LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸಿಮೆಂಟ್ ಫ್ಯಾಕ್ಟರಿಗಳಿಂದ ಸಾರ್ವಜನಿಕರಿಗೆ ಅನಾನುಕೂಲತೆ;‌ ಲಕ್ಕನ್ ಸವಸುದ್ದಿ

ಗುರ್ಲಾಪುರ್ ‌ 
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬರುವ ಸಿಮೆಂಟ್ ಫ್ಯಾಕ್ಟರಿಗಳಿಂದ ಸಾರ್ವಜನಿಕರಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತಿದೆ. ಫ್ಯಾಕ್ಟರಿಯ ಮಾಲೀಕರು ಹಾಗೂ ಎಮ್ ಡಿ ಗಳು ಇತ್ತ ಕಡೆ ಗಮನಹರಿಸಿ ತಮ್ಮ ಫ್ಯಾಕ್ಟರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಡೆಗಟ್ಟಬೇಕು ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕನ್ ಸವಸುದ್ದಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಜಿಲ್ಲೆಯಲ್ಲಿ ಬರುವ ದಾಲ್ಮಿಯಾ, ರತ್ನಾ, ಕಾಟ್ವಾ, ಜೆಕೆ ಇನ್ನು ಹಲವು ಸಿಮೆಂಟ್ ಫ್ಯಾಕ್ಟರಿಗಳು ಹಾಗೂ ಮೂಡಲಗಿ ತಾಲೂಕಿನಲ್ಲಿ ಬರುವ ಸಿಮೆಂಟ್ ಫ್ಯಾಕ್ಟರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮನುಸಾರ ತಮಗೆ ಬರುವ ಆದಾಯದಲ್ಲಿ ಶೇಕಡ ರಷ್ಟು ಸಿಎಸ್ಆರ್ ಫಂಡ್ ಆದಾಯವನ್ನು ಸಾರ್ವಜನಿಕರ ಮೂಲಸೌಕರ್ಯಕ್ಕೆ ಬಳಸಬೇಕು. ರಸ್ತೆ, ಕುಡಿಯುವ ನೀರು, ಶಾಲಾ ಅಭಿವೃದ್ಧಿ, ಆರೋಗ್ಯ ಸೆಂಟರ್ ಇನ್ನೂ ಹಲವಾರು ಅಭಿವೃದ್ಧಿಗಳು ಆಗಿಲ್ಲ  ಎಂದರು.
ಯಾದವಾಡ, ಮೂಡಲಗಿ ರಸ್ತೆಗಳು ಸಿಮೆಂಟ್ ಗಾಡಿಗಳಿಂದ ಹಾಳಾಗಿವೆ. ಧೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ. ನಮ್ಮ ಕಲ್ಲನ್ನು ಪುಡಿಮಾಡಿ ಸಿಮೆಂಟ್ ಮಾಡಿ ದೇಶದ ತುಂಬಾ ಮಾರಾಟ ಮಾಡಿ ತಾವೇ ಅಭಿವೃದ್ಧಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂಡಲಗಿ ಭಾಗದಲ್ಲಿ ಅಭಿವೃದ್ಧಿ ಮರಿಚಿಕೆಯಾಗುತ್ತಿದೆ ಮುಂದಿನ ದಿನಗಳಲ್ಲಿ ನೀವು ಅಭಿವೃದ್ಧಿ ಮಾಡದಿದ್ದರೆ ರೈತರು ಯುವಕರು ಪ್ರಗತಿಪರ ಚಿಂತಕರು ಸೇರಿ ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. 
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕುʻ ರೈತ ಸಂಘದ ಅಧ್ಯಕ್ಷ ಹನುಮಂತ್ ಮುಗಳಖೋಡ, ಶಿವಾನಂದ ಮಡಿವಾಳ, ಸುಭಾಷ್ ಲೋಕಣ್ಣವರ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್