ಬಳ್ಳಾರಿ:24: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿದ್ದರಾಂಪುರ ಗಾನ ಲಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ನಗರದ ಪಾಂಚಜನ್ಯ ಸಭಾಂಗಣದಲ್ಲಿ ವಚನ ಗಾಯನ ರಂಗ ಗೀತೆ ತತ್ವಪದ ಗಾಯನ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಬಿ. ವೀಣಾ ಕುಮಾರಿ ಅವರು ಹಾರ್ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಸಂಗೀತ ಕಲೆ ವಾದ್ಯ ನುಡಿಸುವಿಕೆ ಹಾಗೂ ಹಾಡುಗಾರಿಕೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದರೊಂದಿಗೆ ಆರೋಗ್ಯ ವೃದ್ಧಿಯಾಗಿ ಬುದ್ಧಿಮಟ್ಟ ಕ್ರಿಯಾಶೀಲವಾಗುತ್ತದೆ. ಮನೆಯ ಮಕ್ಕಳಿಗೆ ಸಂಗೀತಭ್ಯಾಸ ನೃತ್ಯ ಇವು ಮಾನವನ ವಿಕಾಸಕ್ಕೆ ಬಹಳ ಮುಖ್ಯ ಎಂದರು.
ಬಯಲಾಟ ರಂಗ ನಿರ್ದೇಶಕ ಮುದ್ದಟನೂರು ಹೆಚ್ ತಿಪ್ಪೇ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮಹಾಬಲಿ ಸ್ವಾಮಿ, ಸಂಗಪ್ಪ ಸ್ವಾಮಿ, ರವೀಂದ್ರ ಕುಮಾರ್ ಹಿರೇಮಠ ಶರಣಬಸವನಗೌಡ, ರಾಜಶೇಖರ ಸ್ವಾಮಿ ಉಪಸ್ಥಿತರಿದ್ದರು.
ಶರಣಬಸವರಾಜ ಇವರಿಂದ ವಚನ ಗಾಯನ ನಡೆಯಿತು
ಬಿ. ವೀಣಾ ಕುಮಾರಿಯವರಿಂದ ರಂಗಗೀತೆ ಗಾಯನ ನಡೆಯಿತು. ಕುಮಾರ ಗೌಡ ಅಮರಾಪುರ, ಹೊನ್ನೂರ್ ಸಾಬ್ ಶಂಕರ್ ಬಂಡೆ ಅವರಿಂದ ತತ್ವಪದ ಗಾಯನ ನಡೆಯಿತು.
ಗಾನಲ ಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಶರಣಬಸವರಾಜ ಸ್ವಾಗತಿಸಿ, ವಂದಿಸಿದರು