LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಕಾಂಗ್ರೆಸ್​ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ಕಾಂಗ್ರೆಸ್​ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ. ಇಲ್ಲಿ ಯಾರೂ ಏಕನಾಥ್ ಶಿಂಧೆಗಳಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸದಾಶಿವನಗರದ ಬಳಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ನಾವು 136 ಸೀಟು ಪಡೆದು ಸರ್ಕಾರ ರಚಿಸಿದ್ದೇವೆ. ಸರ್ಕಾರ ಕೆಡವಬೇಕಾದರೆ ಅವರಿಗೆ 80 ಸೀಟುಗಳು ಬೇಕಾಗುತ್ತದೆ. ಆಪರೇಷನ್ ಕಮಲ ಮಾಡಿದ್ರೂ 60 ಮಂದಿ ಬೇಕು. ಬಿಜೆಪಿಯ ಎಂಟತ್ತು ಶಾಸಕರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆಪರೇಷನ್ ಕಮಲ ವರ್ಕೌಟ್ ಆಗಲ್ಲ. ಒಬ್ಬನೇ ಒಬ್ಬ ಕಾಂಗ್ರೆಸ್​ ಶಾಸಕ ಇವರಿಗೆ ಬಲಿಯಾಗಲ್ಲ. ಆಪರೇಷನ್ ಕಮಲ ಉದ್ಭವಿಸಲ್ಲ. 100, 500 ಕೋಟಿ‌ ಕೊಟ್ರೂ ಏನೂ‌ ಆಗುವುದಿಲ್ಲ ಎಂದು ಹೇಳಿದರು.


ಜಿಂದಾಲ್​ಗೆ ಭೂಮಿ ನೀಡಿದ ವಿಚಾರವಾಗಿ ಮಾತನಾಡಿ, ಭೂಮಿ ಕೊಟ್ಟವರು ಯಡಿಯೂರಪ್ಪ. ಮಾರುಕಟ್ಟೆ ಬೆಲೆಗೆ ಭೂಮಿ ನೀಡಲಾಗಿದೆ. ಚಾಣಕ್ಯ ವಿವಿಯಂತೆ ನಾವು ಮಾಡಿಲ್ಲ. ನಮ್ಮ ಪಾಲಿಸಿಯಂತೆಯೇ ಮಾಡಿದ್ದೇವೆ. ಇಂಡಸ್ಟ್ರಿ ಮಾಡಬೇಕಾದರೆ ಕೋಟಿ ರೂ. ಇತ್ತು ಅನ್ನಿ, ನಾವು ಇಂಡಸ್ಟ್ರಿಗೆ ಜಾಗ ಕೊಡ್ತೇವೆ. ಅವತ್ತಿನ ಮಾರ್ಕೆಟ್ ಬೆಲೆಯಂತೆ ಕೊಟ್ಟಿರುತ್ತೇವೆ. ಅದು ಯಾವಾಗಲೇ ಮಾಡಲಿ ರನ್ನಿಂಗ್ ಕಂಡೀಷನ್ ಇರುತ್ತೆ. ಹಾಗಾಗಿ ಜಿಂದಾಲ್​ಗೂ ಬೇರೆಯದಕ್ಕೂ ಸಂಬಂಧವಿಲ್ಲ. ಹೈಕೋರ್ಟ್ ನಿರ್ದೇಶ‌ನ ಕೊಟ್ಟಿದೆ. 2020ರ ಕ್ಯಾಬಿನೆಟ್ ತೀರ್ಮಾನ ಪಾಲನೆಗೆ ಹೇಳಿದೆ. ಆಗೇನು ನಾವು ಇದ್ವಾ?. ಎಲ್ಲಿಯೂ ನಾವು ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್