ತಾಳಿಕೋಟೆ : ಗ್ರಾಮೀಣ ಭಾಗದ ರೈತಾಪಿ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರವು ಹಲವಾರು ಯೋಜನೆಗಳನ್ನು ಹೊರತಂದಿದ್ದು ಇದಕ್ಕಾಗಿ ಸಾಕಷ್ಟು ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕು ಎಂದು ವಿಡಿಸಿಸಿ ಬ್ಯಾಂಕ್ ತಾಳಿಕೋಟೆ ಶಾಖೆ ಕ್ಷೇತ್ರಾಧಿಕಾರಿ ಆರ್ ಎಂ ಗುರಿಕಾರ ಹೇಳಿದರು.
ತಾಲೂಕಿನ ಹರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ೬೩ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿ ನನ್ನ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು ಎಂಟು ಸಹಕಾರಿ ಸಂಘಗಳಲ್ಲಿ ಹರನಾಳ ಸಂಘವು ಒಳ್ಳೆಯ ಸ್ಥಿತಿಯಲ್ಲಿದೆ. ಈ ಸಂಘವು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲು ಶೇರುದಾರರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆ.ಡಿ. ಅಂಗಡಿ ಅವರು ತಮ್ಮ ವಾರ್ಷಿಕ ವರದಿಯಲ್ಲಿ ಸಂಘವು ಪ್ರಸಕ್ತ ವರ್ಷದಲ್ಲಿ ೧,೨೩೩ ಸದಸ್ಯರನ್ನು ಹೊಂದಿದ್ದು, ೪.೪೪ ಲಕ್ಷ ನೀವು ಒಳ ಲಾಭವನ್ನು ಗಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಕೆ.ಹೆಚ್.ಪಾಟೀಲ ಅವರು ಮಾತನಾಡಿ ಇಂದಿನ ಸಭೆಯಲ್ಲಿ ಶೇರುದಾರರು ಸಂಘದ ಅಭಿವೃದ್ಧಿ ದೃಷ್ಟಿಯಿಂದ ನೀಡಿದ ಸಲಹೆ ನೀಡಿದ ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ನಿಂಗಪ್ಪ ನಾಗೂರ, ಹಣಮಂತ್ರಾಯ ಹೂಗಾರ, ಬಸವರಾಜ ಅಂಗಡಿ, ಅಲ್ಲಿಪಟೇಲ ಮಕಾಶಿ, ಮಲ್ಲಣ್ಣ ಗಬಸಾವಳಗಿ, ದುರ್ಗಪ್ಪ ದೊಡ್ಮನಿ, ಮಲ್ಲಣ್ಣ ಚಳ್ಳಗಿ, ಗಣ್ಯರಾದ ಬಿ.ಎಸ್. ಇಸಾಂಪೂರ, ಸಾಹೇಬಗೌಡ ಮಕಾಶಿ, ಶಿವರಾಜ ಗುಂಡಕನಾಳ,ದೇವರಾಜ ನಾಗೂರ, ಮೊಹಮ್ಮದ್ ಮಕಾಶಿ, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.