LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿಶ್ವವಿದ್ಯಾಲಯಗಳು ಪ್ರಯೋಗ ಮತ್ತು ಹೊಸತನಕ್ಕೆ ಪ್ರೋತ್ಸಾಹಿಸಲಿ - ರಾಜ್ಯಪಾಲ ಥಾವರಚಂದ ಗೆಹ್ಲೊಟ್‌

 ಜಮಖಂಡಿ;ವಿಶ್ವವಿದ್ಯಾಲಯಗಳು ಪ್ರಯೋಗ ಮತ್ತು ಹೊಸತನಕ್ಕೆ ಪ್ರೋತ್ಸಾಹಿಸಬೇಕು, ಆಧುನಿಕ ಎಐ ಯುಗಕ್ಕೆ ಬೇಕಾಗುವ ಕೌಶಲವನ್ನು ಹೇಳಿಕೊಡಬೇಕೆಂದು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರಚಂದ ಗೆಹ್ಲೊಟ್‌ ಹೇಳಿದರು. ನಗರದ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಬಾಗಲಕೊಟ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಲಯಗಳಿಂದ ಪದವಿ ಪಡೆದ ವಿದ್ಯಾರ್ಥಿಗಳು ನೌಕರಿ ಹುಡುಕುವರಾಗ ಬಾರದು ಅವರೇ ಸ್ವತಹ ನೌಕರಿಗಳನ್ನು ಸೃಷ್ಠಿಸುವ ಸಾಮರ್ಧ್ಯ ಹೊಂದಬೇಕು ಅಂಥಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಭಿಪ್ರಾಯ ಪಟ್ಟರು. ಪ್ರಧಾನಿ ಮೋದಿ ಅವರ 2047ರ ವಿಕಸಿತ ಭಾತರದ ನಿರ್ಮಾಣಕ್ಕೆ ಯುವ ಪೀಳಗೆ ಸಾಥ ನೀಡಬೇಕು. ಆಧುನಿಕತೆಯ ಜೊತೆಗೆ ನೈತಿಕತೆ , ಪರಂಪರೆ ಸಂಸ್ಕೃತಿಯಿಂದ ದೇಶ ಮುನ್ನಡೆಯಲು ಸಾಧ್ಯ ಎಂಬುದು ವಿಶ್ವಕ್ಕೆ ತಿಳಿದಿದೆ, ವಸುದೇವ ಕುಟುಂಬಕಂ, ಸರ್ವೇಜನಾಹ ಸುಖೀನೊ ಭವಂತು ಎಂಬ ವೇದವಾಕ್ಯಗಳಿಗೆ ವಿಶ್ವದ ಮನ್ನಣೆ ದೊರೆತಿದೆ ಎಂದು ಹೇಳಿದರು.

ಎಐ, ಡಾಟಾ ವಿಜ್ಞಾನ, ಡಿಜಿಟಲೀಕರಣದ ಯುಗದಲ್ಲಿ ನಿರಂತರ ಕಲಿಕೆಯ ಅವಶ್ಯಕತೆ ಎದುರಾಗಿದೆ. ಇದರಿಂದ ಅನೇಕ ಹೊಸ ಸವಾಲುಗಳು ಸೃಷ್ಟಿಯಾಗಿವೆ. ಹೊಸಯುಗಕ್ಕೆ ಅನುಸಾರವಾಗಿ ಹೊಂದಿಕೊಳ್ಳುವ ಶಿಕ್ಷಣ ಪಡೆದು ದೇಶದ, ಸಮಾಜದ ಮುಂದಾಳತ್ವ ವಹಿಸಿಕೊಳ್ಳಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಗಿದೆ ಎಂದು ಹೇಳಿದರು. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಎಂದಿಗೂ ಮರೆಯ ಬಾರದು ತಾವು ಕಲಿತ ಶಿಕ್ಷಣ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಉಪಯೋಗವಾಬೇಕು ಎಂದು ಹೇಳಿದರು.

ಕುಲಪತಿ ಪ್ರೊ. ಆನಂದ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಸಿ ವಿಶ್ವವಿದ್ಯಾಲಯ 2023 ರಲ್ಲಿಸ್ಥಾಪನೆಯಾಯಿತು. ಮೂರು ವರ್ಷಗಳಿಲ್ಲಿ ಅಸಾಧಾರಣ ಬೆಳವಣಿಗೆ ಯಾಗಿದೆ. 14768 ವಿದ್ಯಾರ್ಥಿಗಳಿಂದ ಸಧ್ಯ 36000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈಪೈಕಿ ಶೇ 96.5 ವಿದ್ಯಾರ್ಥಿಗಳು ಎಸ್‌.ಸಿ. ಎಸ್‌ಟಿ ಹಾಗೂ ಓಬಿಸಿ ವರ್ಗದವರಿದ್ದಾರೆ. ಇವರಲ್ಲಿ ಶೇ.58 ಹೆಣ್ಣುಮಕ್ಕಳು ಇರುವದು ವಿಶೇಷವಾಗಿದೆ. 73 ಅಂಗಸಂಸ್ಥಯ ಕಾಲೇಜುಗಳು, 27 ಸರ್ಕಾರಿ, ಅನುದಾನಿತ, 46 ಖಾಸಿಗೆ ಕಾಲೇಜುಗಳಿ ವೆ. ಕ್ಯಾಂಪಸ್‌ನಲ್ಲಿ ಎಂ.ಎ, ಎಂಕಾಂ ಹಾಗೂ ರಾಜಕೀಯ ವಿಜ್ಞಾನ, ಎಂಎಸ್‌ಡಬ್ಲೂ, ಎಂಬಿಎ, ಎಂಸಿಎ ಮತ್ತು ಎಂಎಸ್‌ಸಿ ಗಣಿತ ವಿಷಯಗಳಿವೆ. ಕೌಶಲ ಮತ್ತು ನವೀನತೆ, ಡಿಜಿಟಲ್‌ ಆಡಳಿತ ಅಳವಡಿಸಿಕೊಂಡಿದ್ದೇವೆ. ಸಾವಿರಕ್ಕೂ ಅಧಿಕ ಗ್ರಾಮೀಣ ವಿದ್ಯಾರ್ಥಿಗಳು ವಿಶೇಷ ಕೋರ್ಸಗಳನ್ನು ಕಲಿಯುತ್ತಿದ್ದಾರೆ.ಎಂದು ವಿವರಿಸಿದರು. ಮಹಾರಾಷ್ಟ್ರ ನಾಗಪುರದ ಐಐಎಂನ ನಿರ್ದೇಶಕ ಭೀಮರಾಯ ಮೇತ್ರಿ ಘಟಿಕೋತ್ಸವದ ಭಾಷಣ ಮಾಡಿದರು. ಇಂದಿನ ಯುವ ಪೀಳಿಗೆ ಡಿಜಿಟಲ್‌ ಯುಗದಲ್ಲಿ ಜನಿಸಿದೆ. ವಿಶ್ವದ ಅತಿಹೆಚ್ಚು ಯುವ ಜನತೆ ದೇಶದಲ್ಲಿದೆ. ಆಧುನಿಕ ಭಾರತದ ಹೊಸ ಇತಿಹಾಸದ ಹೊಸ್ತಿಲಲ್ಲಿದ್ದೇವೆ. ಹೆಚ್ಚಿನ ಕಾರ್ಯಕ್ಷಮತೆಗೆ ಅಗತ್ಯವಾದ ಗುಣ ಲಕ್ಷಣಗಳಿವೆ. ನಿಮ್ಮನ್ನು ನೀವು ಸೃಷ್ಠಿಸಿ ಕೊಳ್ಳಬೇಕು. ಸಾಧನೆಗೆ ಮಿತಿಗಳಿಲ್ಲ ನಿಮ್ಮ ಆಯ್ಕೆಗಳೇ ನಿಮಗೆ ಫಲಿತಾಂಶ ನೀಡಲಿವೆ. ಗುರಿಗಳು ಎವರೆಸ್ಟ ನಂತಿರಬೇಕು, ಸ್ವಾಮಿ ವಿವೇಕಾನಂದರು ಹೇಳಿದಂತೆ ಅಸಾಧ್ಯವಾದದ್ದನ್ನು ಸಾಧಿಸಬೇಕು, ವಿಭಿನ್ನವಾಗಿ ಧೈರ್ಯಮಾಡಿ, ದೊಡ್ಡಕಸಸು ಕಾಣಿರಿ, ನಾವಿನ್ಯತೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ, ಭಾರತೀಯ ನೀತಿ ಮತ್ತು ಸಂಪ್ರದಾಯವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕುಲಸಚಿವ ಸೋಮಲಿಂಗ ಗೆಣ್ಣೂರ, ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ ಹಾಗೂ ಇತರರು ವೇದಿಕೆಯಲ್ಲಿದ್ದರು. ಕುಲಸಚಿವೆ ಮೌಲ್ಯಮಾಪನ ಪ್ರೊ.ಲತಾ.ಕೆ.ಪಿ.ವಂದಿಸಿದರು,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್