LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೀಣಾ ಆದೋನಿ, ಶ್ರೀಧರ ಹೆಗಡೆಗೆ ದೊಡ್ಡನಗೌಡ ರಂಗತೋರಣ ಪುರಸ್ಕಾರ

ಬಳ್ಳಾರಿ, ಮೇ.30.: ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಸಹಕಾರದಲ್ಲಿ ನಗರದ ರಂಗತೋರಣ ಸಂಸ್ಥೆ ಪ್ರತಿ ವರ್ಷ ಕೊಡಮಾಡುವ  ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ' ಕ್ಕೆ 2024ನೇ ಸಾಲಿಗೆ ಗ್ರಾಮೀಣ ರಂಗಭೂಮಿಯ ಹಿರಿಯ ನಟಿ, ಗಾಯಕಿ, ನೃತ್ಯ ಕಲಾವಿದೆ ಬಳ್ಳಾರಿಯ ಶ ವೀಣಾ ಆದವಾನಿ ಹಾಗೂ 2025ನೇ ಸಾಲಿಗೆ ವೃತ್ತಿ ರಂಗಭೂಮಿಯ ಹಿರಿಯ ನಟ, ನಿರ್ದೇಶಕ ವಿಜಯಪುರದ  ಶ್ರೀಧರ ಹೆಗಡೆ ಅವರುನ್ನು ಆಯ್ಕೆಮಾಡಿದೆಂದು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದ್ದಾರೆ
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ.  ಬರುವ ಜೂನ್  12,13 ಮತ್ತು 14 ರಂದು ನಡೆಯಲಿರುವ ಸಮಾರಂಭದಲ್ಲಿ ತಲಾ 25 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಿದೆ.
ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯಲ್ಲಿ ರಂಗತೋರಣ ಸಾಂಸ್ಕೃತಿಕ ಸಾರ್ವಭೌಮ ಜೋಳದರಾ ದೊಡ್ಡನಗೌಡ ರಂಗತೋರಣ ಪುರಸ್ಕಾರವನ್ನು 2016ರಿಂದ ಆರಂಭಿಸಿದ್ದು, ರಂಗತೋರಣದೊಂದಿಗೆ ಜೋಳದರಾ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಗೌಡರೇ 1960ರಲ್ಲಿ ಸ್ಥಾಪಿಸಿದ್ದ ಶ್ರೀರಾಮೇಶ ಟ್ರಸ್ಟ್ ಸಹಯೋಗದ ರಾಜ್ಯಮಟ್ಟದ ಪುರಸ್ಕಾರ ನಾಡಿನ ಹಿರಿಯ ರಂಗಕರ್ಮಿಗಳಿಗೆ ನೀಡಲಾಗುತ್ತಿದೆ.  
ಸಾಂಸ್ಕೃತಿಕ ಸಾರ್ವಭೌಮ, ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ 25 ಸಾವಿರ ನಗದು ಹಾಗೂ ಆಕರ್ಷಕ ಪ್ರಶಸ್ತಿ ಫಲ ಒಳಗೊಂಡಿರುತ್ತದೆ.
ಪ್ರಥಮ ಬಾರಿಗೆ 2016ರಲ್ಲಿ ರಂಗ ನಟಿ, ನಿರ್ದೇಶಕಿ ಡಾ.ಬಿ.ಜಯಶ್ರೀ, 2017ರಲ್ಲಿ ರಂಗಜಂಗಮ ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, 2018ರಲ್ಲಿ ಹಿರಿಯ ನಾಟಕಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು-2019ರಲ್ಲಿ ಹಿರಿಯ ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ ಯವರು, 2020ರಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ  ಶೇಖ್ ಮಾಸ್ತರ್ 2021ರಲ್ಲಿ ಹಿರಿಯ ರಂಗಕರ್ಮಿ  ಗೌರಿದತ್ತು ಅವರು ಪಡೆದಿದ್ದು, 2022ರಲ್ಲಿ ಗ್ರಾಮೀಣ ರಂಗಭೂಮಿ ಹಿರಿಯ ಕಲಾವಿದ ಸಂಘಟಕ ಶೇಷಗಿರಿಯ  ಗುರಪ್ಪನವರ, 2023ರಲ್ಲಿ ಹವ್ಯಾಸಿ ರಂಗಭೂಮಿಯ ಹಿರಿಯ ಕಲಾವಿದೆ ಡಿ.ಹನುಮಕ್ಕ ಅವರಿಗೆ ನೀಡಲಾಗಿದೆ.
ದೊಡ್ಡನಗೌಡರು :
ಬಳ್ಳಾರಿ ಜಿಲ್ಲೆಯ ಜೋಳದರಾಶಿಯ ದೊಡ್ಡನಗೌಡರು ನಮ್ಮ ನಾಡಿನ ಸಾಂಸ್ಕೃತಿಕ ಮೇರು ವ್ಯಕ್ತಿ. 'ನಾಟಕ ನನ್ನ ಬೆಂಬಿಡ ಬ್ರಹ್ಮರಾಕ್ಷಸ'ವೆಂದು ರಂಗಭೂಮಿಗೆ ಬಂದ ಜಮೀನ್ದಾರ.ನಟ-ನಾಟಕಕಾರ, ಗಮಕ, ವಚನ ವಾಗ್ಗೇಯಕಾರ ಲಾವಣಿಕಾರ, ಕವಿ, ಸಾಹಿತಿ-ಸಂಘಟಕ, ಗ್ರಾಮಾಭೀವೃದ್ಧಿಯ ಹರಿಕಾರ, ಪ್ರವಚನ ಶಿರೋಮಣಿ, ಗುಲಬರ್ಗಾ ವಿಷ ಹಾಗೂ ಹೈದರಾಬಾದಿನ ತೆಲುಗು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಸಹೃದಯ ಸಂಪನ್ನರು.
ಸುದ್ದಿಗೋಷ್ಟಿಯಲ್ಲಿ  ದೊಡ್ಡನಗೌಡ ಪ್ರತಿಷ್ಠಾನದ  ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ತಿಪ್ಪೆಸ್ವಾಮಿ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ