LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

"ಹತ್ಯೆಯಾದ 29 ಮಾವೋವಾದಿ ಉಗ್ರರು ಹುತಾತ್ಮರು" ಸುಪ್ರೀಯಾ ಶ್ರೀನೇತ್ ಬಣ್ಣನೆಗೆ ಕಮಲ ಕಿಡಿ

ನವದೆಹಲಿ, ಏಪ್ರಿಲ್ 18: ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್  ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಛತ್ತೀಸ್​ಗಡದ ಕಾಂಕೇರ್​ನಲ್ಲಿ  ಮೊನ್ನೆ ಮಂಗಳವಾರ (ಏ. 16) 29 ಮಾವೋವಾದಿ ಉಗ್ರರು ಬಿಎಸ್​ಎಫ್ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದರು. ಸುಪ್ರಿಯಾ ಶ್ರೀನೇತ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದರು. ಈ ವೇಳೆ ಕಾರ್ಯಾಚರಣೆಯಲ್ಲಿ ಸತ್ತ ನಕ್ಸಲ್ ಉಗ್ರರನ್ನು ಸುಪ್ರಿಯಾ ಅವರು ಹುತಾತ್ಮರೆಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಕ್ತಾರೆಯ ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಜಾತಂತ್ರದ ಅವಹೇಳನವಾಗಿದೆ ಎಂದು ತಿರುಗೇಟು ನೀಡಿದೆ.

‘ಛತ್ತೀಸ್​ಗಡದ ಅಮಾಯಕ ಜನರ ರಕ್ತ ಹರಿಸಿದ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸುವ ಮೂಲಕ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಛತ್ತೀಸ್​ಗಡ ಜನತೆ, ಪೊಲೀಸ್ ಪಡೆ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಲೇವಡಿ ಮಾಡಿದ್ದಾರೆ. ಈ ಪವಿತ್ರ ನಾಡಿನಲ್ಲಿ ನಿಮ್ಮ ಆಗಮನ ಸ್ವೀಕಾರಾರ್ಹವಲ್ಲ,’ ಎಂದು ಛತ್ತೀಸ್​ಗಡ ಬಿಜೆಪಿ ಘಟಕ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ನಕ್ಸಲನ್ನು ಹುತಾತ್ಮರೆಂದ ಸುಪ್ರಿಯಾ ಶ್ರೀನೇತ್ ಹೇಳಿಕೆಯನ್ನು ಬಿಜೆಪಿ ನಾಯಕ ಶಹಜಾದ್ ಪೂನಾವಾಲ ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ಸಿಗರಿಂದ ಇಂಥದ್ದು ನಿರೀಕ್ಷಿತವೇ ಆಗಿದೆ ಎಂದಿದ್ದಾರೆ.

‘ಛತ್ತೀಸ್​ಗಡದಲ್ಲಿ ಬಹಳ ಮುಖ್ಯವಾದ ಕಾರ್ಯಾಚರಣೆ ಆಗಿದೆ. 29 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದು ನಿಜಕ್ಕೂ ದೊಡ್ಡ ಸಾಧನೆಯೇ. ಆದರೆ, ಕಾಂಗ್ರೆಸ್ ಪಕ್ಷದವರು ಆ ನಕ್ಸಲರನ್ನು ಹುತಾತ್ಮರೆಂದು ಬಣ್ಣಿಸಿ ಭದ್ರತಾ ಪಡೆಗಳನ್ನು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇದು ನಿರೀಕ್ಷಿತವೇ ಆದರೂ ಬಹಳ ಕ್ರೂರತನದಿಂದ ಕೂಡಿದ ಹೇಳಿಕೆ ಆಗಿದೆ,’ ಎಂದು ಬಿಜೆಪಿಯ ವಕ್ತಾರರೂ ಆಗಿರುವ ಶಹಜಾದ್ ಪೂನಾವಾಲ ಹೇಳಿದ್ದಾರೆ.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST