LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿಜಯನಗರ ಜಿಲ್ಲಾ ಬೀದಿ ನಾಟಕ ಕಲಾ ಸಂಘಗಳ ಒಕ್ಕೂಟ ರಚನೆ ನೊಂದಣಿಗೆ ಅವಕಾಶ. 


ಹೊಸಪೇಟೆ:ವಿಜಯನಗರ ಜಿಲ್ಲೆಯ ಜಿಲ್ಲಾ ಬೀದಿ ನಾಟಕ ಒಕ್ಕೂಟವನ್ನು ನೊಂದಣಿ ಮಾಡಿಸಲು ಜಿಲ್ಲೆಯಲ್ಲಿ ಸಕ್ರಿಯವಾಗಿ ಬೀದಿ ನಾಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಕಲಾತಂಡದ ಮುಖ್ಯಸ್ಥರುಗಳು, ನೋಂದಾಯಿತ ಸಂಘ ಸಂಸ್ಥೆಗಳು ಟ್ರಸ್ಟ್‌ಗಳು ಜಿಲ್ಲೆಯ ಎಲ್ಲಾ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಲ್ಲಿ ನೊಂದಾಯಿಸಿಕೊಳ್ಳಲು   ಮೂಲಕ  ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ  ದಿನಾಂಕ ೧೮ ಜೂನ್ ೨೦೨೬ರಂದು ಮರಿಮನಹಳ್ಳಿಯ ದುರ್ಗದಾಸ್ ಕಲಾ ಮಂದಿರದಲ್ಲಿ ಜಿಲ್ಲೆಯ ಪ್ರಮುಖ ಬೀದಿ ನಾಟಕ ಕಲಾ ಸಂಘಗಳ ಸದಸ್ಯರುಗಳು ಮುಖ್ಯಸ್ಥರುಗಳು ಸೇರಿಕೊಂಡು ಬೀದಿ ನಾಟಕ ಸಂಘಗಳ ಒಕ್ಕೂಟವನ್ನು ರಿಜಿಸ್ಟರ್ ಮಾಡುವ ಕುರಿತು ಪೂರ್ವಭಾವಿ ಸಭೆಯನ್ನು ಮರಿಯಮ್ಮನಹಳ್ಳಿಯ ರಂಗಕರ್ಮಿಯಾದ ಹಿರಿಯರು ರಂಗ ಕಲಾವಿದರಾಧ  ಬಿ.ಎಂ.ಎಸ್.ಪ್ರಭು , ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ನೀನಾಸಂ ಪದವೀಧರರು ಮರಿಯಮ್ಮನಹಳ್ಳಿ ಇವರ ಅಧ್ಯಕ್ಷತೆಯಲ್ಲಿ.ನಡೆಸಿತ್ತು.
   ಈ ಸಭೆಯಲ್ಲಿ ಮುಖ್ಯವಾಗಿ ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲಾ ಬೀದಿ ನಾಟಕ ಕಲಾ ಸಂಘಗಳನ್ನು ಒಳಗೊಂಡಂತೆ ಜಿಲ್ಲಾ ಬೀದಿ ನಾಟಕ ಒಕ್ಕೂಟವನ್ನು ನೊಂದಣಿ ಮಾಡಿಸಬೇಕೆಂದು ತೀರ್ಮಾನಿಸಿದೆ.. 
ಆದ್ದರಿಂದ ವಿಜಯನಗರ ಜಿಲ್ಲೆಯಲ್ಲಿ ಸಕ್ರಿಯವಾಗಿ ಬೀದಿ ನಾಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಕಲಾತಂಡದ ಮುಖ್ಯಸ್ಥರುಗಳು, ಒಳಗೊಂಡಂತೆ ಜಿಲ್ಲೆಯಲ್ಲಿ ಇರುವಂತಹ ನೋಂದಾಯಿತ ಸಂಘ ಸಂಸ್ಥೆಗಳು ಟ್ರಸ್ಟ್ ಗಳು ದಿನಾಂಕ ೨೮ ಜೂನ್ ೨೦೨೬ ರಂದು ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಈ ಕುರಿತಂತೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುವುದು. ಇದರ ಜೊತೆಗೆ ದಿನಾಂಕ: ೨೮.೦೬.೨೦೨೬ರ ಒಳಗಾಗಿ ಕಲಾತಂಡದ ಮುಖ್ಯಸ್ಥರುಗಳು ಈ ಬೀದಿ ನಾಟಕ ಕಲಾ ತಂಡದಲ್ಲಿ ನೊಂದಾಯಿಸಿಕೊಳ್ಳಲು ಸಂಘಟನೆ ತಿಳಿಸಿದೆ . ಕಲಾ ತಂಡಗಳ ಒಕ್ಕೂಟದಲ್ಲಿ ನೊಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ೯೭೩೧೩೫೩೩೮೩ -.೯೧೬೪೭೦೦೦೩೬-.೯೭೪೨೪೧೮೪೮೮.-೯೬೩೨೦೭೧೭೭೩.
ಸದರಿ ಸಂದರ್ಭದಲ್ಲಿ ಗುಂಡಿ ರಮೇಶ್, ರಾಜ್ಯಪ್ರಶಸ್ತಿ ಪುರಸ್ಕೃತರು ಹಾಗೂ  ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರು,  ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಎಂ.ಮಹಾಂತೇಶ್ ರಂಗಭೂಮಿಯ ಕಲಾವಿದ ಹಗರಿಬೊಮ್ಮನಹಳ್ಳಿ ತಾಲೂಕು ಮಾಸಾರಿ ನೇಲುಕುದುರೆ-೨, ಬಿ.ಎಂ.ಯೋಗೇಶ್ ನಿನಾಸಂ ಪದವೀಧರರು ಮರಿಯಮ್ಮನಹಳ್ಳಿ, ಸರ್ದಾರ್ ಭಾರಿಗಿಡ ನೀನಾಸಂ ಪದವೀಧರರು ಮರಿಯಮ್ಮನಹಳ್ಳಿ, ಟಿ.ನವೀನ್ ಕುಮಾರ್ ಸಾನಿಹಳ್ಳಿ ಪದವೀದಾರರು ಮರಿಯಮ್ಮನಹಳ್ಳಿ, ಮೋಹನ್ ಶಶಿಧರ್ ಹಾಗೂ ಲಕ್ಕಿಮರದ ಕೊಟ್ರೇಶ್ ಡ್ರಾಮಾ ಡಿಪ್ಲೋಮಾ ಪದವೀಧರರು ಮರಿಯಮ್ಮನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್