LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಮಂಗಳೂರಿನಿಂದ ಅಬುಧಾಬಿಗೆ ದಿನವೂ ಏರ್​ ಇಂಡಿಯಾ ಸಂಚಾರ

ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್​ಪ್ರೆಸ್ ನಿರ್ಧರಿಸಿದ್ದು, ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ವಿಮಾನಗಳು ಜುಲೈ 22 ರಿಂದ ಪ್ರತಿದಿನ ಕಾರ್ಯಾಚರಿಸಲಿವೆ.


ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್ - 1 ವಿಮಾನ ಸೇರಿ ನಿತ್ಯ 5 ವಿಮಾನಗಳು ಬೆಂಗಳೂರು - ಮಂಗಳೂರು ನಡುವೆ ಕಾರ್ಯಾಚರಿಸುತ್ತಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆ ಆಗಲಿದೆ.


ಏರ್ ಇಂಡಿಯಾ ಎಕ್ಸ್​ಪ್ರೆಸ್ 2 ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿಸುತ್ತಿದೆ. ಇದು ಜುಲೈ 22ರಿಂದ ಲಭ್ಯವಾಗಲಿದ್ದು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಈ ವಿಮಾನವು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಬುಧಾಬಿಯತ್ತ ಪ್ರಯಾಣ ಬೆಳೆಸಲಿದೆ.


ಬೆಂಗಳೂರಿಗೆ ಇನ್ನಷ್ಟು ವಿಮಾನ: ಆಗಸ್ಟ್ 1 ರಿಂದ ಬೆಂಗಳೂರು - ಮಂಗಳೂರು ಸೆಕ್ಟರ್​​ನಲ್ಲಿ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ಇನ್ನೊಂದು ವಿಮಾನ ಸೇವೆ ಆರಂಭಿಸಲಾಗುವುದು. ಮುಂಬೈ - ಮಂಗಳೂರು ಸೆಕ್ಟರ್​​ನಲ್ಲಿಯೂ ಏರ್ ಇಂಡಿಯಾ ಎಕ್ಸ್​ಪ್ರೆಸ್ ಮಧ್ಯಾಹ್ನದ ನಂತರದ ವಿಮಾನವನ್ನು ಆರಂಭಿಸಲಾಗವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST