LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಕೊಪ್ಪಳ ನಗರಸಭೆ ಕಚೇರಿ ಸೇರಿ 5 ಕಡೆ ಲೋಕಾಯುಕ್ತ ದಾಳಿ

ಕೊಪ್ಪಳ, ಸೆಪ್ಟೆಂಬರ್ 16: ಕೊಪ್ಪಳ ನಗರಸಭೆ ಕಚೇರಿ ಸೇರಿ 5 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳ ಲೋಕಾಯುಕ್ತ ಡಿವೈಎಸ್​​ಪಿ ವಸಂತಕುಮಾರ ನೇತೃತ್ವದಲ್ಲಿ, ನಗರಸಭೆ ಜಿಇ ಸೋಮಲಿಂಗಪ್ಪ, ಕಂದಾಯ ಅಧಿಕಾರ ಉಜ್ಚಲ, ಗುತ್ತಿಗೆದಾರರಾದ ಶಕೀಲ ಪಟೇಲ್ (ನಗರಸಭೆ ಅಧ್ಯಕ್ಷನ ಸಹೋದರ), ಪ್ರವೀಣ ಕಂದಾರಿ ಮನೆಯ ಮೇಲೆ ಕೂಡ ದಾಳಿ ನಡೆದಿದೆ. 2023-24 ನೆಯ ಸಾಲಿನ ನಗರಸಭೆಯ ಅನುದಾನದಲ್ಲಿ ದುರ್ಬಳಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವ ಆರೋಪ ವ್ಯಕ್ತವಾಗಿತ್ತು. ಅರ್ಧಂಬರ್ಧ ಕಾಮಗಾರಿ, ಕೆಲ ಕಡೆ ಕಾಮಗಾರಿ ಮಾಡದೆ ಹಣ ಬಳಸಿರುವ ಆರೋಪ ಕೇಳಿಬಂದಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST