LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿನೆ ಸ್ಪರ್ಧೆ: ಮಕ್ಕಳ ಕೈಯಲ್ಲಿ ಹಸಿರು ಕ್ರಾಂತಿ

ಅಥಣಿ : ಇಂದು ಮಕ್ಕಳು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮೂಲಕ ಪರಿಸರದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಒಂದೊಂದು ಕುಂಡವು ಮಗುವಿನ ಶ್ರಮ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಪರಿಸರ ಪ್ರಜ್ಞೆ ಬೆಳೆಯುತ್ತದೆ" ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಅರಣ್ಯ ಅಧಿಕಾರಿ ಮಲ್ಲಪ್ಪ ತೇಲಿ ಅವರು ಅಭಿಪ್ರಾಯಪಟ್ಟರು.
ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ರಂದು "ತ್ಯಾಜ್ಯದಿಂದ ಅತ್ಯುತ್ತಮ - Best Out of Waste"_ಎಂಬ ವಿಶೇಷ ಸೃಜನಶೀಲ ಕುಂಡ ತಯಾರಿಕೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ "ತ್ಯಾಜ್ಯವನ್ನು ಕಡಿಮೆ ಮಾಡೋಣ - ಭೂಮಿಯನ್ನು ಹಸಿರಾಗಿಸೋಣ" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ 1 ರಿಂದ 5 ನೇ ತರಗತಿಯವರೆಗಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷ ಎಂದರು.
ಅನಂತರ ಸಂಸ್ಥೆಯ ಆಡಳಿತ ಅಧಿಕಾರಿ ಸಂತಾಒಷ ಬಡಕಂಬಿ ಮಟತನಾಡಿ ಮಕ್ಕಳಿಗೆ ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ನೀರಿನ ಕ್ಯಾನ್, ಎಣ್ಣೆಯ ಕ್ಯಾನ್, ಹಳೆಯ ಬಕೆಟ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಂದರ ಮತ್ತು ಉಪಯುಕ್ತವಾದ _ಗಿಡದ ಕುಂಡ_ ತಯಾರಿಸುವ ಸವಾಲನ್ನು ನೀಡಲಾಗಿತ್ತು. ಮಕ್ಕಳು ತಮ್ಮ ಕಲ್ಪನಾಶಕ್ತಿಯಿಂದ ಆ ಬಾಟಲಿಗಳಿಗೆ ಬಣ್ಣ ಹಚ್ಚಿ, ಪ್ರಾಣಿ-ಪಕ್ಷಿಗಳ ಆಕಾರ ನೀಡಿ, ಬಣ್ಣದ ಟೇಪ್ ಮತ್ತು ಇತರೆ ವಸ್ತುಗಳಿಂದ ಆಕರ್ಷಕವಾಗಿ ಅಲಂಕರಿಸಿದರು. ತಳಭಾಗದಲ್ಲಿ ನೀರು ಹರಿದು ಹೋಗಲು ರಂಧ್ರ ಮಾಡಿ, ಅದರಲ್ಲಿ ಮಣ್ಣು ತುಂಬಿ _ಪುದೀನಾ, ಮನಿ ಪ್ಲಾಂಟ್, ಅಲೋವೆರಾ, ಗುಲಾಬಿ, ಸೂರ್ಯಕಾಂತಿ_ ಸೇರಿದಂತೆ ವಿವಿಧ ಗಿಡಗಳನ್ನು ನೆಟ್ಟು ಶಾಲೆಗೆ ತಂದಿದ್ದು ಶ್ಲಾಘನೀಯ ಎಂದರು.
ಅನಂತರ ಪಾಲಕರ ಪ್ರತಿನಿಧಿ ಗೀತಾ ಮಡ್ಡಿ ಅವರು ಮಾತನಾಡಿ ವಿಶೇಷವಾಗಿ‌ಮಕ್ಕಳಲ್ಲಿ ಪರಿಸರ ಕಾಳಜಿ ಉಂಟು ಮಾಡುವ ಸ್ಪರ್ಧೆ ಆಯೋಜನೆ ವಿಶೇಷ ಎಂದರು, ಈ ವೇಳೆ ಮುಖ್ಯೊಪಾಧ್ಯಾಯ ಮಲ್ಲಿಕಾರ್ಜುನ‌ ನಿಗಡಿ, ಪಾಲಕರ ಪ್ರತಿನಿಧಿ ಬಸವರಾಜ ನಾವಿ ಸೇರಿದಂತೆ ಶಿಕ್ಷಕ ವೃಂದ, ಪೋಷಕರು ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ತಯಾರಿಸಿದ ಕುಂಡಗಳನ್ನು ಶಾಲಾ ಆವರಣದಲ್ಲಿ ಪ್ರದರ್ಶಿಸಿ "Green Gallery" ರೂಪಿಸಲಾಗಿತ್ತು. ಇದು ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಸಮಸ್ತ ಶಿಕ್ಷಕ ವೃಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್