ತಾಳಿಕೋಟೆ,ಜು,೨೭ : ತಾಲೂಕಿನ ಕಲಕೇರಿ ಗ್ರಾಮದ ತಾಂಡಾ ನಿವಾಸಿಗಳು ಟಂ ಟಂನಲ್ಲಿ ಕೆಲಸಕ್ಕೆ ತೆರಳುತಿದ್ದ ಸಮಯದಲ್ಲಿ ಟ್ಯ್ರಾಕ್ಟರ್-ಟಂಟಂ ನಡುವೆ ಹಡಗಿನಾಳ ಕ್ರಾಸ್ ಹತ್ತಿರ ನಡೆದ ಅಪಘಾತದಲ್ಲಿ ಓರ್ವನು ಸ್ಥಳದಲ್ಲಿಯೇ ಮೃತಪಟ್ಟಿದ್ದು ೫ ಜನ ಗಾಯಾಳುಗಳನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸುದ್ದಿ ತಿಳಿದ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಬೆಟ್ಟಿಯಾಗಿ ದೈರ್ಯ ತುಂಬಿದ್ದಾರೆ.
ರವಿವಾರರಂದು ಮುಂಜಾನೆ ೯ ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆಂದು ಟಂ ಟಂನಲ್ಲಿ ಕಲಕೇರಿ ತಾಂಡಾ ನಿವಾಸಿಗಳು ತೆರಳುತಿದ್ದ ಸಮಯದಲ್ಲಿ ನಡೆದ ಅಪಘಾತದಲ್ಲಿ ಓರ್ವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಇನ್ನೂಳೀದ ೫ ಜನರಲ್ಲಿ ಕೆಲವರ ಕೈ ಕಾಲುಗಳು ಮುರಿದು ಗಂಬೀರ ಸ್ವರೂಪದ ಗಾಯಗಳಾಗಿದ್ದು ಸ್ಥಳೀಯರು ವಿಜಯಪುರ ಶ್ರೀ ಭಾಗ್ಯವಂತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕೀತ್ಸೆ ಕೊಡಿಸಲು ಮುಂದಾಗಿದ್ದಾರೆ. ವಿಷಯ ಅರೀತು ತಕ್ಷಣ ಆಸ್ಪತ್ರೆಗೆ ಬೆಟ್ಟಿ ನೀಡಿದ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಗಾಯಾಳುಗಳನ್ನು ಸಂತೈಸಿ ಸಿದರಲ್ಲದೇ ಅವರಿಗೆ ದೈರ್ಯ ತುಂಬುವದರೊಂದಿಗೆ ಎಲ್ಲ ಗಾಯಾಳುಗಳಿಗೆ ಸೂಕ್ತ ಚಿಕೀತ್ಸೆ ನೀಡುವ ಕುರಿತು ವೈಧ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಸಹಾಯ ಹಸ್ತವನ್ನು ನೀಡಿದರು.
ಈ ಸಮಯದಲ್ಲಿ ಯಮನೂರ ಕುಲಕರ್ಣಿ, ಧರ್ಮು ಚವ್ಹಾಣ, ಸುರೇಶ ಚವ್ಹಾಣ, ಮೊದಲಾದವರು ಉಪಸ್ಥಿತರಿದ್ದರು.