LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮೆಚ್ಚುಗೆಗೆ ಪಾತ್ರವಾದ ನಗ್ನಸತ್ಯ


       ಚಂದನವನದ ಅನುಭವಿ ತಂತ್ರಜ್ಘ ರಮೇಶ್ ಕಾಮತ್ ಗ್ಯಾಪ್ ನಂತರ ’ನಗ್ನಸತ್ಯ’ ಎಂಬ ಕೊಂಕಣಿ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

     ಕಿರಣ್ಮಯಿ ಪತಿಗೆ ಬೆಂಗಾವಲಾಗಿ ಆದಿತ್ಯ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಇತ್ತೀಚಿಗೆ  ಸಿನಿ ಪಂಡಿತರಿಗೆ ಚಿತ್ರರಂಗದ ಗಣ್ಯರಿಗೆ ಚಿತ್ರದ  ವಿಶೇಷ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು.

      ಹಿರಿಯ ನಟಿ ಪದ್ಮವಾಸತಿ ಮಾತನಾಡಿ "ಇಂತಹ ಚಿತ್ರಗಳು ಜನರಿಗೆ ತಲುಪಬೇಕು. ನಿರ್ದೇಶಕರು ಇದೇ ಕೊನೆ ಚಿತ್ರ ಎನ್ನುತ್ತಿದ್ದಾರೆ. ನೀವು ದಯವಿಟ್ಟು ನಿಲ್ಲಿಸಬೇಡಿ. ಮುಂದೆಯೂ ಇಂತಹುದೆ ಉತ್ತಮ ಚಿತ್ರಗಳನ್ನು ಕೊಡುತ್ತಾ ಇರಿ" ಎಂದರು. ನಟ,ನಿರ್ದೇಶಕ ಎಂ.ಡಿ.ಕೌಶಿಕ್, ಹಿರಿಯ ಪತ್ರಕರ್ತ ಸದಾಶಿವಶಣೈ ಸೇರಿದಂತೆ ಹಲವರಿಂದ ಸಿನಿಮಾ ಕುರಿತಂತೆ ಪ್ರಶಂಸೆಯ ನುಡಿಗಳು ಕೇಳಿಬಂದವು.

     ಮುಖ್ಯ ಪಾತ್ರದಲ್ಲಿ ಆದ್ಯಾನಾಯಕ್ ಲೋಕಾಯುಕ್ತರಾಗಿ ಗಣೇಶ್‌ಪ್ರಭು. ಉಳಿದಂತೆ ಗೋಪಿನಾಥ್‌ಭಟ್, ಆನಂದ್‌ನಗರಕರ್, ಗೋಪಿಭಟ್, ವಿಶ್ವನಾಥ್ ಕಿಣಿ ಹಾಗೂ ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ಶ್ರೀಸುರೇಶ್, ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ ನಾಗೇಶ್.ಎನ್, ಸೌಂಡ್ ಇಂಜಿನಿಯರ್ ಪ್ರವೀಣ್‌ಜೋಗಿ ಅವರದಾಗಿದೆ. ಕಳೆದ ವರ್ಷ ರಾಷ್ಟ್ರ ಪ್ರಶಸ್ತಿ ಪಡೆದ ’ಕಂದೀಲು’ ಚಿತ್ರದಲ್ಲಿ ಗುರುತಿಸಿಕೊಂಡಿದ್ದ

ತಂತ್ರಜ್ಞರು 'ನಗ್ನಸತ್ಯ'ದಲ್ಲಿ ಕೆಲಸ ಮಾಡಿರುವುದು  ವಿಶೇಷ.

     ಕೆಲವು ವರ್ಷಗಳ ಹಿಂದೆ ಭೂಪಾಲ್‌ದಲ್ಲಿ ಮಹಿಳೆ ಮೇಲೆ ಶೋಷಣೆ ಮಾಡಿದ ಸುದ್ದಿಯ ಒಂದು ಎಳೆಯನ್ನು ತೆಗೆದುಕೊಂಡು ಚಿತ್ರಕತೆ ಸಿದ್ದಪಡಿಸಲಾಗಿದೆ. ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿ ಹೆಣ್ಣುಮಗಳು ಹಿಂಸೆಗೆ ಗುರಿಯಾಗುತ್ತಾಳೆ. ಆಕೆ ಮೂರು ಅಂಗಗಳಿಗೂ ಹೋದರೂ ನ್ಯಾಯ ಸಿಗುವುದಿಲ್ಲ. ಮುಂದೆ ಇದರ ವಿರುದ್ದ ಹೋರಾಡಿ, ಸಮಾಜಕ್ಕೆ ಯಾವ ಎಚ್ಚರಿಕೆ ಕೊಡುತ್ತಾಳೆ ಎಂಬುದನ್ನು ಕುತೂಹಲದ ಮೂಲಕ ತೋರಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಸಿಂಕ್ ಸೌಂಡ್‌ದಲ್ಲಿ ಚಿತ್ರೀಕರಣ ನಡೆಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್