LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಭಾರತ ಮತ್ತು ಇತರ ದೇಶಗಳ ಮೇಲೆ ಅಮೇರಿಕ ಪ್ರತಿಸುಂಕ

ನ್ಯೂಯಾರ್ಕ್​: ಅಮೆರಿಕದ ಸರಕುಗಳ ಮೇಲೆ ಭಾರತ ಮತ್ತು ಇತರ ದೇಶಗಳು ವಿಧಿಸುತ್ತಿರುವ ಹೆಚ್ಚಿನ ಸುಂಕದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಪದೇ ಪದೇ ಟೀಕಿಸುತ್ತಿದ್ದಾರೆ. ಇದೀಗ ಅವರು ಇಂದು (ಏಪ್ರಿಲ್​ 2ರಿಂದ) ಪ್ರತಿ ಸುಂಕವನ್ನು ಜಾರಿಗೆ ತರಲು ಯೋಚಿಸುತ್ತಿದ್ದಾರೆ.


ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ.100 ರಷ್ಟು ಸುಂಕ ವಿಧಿಸುವ ಹಾಗೇ ಇತರೆ ದೇಶಗಳು ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಕುರಿತು ಮಾತನಾಡಿರುವ ಶ್ವೇತಭವನ ಅಧಿಕಾರಿ, ಆ ರಾಷ್ಟ್ರಗಳಿಗೆ ಸರಕು ರಫ್ತು ಮಾಡುವುದು ಅಸಾಧ್ಯವಾಗಿದೆ ಎಂದಿದ್ದಾರೆ.


ಈ ಕುರಿತು ಮಾತನಾಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, "ಇದು ದುರದೃಷ್ಟಕರವಾಗಿದ್ದು, ಈ ದೇಶಗಳು ನಮ್ಮ ಮೇಲೆ ದೀರ್ಘಕಾಲದಿಂದ ಹೆಚ್ಚು ಒತ್ತಡ ಹೇರುತ್ತಿದ್ದು, ಅವರು ಅಮೆರಿಕನ್​ ಕಾರ್ಮಿಕರ ಬಗ್ಗೆ ತಿರಸ್ಕಾರವನ್ನು ಸ್ಪಷ್ಟಪಡಿಸಿದ್ದಾರೆ. ಈ ನ್ಯಾಯಸಮ್ಮತವಲ್ಲದ ವ್ಯಾಪಾರಿ ನೀತಿಯನ್ನು ಗಮನಿಸಿದಲ್ಲಿ, ಅಮೆರಿಕದ ಡೈರಿ ಉತ್ಪನ್ನಗಳ ಮೇಲೆ ಯುರೋಪಿಯನ್ ಒಕ್ಕೂಟ ಶೇ.50ರಷ್ಟು ಮತ್ತು ಅಮೆರಿಕದ ಅಕ್ಕಿಯ ಮೇಲೆ ಜಪಾನ್‌ ಶೇ.700 ರಷ್ಟು ಸುಂಕ ವಿಧಿಸಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ.100ರಷ್ಟು ಹಾಗೂ ಅಮೆರಿಕದ ಬೆಣ್ಣೆ ಮತ್ತು ಚೀಸ್ ಮೇಲೆ ಕೆನಡಾ ಶೇ.300 ಸುಂಕ ವಿಧಿಸಿದೆ" ಎಂದರು.


ಇದರಿಂದಾಗಿ ಅಮೆರಿಕದ ಉತ್ಪನ್ನಗಳನ್ನು ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಕಳೆದ ಹಲವು ದಶಕಗಳಿಂದ ಉದ್ಯಮದಿಂದ ಅಮೆರಿಕವನ್ನು ಅವರು ಹೊರಗಿಟ್ಟಿದ್ದಾರೆ ಎಂದು ಟೀಕಿಸಿದರು.


ಹಲವು ದೇಶಗಳು ಅಮೆರಿಕದ ಉತ್ಪನ್ನಗಳಿಗೆ ವಿಧಿಸಿರುವ ಸುಂಕವನ್ನು ತಿಳಿಸಿದ ಲೀವಿಟ್​, ಭಾರತ ವಿಧಿಸುತ್ತಿರುವ ಸುಂಕದ ಕುರಿತು ಒತ್ತಿ ಹೇಳಿದರು. ಇದು ಪ್ರತಿ ಸುಂಕ ವಿಧಿಸುವ ಸಮಯವಾಗಿದ್ದು, ಇದು ಅಮೆರಿಕ ಅಧ್ಯಕ್ಷರಿಂದ ಐತಿಹಾಸಿಕ ಬದಲಾವಣೆ ಮಾಡುವ ಸಮಯವಾಗಿದೆ. ಈ ಮೂಲಕ ಅಮೆರಿಕದ ಜನರಿಗೆ ಸರಿಯಾಗಿರುವ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಬುಧವಾರ ನಿರ್ಧಾರ ಮಾಡಲಾಗುವುದು ಎಂದರು.


ಈ ತಿಂಗಳ ಆರಂಭದಲ್ಲಿ ಕೂಡ ಟ್ರಂಪ್​, ಸದ್ಯದ ಸುಂಕವೂ ತಾತ್ಕಾಲಿಕವಾಗಿದ್ದು, ಸಣ್ಣದಾಗಿದೆ. ಆದರೆ, ಪ್ರಮುಖ ಸುಂಕವು ಪ್ರತಿಸುಂಕ ವಿಧಿಸುವಿಕೆಯಾಗಿದ್ದು, ಇದು ಏಪ್ರಿಲ್​ 2ರಿಂದ ಆರಂಭವಾಗಲಿದ್ದು, ಇದು ನಮ್ಮ ದೇಶಕ್ಕೆ ದೊಡ್ಡ ಬದಲಾವಣೆ ತರುತ್ತದೆ ಎಂದಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್