ಬಳ್ಳಾರಿ. ಜು. 31: ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಅವರು ಅರ್ಜಿಯನ್ನು ಸಲ್ಲಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ "ಸಂಘಟನ ಸೃಜನ್ ಅಭಿಯಾನ" ಅಂಗವಾಗಿ, ಬಳ್ಳಾರಿ ಜಿಲ್ಲೆಯ ಎಐಸಿಸಿ ವೀಕ್ಷಕರಾಗಿ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷರು ಹಾಗೂ ಅಖಿಲ ಭಾರತ ಎನ್.ಎಸ್.ಯು.ಐ. ಮಾಜಿ ಅಧ್ಯಕ್ಷರಾದ ನದೀಮ್ ಜಾವಿದ್ ರವರು, ಕೆಪಿಸಿಸಿ ವೀಕ್ಷಕರುಗಳಾದ ಮಾಜಿ ಸಚಿವಾರದ ಸನ್ಮಾನ್ಯ ಮಲ್ಲಿಕಾರ್ಜುನ್ ನಾಗಪ್ಪ ರವರು, ಕೆಪಿಸಿಸಿ ಉಪಾಧ್ಯಕ್ಷರಾದ ಎ.ಆರ್.ಎಂ.ಹುಸೇನ್ ರವರು, ಕೆಪಿಸಿಸಿ ವಕ್ತರರಾದ ಶೈಲಜಾ ಹಿರೇಮಠ್ ರವರು ಮತ್ತು ಕೆಪಿಸಿಸಿಯ ರಾಜಶೇಖರ್ ರವರಿಗೆ
ಇಂದು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಹುದ್ದೆಗೆ ಆಕಾಂಕ್ಷಿಯಾಗಿ ಅರ್ಜಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂದಕೂರು ರಾಮುಡು ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರಿದ್ದರು.