LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

 ಸಹಾಯಕನಿಂದಲೇ ಸ್ವಾಮೀಜಿ ಬರ್ಬರವಾಗಿ ಕೊಲೆ

ಮೈಸೂರು: ಸಹಾಯಕನಿಂದಲೇ ಸ್ವಾಮೀಜಿ ಬರ್ಬರವಾಗಿ ಕೊಲೆಯಾದ ಘಟನೆ ನಗರದ ಸಿದ್ಧಾರ್ಥ ನಗರದಲ್ಲಿರುವ ಅನ್ನದಾನೇಶ್ವರ ಮಠದಲ್ಲಿ ಸೋಮವಾರ ನಡೆದಿದೆ. ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಸಹಾಯಕನಿಂದಲೇ ಕೊಲೆಯಾದವರು. ಅವರ ಸಹಾಯಕನಾಗಿದ್ದ ರವಿ (60) ಕೊಲೆ ಆರೋಪಿಯಾಗಿದ್ದು, ಹತ್ಯೆ ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಪಾನಮತ್ತನಾಗಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಜರ್​​ಬಾದ್ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸ್ವಾಮೀಜಿಯವರ ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದ್ದಾರೆ.


ಬುದ್ಧಿವಾದ ಹೇಳಿದ್ದರಿಂದ ಹುಲ್ಲು ಕತ್ತರಿಸುವ ಮಚ್ಚಿನಿಂದ ಸ್ವಾಮೀಜಿ ಮೇಲೆ ಸಹಾಕ ರವಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಪಾನಪತ್ತನಾಗಿ, ವಿಷ ಸೇವಿಸಿ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಎಂದು ಸ್ವಾಮೀಜಿ ಅವರ ಅಣ್ಣನ ಮಗ ಲೋಕೇಶ್ ಮಾಹಿತಿ ನೀಡಿದ್ದಾರೆ.


ಆರೋಪಿ ರವಿಯನ್ನು 2.5 ವರ್ಷದಿಂದ ಸ್ವಾಮೀಜಿ ಅವರ ನೋಡಿಕೊಳ್ಳಲು ನೇಮಕ ಮಾಡಲಾಗಿತ್ತು. ಟಿ ನರಸೀಪುರ ತಾಲೂಕಿನ ಹುಕ್ಕಲ್ಗೇರಿ ಗ್ರಾಮದ ರವಿ ನಂಬಿಕಸ್ಥನಾಗಿದ್ದ. ನಿನ್ನೆ ದುಡ್ಡು ಕೇಳಲು ಬಂದ ತನ್ನ ಹೆಂಡತಿಯನ್ನು ರವಿ ಹೊಡೆದಿದ್ದ. ಈ ಬಗ್ಗೆ ಸ್ವಾಮೀಜಿ ಬೈದು, ಬುದ್ಧಿವಾದ ಹೇಳಿದ್ದರು. ಇಂದು ಬೆಳಗ್ಗೆ 9.30 ಗಂಟೆಯಾದರೂ ಸಹಾಯಕ ತಿಂಡಿ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಆಗ ಅಕ್ಕ ಮತ್ತು ಮಗ ಸ್ವಾಮೀಜಿಗೆ ತಿಂಡಿ ತಂದಾಗ ಬರ್ಬರವಾಗಿ ಹತ್ಯೆ ಮಾಡಿರುವುದು ಗೊತ್ತಾಗಿದೆ. ಸ್ವಾಮೀಜಿ ಮೃತದೇಹದ ಪಕ್ಕದಲ್ಲೇ ವಿಷಸೇವಿಸಿ ರವಿ ಕುಳಿತಿದ್ದ. ಕೊಠಡಿ ರಕ್ತವಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ತಕ್ಷಣ ಪೊಲೀಸರು ಬಂದು ಅಸ್ವಸ್ಥನಾಗಿದ್ದ ರವಿಯನ್ನು ಆಸ್ಪತ್ರೆಗೆ ಸೇರಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್