿ, ಹಾಗೂ ಕು||ಕೃಷ್ಣಾ ವಿಠ್ಠಲ ಖಾನಾಪೂರೆ,(೧೪) ಸಾ||ದಾದಬಾನಟ್ಟಿ ಆರ್,ಸಿ, ಎಂದು ಗುರುತಿಸಲಾಗಿದ್ದು ಈ ವಿದ್ಯಾರ್ಥಿಗಳು ಗುಡಗನಟ್ಟಿ ಆರ್,ಸಿ, ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇಯ ತರಗತಿಯಲ್ಲಿ ಓದುತ್ತಿದ್ದರು,


ಹಿನ್ನೆಲೆ:-ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈ ಐವರು ಬಾಲಕರು ಈಜಲು ಹಳೇ ಗುಡಗನಟ್ಟಿ ಗ್ರಾಮದ ಬಳಿಯಲ್ಲಿ ಹಿಡಕಲ್ ಜಲಾಶಯದ ಹಿನ್ನಿರಿಗೆ ಇಳಿದಿದ್ದು ಈ ಘಟನೆ ನಡೆದಿದ್ದರಿಂದ ಈ ಬಾಲಕರ ಜೊತೆಗಿದ್ದ ಮೂವರು ಬಾಲಕರು ಯಾರು ಎಂಬುದು ತಿಳಿದಿಲ್ಲಾ ಈ ಬಾಲಕರು ಇಬ್ಬರು ಬಾಲಕರು ಮುಳುಗುತ್ತಿದ್ದರಿಂದ ಭಯ ಭೀತರಾಗಿರಬಹುದೆಂದು ಊಹಿಸಲಾಗಿದೆ, ಈ ಘಟನೆಯ ಬಗ್ಗೆ ಸಾರ್ವಜನಿಕರಿಗೆ ಪೋಲಿಸರಿಗೆ ತಿಳಿಸಿದ್ದರಿಂದ ಯಮಕನಮರಡಿಯ ಅಗ್ನಿಶ್ಯಾಮಕ ದಳದ ಸಿಬ್ಬಂದಿಗಳು ಹಿನ್ನಿರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಮೃತ ದೇಹಗಳನ್ನು ಮಧ್ಯಾನ್ಹ ೨.೩೦ ರ ಸುಮಾರಿಗೆ ಹಿನ್ನಿರಿನಿಂದ ಹೊರ ತೆಗೆಯಲಾಯ್ತು,
ಮುಗಿಲು ಮುಟ್ಟಿದ ಪಾಲಕರ ಆಕ್ರಂದನ:-ಈ ಘಟನೆಯಲ್ಲಿ ಸುತ್ತಲಿನ ಗ್ರಾಮಗಳಿಂದ ತಂಡೋಪ ತಂಡವಾಗಿ ಜನ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಮಕ್ಕಳನ್ನು ಕಳೆದುಕೊಂಡಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು
ಕಾರ್ಯಾಚರಣೆ:-ಅಗ್ನಿಶ್ಯಾಮಕದಳದ ಠಾಣಾಧೀಕಾರಿಗಳಾದ ವಾಯ್,ಜಿ,ಕೋಲಕಾರ, ಹೇಮಂತ ಬಾಳೆಕುಂದ್ರಿ, ಅಶೋಕ ಪಾಟೀಲ, ಬಸವರಾಜ ಬಂಬರಗಿ, ರಫೀಕ್ ಬಡೆಭಾಯಿ, ಯಲ್ಲಪ್ಪಾ ಪಾಟೀಲ, ಇಬ್ಬರು ಮಕ್ಕಳನ್ನು ಹೊರ ತಗೆಯುವಲ್ಲಿ ಸಹಕರಿಸಿದರು, ಪ್ರಕರಣ ಯಮಕನಮರಡಿ ಠಾಣೆಯಲ್ಲಿ ದಾಖಲಾಗಿದೆ,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್